ಕುಮಾರಸ್ವಾಮಿಗೆ ಸೋಲಿನ ರುಚಿ ತೋರಿಸಿದ್ದರು ಡಿಕೆಶಿ

ಚೊಚ್ಚಲ ಚುನಾವಣೆಯಲ್ಲಿಯೇ ಮಾಜಿ ಪ್ರಧಾನಿ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರಿಗೆ ಡಿಕೆ ಶಿವಕುಮಾರ್ ಸೋಲಿನ ರುಚಿ ತೋರಿಸಿದ್ದರು. 

DK Shivakumar Defeated HD Kumaraswamy 1999 Election

ರಾಮನಗರ [ಮಾ.12]: 1999 ಚುನಾವಣೆಯಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಯಾದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡರ ಪುತ್ರ, ಅಗಷ್ಟೇ ರಾಜಕೀಯ ರಂಗಕ್ಕೆ ಧುಮುಕಿದ್ದ ಎಚ್.ಡಿ. ಕುಮಾರಸ್ವಾಮಿ ಜನತಾ ದಳದ ಅಭ್ಯರ್ಥಿಯಾಗಿದ್ದರು. 

ತಮ್ಮ ಚೊಚ್ಚಲ ವಿಧಾನಸಭೆಯ ಚುನಾವಣೆಯಲ್ಲಿಯೇ ಎಚ್‌ಡಿಕೆ ಸೋಲು ಅನುಭವಿಸಿದರೆ, ಸತತ ಮೂರನೇ ಬಾರಿಗೆ ಜಯಶಾಲಿಯಾದ ಶಿವಕುಮಾರ್‌ಗೆ ಮಾಜಿ ಪ್ರಧಾನಿಯೊಬ್ಬರ ಪುತ್ರನನ್ನು ಪರಾಜಯ ಗೊಳಿಸಿದ ಶ್ರೇಯ ಸಂದಿತು. ರಾಜಕೀಯ ವೈರಿಗಳಾದ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಮತ್ತೆ ಮುಖಾ ಮುಖಿಯಾಗಿದ್ದು 2002 ರ ಕನಕಪುರ ಲೋಕಸಭಾ ಕ್ಷೇತ್ರ ಉಪ ಚುನಾ ವಣೆಯಲ್ಲಿ. ಇಲ್ಲಿ ಗೆಲವು ಸಾಧಿ ಸಿದ ದೇವೇಗೌಡ ಮತ್ತು ಶಿವಕುಮಾರ್ ನಡುವಿನ ರಾಜಕೀಯ ವೈರತ್ವ ಮುಂದುವರೆಯಿತು. 

2004 ರಲ್ಲಿ ಡಿ.ಕೆ.ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆಯಾ ದರು. ಆದರೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಸ್ಥಾನ ಸಿಗಲಿಲ್ಲ. 2006 ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ಪತ್ರಕರ್ತೆ ತೇಜಸ್ವಿನಿಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ನಿದ್ದೆಗೆಡಿಸುತ್ತಿದ್ದದ್ದು ಮಾತ್ರ ಡಿಎಂವಿ!..

ಸಾತನೂರು ಕ್ಷೇತ್ರ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರ ಕ್ಷೇತ್ರಕ್ಕೆ ವಲಸೆ ಬಂದು ಸಿಂಧ್ಯಾ ಕಟ್ಟಿದ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008 ರಲ್ಲಿ  ಜೆಡಿಎಸ್ ನ ಡಿ.ಎಂ.ವಿಶ್ವನಾಥ್ ಎದುರು ಗೆದ್ದ ಡಿ. ಕೆ.ಶಿವಕುಮಾರ್ , 2013 ರಲ್ಲಿ ಪಿಜಿಆರ್ ಸಿಂಧ್ಯಾ ಅವರನ್ನು ಮಣಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು. ೨೦೧೮ರ ಚುನಾವಣೆಯಲ್ಲಿ ಜೆಡಿಎಸ್ ನ ನಾರಾಯಣಗೌಡ ವಿರುದ್ಧ 79909  
ಮತಗಳ ಅಂತರದಿಂದ ಗೆಲವು ಸಾಧಿಸಿದ ಡಿ.ಕೆ.ಶಿವಕುಮಾರ್, ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರ ದಲ್ಲಿ ಸಚಿವ ಸ್ಥಾನ ಅಲಂಕರಿಸಿದರು. ಹೀಗೆ ರಾಜಕೀಯ ವೈರಿಗಳು ಹಾಗೂ ಅಡೆತಡೆಗಳನ್ನು ಮೆಟ್ಟಿ ಪ್ರಬಲ ನಾಯಕರಾಗಿರುವ ಡಿ.ಕೆ.ಶಿವಕುಮಾರ್, ಇದೀಗ ಕೆಪಿಸಿಸಿ ಸಾರಥ್ಯ ವಹಿಸಿದ್ದಾರೆ. 

Latest Videos
Follow Us:
Download App:
  • android
  • ios