ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಇರೋದಕ್ಕೆ ಡಿಕೆಶಿ ವಿಷಾದ
* ಬಾಗಲಕೋಟೆ ಜಿಲ್ಲೆಯ ಪ್ರವಾಸ ಮುಂದುವರೆಸಲು ಡಿಕೆಶಿ ನಿರ್ಧಾರ
* ಮಾದೇಗೌಡರ ಅಗಲಿಕೆಯಿಂದ ಓರ್ವ ಹೋರಾಟಗಾರನನ್ನ ಕಳೆದುಕೊಂಡ ಕರುನಾಡು
* ಮಾದೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದ ಡಿಕೆಶಿ
ಬಾಗಲಕೋಟೆ(ಜು.18): ಹೆಲಿಕಾಪ್ಟರ್ ಅನುಮತಿ ಸಿಕ್ಕರೂ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಗಮಿಸಿಲ್ಲ ಹೀಗಾಗಿ ಜಿ. ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಹೀಗಾಗಿ ಜಿ.ಮಾದೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಮುಂದೆ 11ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂದು(ಭಾನುವಾರ) ಜಿಲ್ಲೆಯ ಜಮಖಂಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಜಿ.ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಇರೋದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೀಗಾಗಿ ಪೂರ್ವ ನಿಗದಿಯಂತೆ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.
ಜಿ. ಮಾದೇಗೌಡ ನಿಧನ: ಡಿಕೆಶಿ ಬಾಗಲಕೋಟೆ ಪ್ರವಾಸ ಅರ್ಧಕ್ಕೆ ಮೊಟಕು
ವಿದ್ಯಾರ್ಥಿ ದೆಸೆಯಿಂದ 45 ವರ್ಷಗಳ ಮಾದೇಗೌಡರ ಜೊತೆ ಒಡನಾಟ ಹೊಂದಿದ್ದೆ, ಅವರ ಸೇವೆ ಅನನ್ಯವಾಗಿದೆ. ಅವರ ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲಾ ನಡೆದಿದ್ದೇವೆ. ಜಿ.ಮಾದೇಗೌಡರ ಸಾವಿನಿಂದ ಓರ್ವ ಹೋರಾಟಗಾರನನ್ನ ನಾಡು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದ್ದಾರೆ.
ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಯಿಂದ ಮಂಡ್ಯಕ್ಕೆ ತೆರಳಲು ಡಿಕೆಶಿ ಸಜ್ಜಾಗಿದ್ದರು. ಆದರೆ, ಹೆಲಿಕಾಪ್ಟರ್ ಅನುಮತಿ ಸಿಕ್ಕರೂ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಗಮಿಸಲಿಲ್ಲ.