ಮಂಡ್ಯ(ಸೆ.01): ಇಡಿ ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಶನಿವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಈಗಿನ ಪ್ರಕರಣವಲ್ಲ. ಬಹಳ ಹಿಂದಿನದ್ದು. ಅಕ್ರಮವಾಗಿ ಹಣ ಸಮಗ್ರಹಿಸಿದ ಬಗ್ಗೆ ತನಿಖೆಯಾಗುತ್ತಿದೆ. ತನಿಖೆ ಕೆವಲ ಶಿವಕುಮಾರ್‌ ಅವರಿಗೆ ಮಾತ್ರವಲ್ಲ. ದೇಶದಲ್ಲಿ ಯಾರು ಅಕ್ರಮ ಎಸಗಿದ್ದಾರೋ ಅವರ ಮೇಲೆ ನಡೆಯುತ್ತಿದೆ. ಅದೇ ರೀತಿ ಡಿ.ಕೆ.ಶಿವಕುಮಾರ್‌ ಅವರ ಮೇಲೆಯೂ ನಡೆಯುತ್ತಿದೆ. ಶಿವಕುಮಾರ್‌ ಕೂಡ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. ಇದನ್ನು ರಾಜಕೀಯಗೊಳಿಸಬಾರದು ಎಂದರು.

ಅಮಿತ್‌ ಶಾ ತಿಳುವಳಿಕೆ ಪ್ರಶ್ನಿಸುವ ಹಾಗಿಲ್ಲ: ಮಾಧು ಸ್ವಾಮಿ

ಒಂದು ಸರ್ಕಾರ ರಚನೆಯಾಗುವಾಗ ಸಚಿವ ಸ್ಥಾನದ ಅಕಾಂಕ್ಷಿಗಳು ತುಂಬಾ ಜನ ಇರುತ್ತಾರೆ. ಪಕ್ಷದ ಹಿರಿಯರು ಅಳೆದು ತೂಗಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಈ ಬಗ್ಗೆ ಕೆಲವರಿಗೆ ಸ್ವಲ್ಪದಿನ ಮನಸ್ಸಲ್ಲಿ ನೋವಿರುತ್ತದೆ ಎಂದರು.

ಮಾಜ ಸಚಿವ ಪುಟ್ಟರಾಜು ಬಿಜೆಪಿ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿವಿಎಸ್‌, ನಮ್ಮ ಪಕ್ಷಕ್ಕೆ ಬರಲು ಮನಸ್ಸಿದ್ದರೆ ಸ್ವಾಗತ ಮಾಡುತ್ತೇವೆ. ಬರುವುದಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ತಮಿಳುನಾಡು ಮೂಲದ ವಿಮಾ ಕಂಪನಿಯಿಂದ ಗ್ರಾಹಕರಿಗೆ ದೋಖಾ..!