ತುಮಕೂರು ಜಿಲ್ಲೆಯಲ್ಲಿ ವೈವಿಧ್ಯಮಯ ಮತಗಟ್ಟೆಗಳು
ಶೇ.100ರಷ್ಟುಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಮತದಾರರಿಗೆ ಮತದಾನ ಮಾಡಲು ಆಸಕ್ತಿ ಮೂಡಿಸುವ ಕಾರಣಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಿ.ಪಂ. ಸಿಇಓ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತುಮಕೂರು : ಶೇ.100ರಷ್ಟುಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಮತದಾರರಿಗೆ ಮತದಾನ ಮಾಡಲು ಆಸಕ್ತಿ ಮೂಡಿಸುವ ಕಾರಣಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಿ.ಪಂ. ಸಿಇಓ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿರುವ ವಿವಿಧ ವೈವಿಧ್ಯತೆಗಳಿಗೆ ಅನುಗುಣವಾಗಿ ಪಾವಗಡ ಸೌರಶಕ್ತಿ ವಿದ್ಯುತ್, ಕಲ್ಲೂರು ವೈ.ಎನ್. ಹೊಸಕೋಟೆ ಸೀರೆ, ಮಧುಗಿರಿ ಏಕಶಿಲಾ ಬೆಟ್ಟ, ಅಡಿಕೆ, ಮಾವು ಮತ್ತು ಹಲಸು ಅಲಂಕೃತ ಮತಗಟ್ಟೆ, ಕೋಲಾಟ, ಸೋಮನಕುಣಿತ, ಮಾರ್ಕೋನಳ್ಳಿ ಡ್ಯಾಂ, ಕುಣಿಕಲ್ ಕೆರೆ, ಬೋರನಕಣಿವೆ ಡ್ಯಾಂಗಳ ಥೀಮ್‌ಗಳ ಅನುಸಾರ ಜಿಲ್ಲೆಯಲ್ಲಿರುವ ನುರಿತ ಚಿತ್ರಕಲಾ ಶಿಕ್ಷಕರು ಹಾಗೂ ಸ್ಥಳಿಯ ಕಲಾವಿದರ ಮೂಲಕ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖೀ ಮಾದರಿ ಮತಗಟ್ಟೆ, 2 ಯುವ ಮತಗಟ್ಟೆಅಧಿಕಾರಿ/ ಸಿಬ್ಬಂದಿಗಳ ಮಾದರಿ ಮತಗಟ್ಟೆ, ಒಂದು ವಿಶೇಷ ಚೇತನ ಮತಗಟ್ಟೆಅಧಿಕಾರಿ/ ಸಿಬ್ಬಂದಿಗಳ ಮಾದರಿ ಮತಗಟ್ಟೆಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ, ಜಿಲ್ಲೆಯಾದ್ಯಂತ 331 ವಿಶೇಷ ಥೀಮ್‌ಗಳನ್ನು ಒಳಗೊಂಡ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿನ ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ, ಇಳಿಜಾರು ವ್ಯವಸ್ಥೆ, ವಿಶೇಷ ಚೇತನ ಮತದಾರರಿಗೆ ಬ್ರೈಲ್ ಲಿಪಿ, ಬೂತಕನ್ನಡಿ, ವೀಲ್‌ಚೇರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಶೇಷ ಚೇತನ ಮತ್ತು ಹಿರಿಯ ನಾಗರೀಕರಿಗೆ ಉಚಿತ ವಾಹನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಅವಶ್ಯಕತೆ ಇದ್ದಲ್ಲಿ 1950 ಉಚಿತ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮೇ 10ರಂದು ನಡೆಯುವ ಮತದಾನದಲ್ಲಿ ಜಿಲ್ಲೆಯ ಎಲ್ಲಾ ಮತದಾರ ಬಂಧುಗಳು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಲು ಸಿಇಒ ಮನವಿ ಮಾಡಿದ್ದಾರೆ.
ಇವಿಎಂ ಮತದಾನ
ಬೆಂಗಳೂರು (ಮೇ.10) : ರಾಜ್ಯ ವಿಧಾಸಭಾ ಚುನಾವಣೆಯ ಮತದಾನದ ದಿನ ಬಂದೇ ಬಿಟ್ಟಿದೆ. ಸಾರ್ವಜನಿಕರು ಸಹ ಮತದಾನಕ್ಕೆ ಉತ್ಸುಕರಾಗಿದ್ದಾರೆ. ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಹಲವು ವ್ಯವಸ್ಥೆ ಮಾಡಿದೆ. ವೃದ್ಧರು, ಅಂಗವಿಕಲರಿಗೆ ಮತದಾನಕ್ಕೆ ಕ್ಯಾಬ್ ವ್ಯವಸ್ಥೆ, ಮತಗಟ್ಟೆಮಾಹಿತಿ, ಅಭ್ಯರ್ಥಿಗಳ ವಿವರ, ಮತಗಟ್ಟೆಸುತ್ತಲಿನ ಸೌಲಭ್ಯಗಳು ಸೇರಿದಂತೆ ಮತದಾರಸ್ನೇಹಿ ಕ್ರಮಗಳನ್ನು ಕೈಗೊಂಡಿದೆ.
ಬಹಳಷ್ಟುಮಂದಿಗೆ ತಮ್ಮ ಮತಗಟ್ಟೆಎಲ್ಲಿದೆ? ಅಲ್ಲಿಗೆ ಹೇಗೆ ಹೋಗಬೇಕು? ಮತ ಚಲಾವಣೆಗೆ ಏನೆಲ್ಲಾ ದಾಖಲೆ ಇರಬೇಕು ಎಂಬುದು ಸೇರಿದಂತೆ ಕೆಲ ಪ್ರಮುಖ ಮಾಹಿತಿಗಳ ಕೊರತೆ, ಗೊಂದಲಗಳು ಸಾಮಾನ್ಯವಾಗಿದೆ. ಈ ಗೊಂದಲ ಪರಿಹರಿಸುವ ಹಾಗೂ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಮತದಾರರ ಸ್ನೇಹಿಯಾದ ‘ಚುನಾವಣಾ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ.
ಇಂದು ನಂದಿಬೆಟ್ಟ, ಜೋಗ ಹಲವು ಪ್ರವಾಸಿ ತಾಣಗಳು ಬಂದ್: ಮತದಾನ ಮಾಡಿದ್ರಷ್ಟೇ ಪ್ರವೇಶ!
ಸಾರ್ವಜನಿಕರು ಮೊಬೈಲ್‌ನಲ್ಲಿ ಈ ಚುನಾವಣಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಮತಗಟ್ಟೆವಿವರ, ಲೊಕೇಶನ್, ನ್ಯಾವಿಗೇಷನ್ ಆದಿಯಾಗಿ ಮತದಾನಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಈ ಆ್ಯಪ್‌ನಲ್ಲಿ ನೋಡಬಹುದಾಗಿದೆ. ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಹೋಮ್ ಪೇಜ್‌ನಲ್ಲಿ ಮತದಾರರು ವೋಟರ್ ಐಡಿ(ಎಪಿಕ್ ಕಾರ್ಡ್) ಸಂಖ್ಯೆ ನಮೂದಿಸಿದರೆ ಈ ಮಾಹಿತಿಗಳು ಲಭ್ಯವಾಗಲಿದೆ.
ಏನೆಲ್ಲಾ ಮಾಹಿತಿ ಲಭ್ಯ?
- ಮತಗಟ್ಟೆವಿವರ, ಲೊಕೇಷನ್, ನ್ಯಾವಿಗೇಷನ್
- ಅಭ್ಯರ್ಥಿಗಳ ವಿವರ
- ಮತದಾನದ ವೇಳಾ ಪಟ್ಟಿ
- ಮತಗಟ್ಟೆಸಮೀಪದ ಆಸ್ಪತ್ರೆ, ಪೊಲೀಸ್ ಠಾಣೆ, ಪಾರ್ಕಿಂಗ್ ವ್ಯವಸ್ಥೆ
- ಮತಗಟ್ಟೆಬಳಿ ಕ್ಯೂನಲ್ಲಿರುವ ಜನರ ಸಂಖ್ಯೆ