ಭಿಕ್ಷುಕರಿಂದ ಕೊಪ್ಪಳದಲ್ಲಿ ಕೊರೋನಾ ಮಹಾಸ್ಫೋಟ?
ಜಿಲ್ಲಾಡಳಿತಕ್ಕೆ ಶುರುವಾಗಿದೆ ಈಗ ಹೈ ಟೆನ್ಶನ್| 1173 ನಂಬರಿನ ಸೋಂಕಿತ, ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾದವರು. ಮುಂಬೈನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದವರು| ಮೇ. 12ರಂದು ಸಂಜೆ 6.30ಕ್ಕೆ ಹುಬ್ಬಳ್ಳಿಗೆ ಟ್ರಕ್‌ನಲ್ಲಿ ಬರುತ್ತಾರೆ| ಮೇ. 14ರಂದು ಹುಬ್ಬಳ್ಳಿಯಿಂದ ಗದಗಕ್ಕೆ ಟಾಟಾ ಏಸ್‌ನಲ್ಲಿ ಬರುತ್ತಾರೆ| ಅದೇ ಟಾಟಾ ಏಸ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಕೊಪ್ಪಳಕ್ಕೆ ತೆರಳುತ್ತಾರೆ|
ಕೊಪ್ಪಳ(ಮೇ.20): ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟಕ್ಕೆ ಕಾರಣವಾಗ್ತಾರಾ ಭಿಕ್ಷುಕರು? ಇಂತಹದ್ದೊಂದು ಭಯ ಕೊಪ್ಪಳ ಜಿಲ್ಲಾಡಳಿತಕ್ಕೆ ಶುರುವಾಗಿದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ. ಮುಂಬೈನಿಂದ ಬಂದಿರುವ ಕೊರೋನಾ ಪಾಸಿಟಿವ್ ವ್ಯಕ್ತಿ ಪ್ರಯಾಣಿಸಿದ ಕೆಎಸ್ಸಾಆರ್‌ಟಿಸಿ ಬಸ್ಸಿನಲ್ಲಿ 9 ಜನ ಭಿಕ್ಷುಕರು ಕೊಪ್ಪಳದಿಂದ ಕುಷ್ಟಗಿಗೆ ತೆರಳಿದ್ದಾರೆ.
"
ಅಷ್ಟೇ ಅಲ್ಲ, ಕುಷ್ಟಗಿಯಲ್ಲಿ ಸುತ್ತಾಡಿ ಭಿಕ್ಷೆ ಬೇಡಿದ್ದಾರೆ. ಇವರು ಯಾರಾರಯರ ಮನೆಗೆ ಹೋಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಒಂದೊಮ್ಮೆ ಈ ಭಿಕ್ಷುಕರ ವರದಿ ಪಾಸಿಟಿವ್ ಬಂದರೆ ಕೊಪ್ಪಳದಲ್ಲಿ ಕೊರೋನಾ ಮಹಾಸ್ಫೋಟವೇ ಆಗಲಿದೆ.
ಆಗಿದ್ದೇನು?
1173 ನಂಬರಿನ ಸೋಂಕಿತ, ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾದವರು. ಮುಂಬೈನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದವರು, ಮೇ. 12ರಂದು ಸಂಜೆ 6.30ಕ್ಕೆ ಹುಬ್ಬಳ್ಳಿಗೆ ಟ್ರಕ್‌ನಲ್ಲಿ ಬರುತ್ತಾರೆ. ಮೇ. 14ರಂದು ಹುಬ್ಬಳ್ಳಿಯಿಂದ ಗದಗಕ್ಕೆ ಟಾಟಾ ಏಸ್‌ನಲ್ಲಿ ಬರುತ್ತಾರೆ. ಅದೇ ಟಾಟಾ ಏಸ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಕೊಪ್ಪಳಕ್ಕೆ ತೆರಳುತ್ತಾರೆ. ಕೊಪ್ಪಳದಿಂದ, ಕುಷ್ಟಗಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ ವ್ಯಕ್ತಿಯನ್ನು ವಿಚಾರಿಸಿದಾಗ ಮುಂಬೈನಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಆ ವ್ಯಕ್ತಿಯನ್ನು ಬಸ್ (ನಂ. ಕೆಎ-17-ಎಫ್-569)ನಲ್ಲಿ ಕುಷ್ಟಗಿಗೆ ಕಳುಹಿಸಿದ್ದಾರೆ. ಈ ಬಸ್ಸಿನಲ್ಲಿ 9 ಭಿಕ್ಷುಕರು ಸೇರಿದಂತೆ 26 ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರು ಪ್ರಯಾಣಿಸಿದ್ದರು. ಈಗ ಮುಂಬೈನಿಂದ ಬಂದ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದ ಭಿಕ್ಷುಕರು ಸೇರಿದಂತೆ ಎಲ್ಲರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಪಿ-1173 ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸಂಖ್ಯೆ 90ಕ್ಕೇರಿದಂತಾಗಿದೆ.
ಲಾಕ್‌ಡೌನ್: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್ ಪೊಲೀಸ್ ಠಾಣೆ, ನಿತ್ಯ ದಾಸೋಹ
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು, ಪಿ. 1173 ವ್ಯಕ್ತಿ ಪ್ರಯಾಣಿಸಿದ ಬಸ್ಸಿನಲ್ಲಿ ಭಿಕ್ಷುಕರು ಸೇರಿದಂತೆ 26 ಸಹ ಪ್ರಯಾಣಿಕರು ಇದ್ದಾರೆ. ಇವರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಬಂದವರೆಲ್ಲರ ಸ್ವಾಬ್‌ನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.