ತುಮಕೂರು (ಅ.05): ಬೆಂಗಳೂರಿನ ಆರ್‌.ಆರ್‌.ನಗರದಲ್ಲಿ ಡಿ.ಕೆ.ರವಿ ಪತ್ನಿ ಕುಸುಮಾ ಅವರು ಚುನಾವಣೆಗೆ ಸ್ಪರ್ಧಿಸಿದರೆ ಆಕೆಯ ವಿರುದ್ಧ ಪ್ರಚಾರ ಮಾಡುವುದಾಗಿ ಡಿ.ಕೆ.ರವಿ ತಾಯಿ ಗೌರಮ್ಮ ಮತ್ತೆ ಗುಡುಗಿದ್ದಾರೆ.

"

ಬೆಂಗಳೂರಿನಲ್ಲಿ ಕುಸುಮಾ ಅವರು ಕಾಂಗ್ರೆಸ್‌ ಸೇರ್ಪಡೆ ಬಳಿಕ ಮಾತನಾಡಿದ ಗೌರಮ್ಮ, ಆಕೆ ನನ್ನ ಮಗ ಡಿ.ಕೆ.ರವಿ ಹೆಸರು ಬಳಸಿಕೊಂಡು ಪ್ರಚಾರ ಮಾಡಬಾರದು. ಬೇಕಾದರೆ ತಂದೆ ಹನುಮಂತರಾಯಪ್ಪನ ಹೆಸರು ಬಳಸಿಕೊಂಡು ಪ್ರಚಾರ ಮಾಡಲಿ ಎಂದರು.

ಮಗನ ಹೆಸರು, ಫೋಟೋ ಬಳಸಿದರೆ ಬೆಂಕಿ ಹಾಕ್ತೀವಿ: ಕುಸುಮಾಗೆ ಡಿ.ಕೆ.​ರವಿ ತಾಯಿ ಎಚ್ಚರಿ​ಕೆ ...

ಮಗ ಸತ್ತಾಗಿನಿಂದ ಒಮ್ಮೆಯೂ ಕೂಡ ಆಕೆ ನಮ್ಮನ್ನು ಬಂದು ನೋಡಲಿಲ್ಲ. ತನಿಖೆಗೂ ಸಹಕಾರ ನೀಡಲಿಲ್ಲ. ಹೀಗಿರುವಾಗ ಆಕೆ ನನ್ನ ಮಗನ ಹೆಸರನ್ನು ಬಳಸಬಾರದು ಎಂದು ತಾಕೀತು ಮಾಡಿದರು. ಆಕೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಕ್ಕ ಬಳಿ ಆಕೆ ವಿರುದ್ಧವಾಗಿ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದರು.

"

ಈ ಹಿಂದೆ ಕೂಡ ಗೌರಮ್ಮ ತಮ್ಮ ಮಗ ಡಿ.ಕೆ.ರವಿ ಹೆಸರನ್ನು ಚುನಾವಣೆಯಲ್ಲಿ ಬಳಸದಂತೆ ಕುಸುಮಾಗೆ ಎಚ್ಚರಿಕೆ ನೀಡಿದ್ದರು. ಆಕೆ, ಮಗನಿಗೆ ಬಂದ ಹಣದಲ್ಲಿ ನಮಗೆ ಸ್ವಲ್ಪ ಹಣವನ್ನು ನೀಡಲಿಲ್ಲ. ನಾವು ಹೇಗಿದ್ದೇವೆ ಅಂತ ಒಮ್ಮೆ ಕೂಡ ನಮ್ಮ ಆರೋಗ್ಯ ವಿಚಾರಿಸಲಿಲ್ಲ. ಹೀಗಾಗಿ ನನ್ನ ಮಗನ ಹೆಸರು ಬಳಸಬಾರದು ಎಂದು ಕಣ್ಣೀರು ಹಾಕಿದ್ದರು. ಇದೀಗ ಪುನಃ ತಮ್ಮ ಮಗನ ಹೆಸರು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.