Asianet Suvarna News Asianet Suvarna News

ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡ್ ಸಂತ್ರಸ್ತರಿಗೆ 8 ಟ್ರಕ್‌ಗಳಲ್ಲಿ ಅಗತ್ಯ ವಸ್ತುಗಳ ರವಾನೆಗೆ ಡಿಕೆಶಿ, ರೆಡ್ಡಿ ಚಾಲನೆ!

ಪ್ರಕೃತಿ ಮುಂದೆ ಮಾನವರ ಆಟ ನಡೆಯುವುದಿಲ್ಲ, ಮಳೆ ಪ್ರವಾಹ ಸಂಕಷ್ಟದಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಇದ್ದಾರೆ, ಸಹಾಯ, ಸಹಕಾರ ನೀಡುವುದು ಪ್ರತಿಯೊಬ್ಬರ ಮಾನವೀಯತೆ ಧರ್ಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

DK Shivakumar and ramalinga reddy drove 8 trucks of essential items to the victims of wayanad in BTM assembly constituency gvd
Author
First Published Aug 10, 2024, 7:08 PM IST | Last Updated Aug 10, 2024, 7:08 PM IST

ಬೆಂಗಳೂರು (ಆ.10): ಬಿಟಿಎಂ ವಿಧಾನಸಭಾ ಶಾಸಕರ ಕಛೇರಿಯಲ್ಲಿ ವಯನಾಡ್ ಮಳೆ ಪ್ರವಾಹದಲ್ಲಿ ಸಂತ್ರಸ್ತರಿಗೆ ಅಗತ್ಯವಾಗಿರುವ ದಿನಸಿ, ಅಗತ್ಯ ವಸ್ತುಗಳನ್ನು 8 ಟ್ರಕ್ ಗಳಲ್ಲಿ ರವಾನೆ ಕಾರ್ಯಕ್ರಮ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮತ್ತು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಹಸಿರು ನಿಶಾನೆ ತೋರಿ ಬೀಳ್ಕೊಡುಗೆ ನೀಡಿದರು, ಸ್ಥಳೀಯ ಕಾಂಗ್ರೆಸ್ ಮುಖಂಡರು, ಮಾಜಿ ಪಾಲಿಕೆ ಸದಸ್ಯರುಗಳು ಪಾಲ್ಗೊಂಡಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಪ್ರಕೃತಿ ಮುಂದೆ ಮಾನವರ ಆಟ ನಡೆಯುವುದಿಲ್ಲ, ಮಳೆ ಪ್ರವಾಹ ಸಂಕಷ್ಟದಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಇದ್ದಾರೆ, ಸಹಾಯ, ಸಹಕಾರ ನೀಡುವುದು ಪ್ರತಿಯೊಬ್ಬರ ಮಾನವೀಯತೆ ಧರ್ಮ. ರಾಜ್ಯ ಸರ್ಕಾರದಿಂದ ಕೇರಳ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ಸರ್ಕಾರ ಸಹಾಯ ಮಾಡುತ್ತಿದೆ. ಸಚಿವರಾದ ರಾಮಲಿಂಗಾರೆಡ್ಡಿ ರವರ ನೇತೃತ್ವದಲ್ಲಿ 8ಟ್ರಕ್ ಗಳಲ್ಲಿ ಅಗತ್ಯ ಇರುವ ವಸ್ತುಗಳು ರವಾನೆಯಾಗುತ್ತಿದೆ.

ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳ ಸಹಕಾರವಿದ್ದಾಗ ಸರ್ಕಾರ ಎಂತಹ ಕಷ್ಟ ಬಂದರು ಸುಲಭವಾಗಿ ಪರಿಹರಿಸಬಹುದು ಎಂದು ಹೇಳಿದರು. ಸಚಿವರಾದ ರಾಮಲಿಂಗಾರೆಡ್ಡಿರವರು ಮಾತನಾಡಿ  ಕೇರಳ ವೈಯನಾಡುವಿನಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಇದ್ದಾರೆ, ಇಂತಹ ಸಮಯದಲ್ಲಿ ರಾಜ್ಯದ ಪಕ್ಕದ ರಾಜ್ಯವಾದ ನಾವು ಸಹಕಾರ ನೀಡಬೇಕು.

52 ಕೋಟಿ ಆಸ್ತಿ ಘೋಷಿಸಿದ್ದರೂ ಸ್ವಂತ ಮನೆ ಇಲ್ಲ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ನಟ ಚೇತನ್!

ರಕ್ತದ ಬಣ್ಣ ಕೆಂಪು ಅದರಲ್ಲಿ ಜಾತಿ, ಭೇದಬಾವವಿಲ್ಲ ನಾವು ಎಲ್ಲರು ಮನುಷ್ಯರೆ, ಮಾನವೀಯತೆ ಗುಣಗಳನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಇದರಿಂದ ಒಬ್ಬರ ಕಷ್ಟ, ಸುಖ ಎಲ್ಲವು ಅರ್ಥವಾಗುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಅದೆ ದೇವರ ಕೆಲಸ ಮಾಡಿದಂತೆ ಎಂದು ಹೇಳಿದರು.

Latest Videos
Follow Us:
Download App:
  • android
  • ios