Asianet Suvarna News

ಜಿ. ಮಾದೇಗೌಡ ನಿಧನ: ಡಿಕೆಶಿ ಬಾಗಲಕೋಟೆ ಪ್ರವಾಸ ಅರ್ಧಕ್ಕೆ ಮೊಟಕು

* ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಡಿ.ಕೆ. ಶಿವಕುಮಾರ್‌
* ಬಾಗಲಕೋಟೆ ಜಿಲ್ಲಾ ಕೇಂದ್ರ ಸ್ಥಾನದ ಕಾರ್ಯಕ್ರಮಗಳೂ ರದ್ದು
* ನಿನ್ನೆ ಜಮಖಂಡಿಯಲ್ಲಿ ವಾಸ್ತವ್ಯ ಹೂಡಿದ್ದ ಡಿಕೆಶಿ

DK Shivakumar Bagalkot District Tour cancel due to G Madegowda Passed Away grg
Author
Bengaluru, First Published Jul 18, 2021, 9:37 AM IST
  • Facebook
  • Twitter
  • Whatsapp

ಬಾಗಲಕೋಟೆ(ಜು.18): ಮಾಜಿ ಸಂಸದ ಜಿ. ಮಾದೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾಗಲಕೋಟೆ ಜಿಲ್ಲಾ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. 

ಇಂದು(ಭಾನುವಾರ) ಬೆಳಿಗ್ಗೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕಾರ್ಯಕ್ರಮದಲ್ಲಿ ಮಾತ್ರ ಭಾಗಿಯಾದ ಬಳಿಕ ಡಿ.ಕೆ. ಶಿವಕುಮಾರ್‌ ಅವರು ಮಂಡ್ಯಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಂಸದ ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ  ಬಾಗಲಕೋಟೆ ಜಿಲ್ಲಾ ಪ್ರವಾಸವನ್ನ ಡಿಕೆಶಿ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. 

ಮಾಜಿ ಸಂಸದ ಮಾದೇಗೌಡ ನಿಧನ : ಮಂಡ್ಯ ನಿವಾಸದ ಬಳಿ ಅಂತಿಮ ದರ್ಶನ

ಇಂದು ಮಧ್ಯಾಹ್ನ ಆಯೋಜನೆಯಾಗಿದ್ದ ಡಿಕೆಶಿ ಬಾಗಲಕೋಟೆ ಜಿಲ್ಲಾ ಕೇಂದ್ರ ಸ್ಥಾನದ ಕಾರ್ಯಕ್ರಮಗಳೂ ಕೂಡ ರದ್ದಾಗಿವೆ. ನಿನ್ನೆ ಜಮಖಂಡಿಯಲ್ಲಿ ವಾಸ್ತವ್ಯ ಹೂಡಿದ್ದ ಡಿ.ಕೆ ಶಿವಕುಮಾರ್ ಇಂದು ಬೆಳಗ್ಗೆ 9 ಗಂಟೆಗೆ ತೇರದಾಳ ಮತಕ್ಷೇತ್ರದ ಬನಹಟ್ಟಿ ನಗರದ ಭದ್ರಣ್ಣವರ ಕಲ್ಯಾಣ ಮಂಟಪದಲ್ಲಿ ನೇಕಾರರ ಕುಂದು ಕೊರತೆಗಳ ಕುರಿತು ಸಂವಾದ ನಡೆಸಿ ಮಂಡ್ಯಕ್ಕೆ ಹೊರಡಲಿದ್ದಾರೆ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios