ಕೋಲಾರ (ಅ.14):  ಬೆಂಗಳೂರಿನ ರಾಜರಾಜೇಶ್ವರಿ (ಆರ್‌.ಆರ್‌ ನಗರ) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮ ಅವರು ಸ್ಪರ್ಧಿಸಿದ್ದು ನಾಮಪತ್ರ ಸಲ್ಲಿಸಿದ್ದಾರೆ.

ಈ ನಿಟ್ಟಿನಲ್ಲಿ ಅವರ ಗೆಲುವಿಗಾಗಿ ಕೋಲಾರದ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. 

ಕುಸುಮಾ ನಾಮಪತ್ರ ಸಲ್ಲಿಕೆ : ಪತಿ ಹೆಸರಿನ ಕಲಂನಲ್ಲಿ ಭರ್ತಿ ಮಾಡಿದ್ದೇನು..?

ಇವರ ಗೆಲುವಿಗಾಗಿ ತಾಯಿ ಕೋಲಾರಮ್ಮ ಆಶೀರ್ವಾದ ಮಾಡಲಿ ಎಂದು ರಾಜ್ಯ ಡಿ.ಕೆ. ರವಿ ಅಭಿಮಾನಿಗಳ ಸಂಘದಿಂದ   ಕೋಲಾರಮ್ಮ ತಾಯಿಗೆ ವಿಶೇಷ ಪೂಜೆ ಮಾಡಲಾಗಿದೆ. 

ಕೋಲಾರದಲ್ಲಿ ಹಲವು ವರ್ಷಗಳ ಕಾಲ ಡಿಕೆ ರವಿ ಅವರು ಕಾರ್ಯ ನಿರ್ವಹಿಸಿದ್ದರು. ಇಲ್ಲಿ ಹಲವು ಜನರ ಅಭಿಮಾನ ಗಳಿಸಿದ್ದು, ಅವರ ಪತ್ನಿ ಗೆಲವಿಗಾಗಿ ಕೋಲಾರದಲ್ಲಿ ಪೂಜೆ ಮಾಡಲಾಗಿದೆ. 

ಆದರೆ ಡಿಕೆ ರವಿ ಅವರ ತಾಯಿ ಗೌರಮ್ಮ ತಮ್ಮ ಪುತ್ರನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು.