ಕೊರಟಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಾವೇಶ : 50 ಸಾವಿರ ಕಾರ್ಯಕರ್ತರ ನಿರೀಕ್ಷೆ

ರಾಜೀವ ಭವನ ಲೋಕಾರ್ಪಣೆ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಾವೇಶಕ್ಕೆ ಬೃಹತ್‌ ಸುಂದರ ವೇದಿಕೆಯೇ ಸಿದ್ಧಗೊಂಡಿದೆ. ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮವಾಗಿ ನಡೆಯುತ್ತಿರುವ ಸಮಾವೇಶಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಆಗಮನವು ಮತ್ತೊಂದು ಮೆರುಗು ಪಡೆದಿದೆ.

District Congress Convention in Koratagere: Expectation of 50 thousand workers snr

  ಕೊರಟಗೆರೆ :  ರಾಜೀವ ಭವನ ಲೋಕಾರ್ಪಣೆ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಾವೇಶಕ್ಕೆ ಬೃಹತ್‌ ಸುಂದರ ವೇದಿಕೆಯೇ ಸಿದ್ಧಗೊಂಡಿದೆ. ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮವಾಗಿ ನಡೆಯುತ್ತಿರುವ ಸಮಾವೇಶಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಆಗಮನವು ಮತ್ತೊಂದು ಮೆರುಗು ಪಡೆದಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರದ ಶಾಸಕ ಮತ್ತು ಮಾಜಿ ಶಾಸಕರ ಜೊತೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ 50 ಸಾವಿರಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಇತಿಹಾಸದಲ್ಲಿ ಪ್ರಥಮ ಸಲ ನಡೆಯುತ್ತಿರುವ ಐತಿಹಾಸಿಕ ಕಾಂಗ್ರೆಸ್‌ ಜಿಲ್ಲಾ ಸಮಾವೇಶವು ಮಾ.5ರ ಭಾನುವಾರ ನಡೆಯಲಿದೆ. ಬೃಹತ್‌ ಸಮಾವೇಶದಲ್ಲಿ 40ಸಾವಿರಕ್ಕೂ ಅಧಿಕ ಕಾರ್ಯಕರ್ತರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೇದಿಕೆಯ ಸುತ್ತಮುತ್ತಲು ಕಾಂಗ್ರೆಸ್‌ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರ ಕಟೌಟ್‌ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ಜಿಲ್ಲಾ ಮಟ್ಟದ ಕಾಂಗ್ರೆಸ್‌ ಸಮಾವೇಶವು 2023ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಪಟ್ಟಣದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ತುಮಕೂರು ಜಿಲ್ಲಾಮಟ್ಟದ ಐತಿಹಾಸಿಕ ಕಾಂಗ್ರೆಸ್‌ ಸಮಾವೇಶವು 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ. ರಾಷ್ಟ್ರೀಯ ಅಧ್ಯಕ್ಷರ ಆಗಮನದಿಂದ ತುಮಕೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಲಿದೆ. ರಾಜೀವ ಭವನದ ಲೋಕಾರ್ಪಣೆ ಮತ್ತು ಸಮಾವೇಶವು ಕೊರಟಗೆರೆ ಕ್ಷೇತ್ರದ ಕಾರ್ಯಕರ್ತರಿಗೆ ಮತ್ತಷ್ಟುಶಕ್ತಿ ನೀಡಲಿದೆ.

242 ಬೂತ್‌ಗಳಿಗೆ 500 ವಾಹನ ವ್ಯವಸ್ಥೆ:

ರಾಜೀವ ಭವನ ಉದ್ಘಾಟನೆ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಾವೇಶದ ಯಶಸ್ವಿಗಾಗಿ ಶಾಸಕರ ನೇತೃತ್ವದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ 242 ಬೂತ್‌ಗಳಿಗೆ ಕಾರ್ಯಕರ್ತರ ಆಗಮನಕ್ಕಾಗಿ 500ಕ್ಕೂ ಅಧಿಕ ಬಸ್‌ ಮತ್ತು ಕಾರಿನ ಸೌಲಭ್ಯ ಕಲ್ಪಿಸಲಾಗಿದೆ. ಸಮಾವೇಶ ಯಶಸ್ವಿಗಾಗಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ತಂಡ ಸ್ಥಳದಲ್ಲಿಯೇ ಮೊಕ್ಕಾಂ ಹೊಡುವ ಮೂಲಕ ಸಮಾವೇಶ ಯಶಸ್ವಿಗಾಗಿ ಸಕಲ ಸಿದ್ಧತೆಯನ್ನು ನಡೆಸಿದ್ದಾರೆ.

ರಾಷ್ಟ್ರ ಮತ್ತು ರಾಜ್ಯ ನಾಯಕರ ಆಗಮನ:

ಐತಿಹಾಸಿಕ ಕಾಂಗ್ರೆಸ್‌ ಜಿಲ್ಲಾ ಸಮಾವೇಶಕ್ಕೆ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯದ ಉಸ್ತುವಾರಿ ಸುರ್ಜೆವಾಲ, ವಿರೋಧ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ವಿರೋದ ಪಕ್ಷದ ನಾಯಕ ಹರಿಪ್ರಸಾದ್‌, ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಮಾಜಿ ಸಂಸದ ಎಚ್‌.ಮುನಿಯಪ್ಪ, ಸೇರಿದಂತೆ ತುಮಕೂರು ಜಿಲ್ಲೆಯ ಹಾಲಿ, ಮಾಜಿ ಶಾಸಕರು ಸೇರಿದಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ.

ಅಧ್ಯಕ್ಷರಿಂದ ಬೃಹತ್‌ ರೋಡ್‌ ಶೋ:

ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹಾಗೂ ರಾಜ್ಯ ನಾಯಕರು ಬೈಪಾಸ್‌ ರಸ್ತೆಯಿಂದ ಸಮಾವೇಶದ ವೇದಿಕೆಯವರೆಗೆ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ಶೋ ವೇಳೆ ಸಾವಿರಾರು ಜನ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರಿಗೆ ಹೂವಿನ ಸ್ವಾಗತ ಕೊರಲಿದ್ದಾರೆ. ಕೊರಟಗೆರೆ ಪಟ್ಟಣ ಮತ್ತು ಬೈಪಾಸ್‌ ರಸ್ತೆಯ ಎರಡು ಬದಿಯಲ್ಲಿ ಕಾಂಗ್ರೆಸ್‌ ಪಕ್ಷದ ಬಾವುಟ, ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಬ್ಯಾನರ್‌-ಕಟೌಟ್‌ಗಳು ರಾರಾಜಿಸುತ್ತಿವೆ.

ರಾಜೀವ ಭವನ ಲೋಕಾರ್ಪಣೆ ವåತ್ತು ಜಿಲ್ಲಾ ಕಾಂಗ್ರೆಸ್‌ ಸಮಾವೇಶವು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕೊರಟಗೆರೆಯಲ್ಲಿ ಇತಿಹಾಸ ಸೃಷ್ಟಿಸಲಿದೆ. ಕೊರಟಗೆರೆ ಕ್ಷೇತ್ರಕ್ಕೆ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಆಗಮನವು ನನಗೆ ಮತ್ತು ಕಾರ್ಯಕರ್ತರಿಗೆ ಖುಷಿತಂದಿದೆ. ಬೃಹತ್‌ ಸಮಾವೇಶಕ್ಕೆ ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದಿಂದ 50 ಸಾವಿರಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ.

ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ 30 ವರ್ಷದ ನಂತರ ರಾಷ್ಟ್ರೀಯ ಅಧ್ಯಕ್ಷರಾಗಿ ನಮ್ಮ ಜಿಲ್ಲೆಗೆ ಆಗಮನವು ನಮಗೆಲ್ಲ ಖುಷಿ ತಂದಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಲು ಸಕಲ ಸಿದ್ಧತೆ ನಡೆದಿದೆ. ಕೊರಟಗೆರೆ ಪಟ್ಟಣದಲ್ಲಿ ನಡೆಯುವ ರಾಜೀವ ಭವನ ಉದ್ಘಾಟನೆ ಮತ್ತು ಕಾಂಗ್ರೆಸ್‌ ಜಿಲ್ಲಾ ಬೃಹತ್‌ ಸಮಾವೇಶವು ಯಶಸ್ವಿ ಆಗಲಿದೆ.

Latest Videos
Follow Us:
Download App:
  • android
  • ios