Asianet Suvarna News Asianet Suvarna News

ಕಾವೇರಿ ನದಿ ಕಲುಷಿತ ತಡೆಗೆ ಕಾರ್ಯಯೋಜನೆ : ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್‌

  • ಜಿಲ್ಲೆಯ ವ್ಯಾಪ್ತಿಯಲ್ಲಿ ಕಾವೇರಿ ನದಿ ಕಲುಷಿತವಾಗುವುದನ್ನು ತಪ್ಪಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕಾರ್ಯ
  • ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್‌
District administration work For Protect Cauvery river says Kodagu DC Satish snr
Author
Bengaluru, First Published Oct 26, 2021, 1:55 PM IST

 ಕುಶಾಲನಗರ (ಅ.26):  ಜಿಲ್ಲೆಯ ವ್ಯಾಪ್ತಿಯಲ್ಲಿ ಕಾವೇರಿ ನದಿ (Cauvery river) ಕಲುಷಿತವಾಗುವುದನ್ನು ತಪ್ಪಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ (DC) ಡಾ. ಬಿ.ಸಿ. ಸತೀಶ್‌ (Dr BC satish) ತಿಳಿಸಿದ್ದಾರೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನದಿ (River) ಮತ್ತು ಜಲಮೂಲಗಳ ಸಂರಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಗಮನಹರಿಸಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಕಲುಷಿತ ನೀರು ನೇರವಾಗಿ ನದಿಗೆ ಹರಿಯದಂತೆ ಸ್ಥಳೀಯ ಆಡಳಿತ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿರುವುದಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ. ಎನ್‌. ಚಂದ್ರಮೋಹನ್‌ (N Chandramohan) ತಿಳಿಸಿದ್ದಾರೆ. ಸಮಿತಿ ಗೌರವ ಸಲಹೆಗಾರ ಚೆಯ್ಯಂಡ ಸತ್ಯ ಗಣಪತಿ, ಚೈತನ್ಯ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವ ತಂಡದಲ್ಲಿದ್ದರು.

1 ನಿಮಿಷ ತಡವಾದ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ತಾಯಿ ಕಾವೇರಿ

ಬೇಡಿಕೆಗಳು: ಕೊಡಗು (Kodagu) ಜಿಲ್ಲೆಯಲ್ಲಿ ನದಿ ತಟದ ಸರ್ವೆ ಕಾರ್ಯ ನಡೆಸಿ ನದಿ ಗಡಿ ಗುರುತು ಮಾಡುವುದು, ನದಿ ತಟದಲ್ಲಿರುವ ಅಕ್ರಮ ಕಟ್ಟಡಗಳ (Illegal Buildings) ತೆರವು ಗೊಳಿಸುವುದು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದು, ಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹ ಆಗುವ ಕಲುಷಿತ ತ್ಯಾಜ್ಯಗಳನ್ನು ನದಿಗೆ ನೇರವಾಗಿ ಹರಿಯದಂತೆ ವೈಜ್ಞಾನಿಕ ರೀತಿಯಲ್ಲಿ ಕಾರ್ಯಯೋಜನೆ ರೂಪಿಸುವುದು.

 ಕಾವೇರಿ ಹಾರಂಗಿ ನದಿ (Harangi River) ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ನದಿ ನಿರ್ವಹಣೆ ಕಾಮಗಾರಿ ಮತ್ತು ತಡೆಗೋಡೆ ನಿರ್ಮಾಣ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಕೊಡಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನದಿ ಸ್ವಚ್ಛತಾ ಕಾರ್ಯಗಳಿಗೆ ಸಿಎಸ್‌ಆರ್‌ (CSR) ಫಂಡ್‌ ಬಳಸಿ ನದಿ ಸ್ವಚ್ಛತೆ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಜೀವನದಿ ಕಾವೇರಿ ಮತ್ತು ಹಾರಂಗಿ ನದಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೊಡಗು (Kodagu) ಜಿಲ್ಲೆಯಲ್ಲಿ ಓರ್ವ ನೋಡೆಲ್‌ ಅಧಿಕಾರಿಯನ್ನು ನಿಯೋಜಿಸಿ ಕಾರ್ಯಕ್ರಮಗಳನ್ನು ರೂಪಿಸುವುದು, ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ನದಿ ನೀರನ್ನು ಶುದ್ಧೀಕರಿಸಿ ಶುದ್ಧ ಕುಡಿಯುವ ನೀರು ಬಳಕೆಗೆ ಯೋಜನೆ ರೂಪಿಸುವುದು.

 ಜಿಲ್ಲೆಯಲ್ಲಿ ಹರಿಯುವ ನದಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ನದಿಯ ಹೆಸರಿನ ಫಲಕ ಹಾಕುವುದರೊಂದಿಗೆ ಪ್ರವಾಸಿಗರಿಗೆ ನದಿ ಸಂರಕ್ಷಣೆ ಸ್ವಚ್ಛತೆ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಸಂಬಂಧ ಪ್ರತಿ ಗ್ರಾಮ ಪಂಚಾಯಿತಿ (Grama panchayat) ಪಟ್ಟಣ ಪಂಚಾಯಿತಿ (pattana panchayat) ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು, ಜಿಲ್ಲೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ (Plastic) ಬಳಕೆ ನಿರ್ಬಂಧ ಕುಡಿಯುವ ನೀರಿನ ಬಾಟಲ್‌ ಗೆ ಕಡಿವಾಣ ಹಾಕುವುದು.

 ನದಿ ಸಂರಕ್ಷಣೆಗೆ ಕಾನೂನು ರೂಪಿಸಿ ರಿವರ್‌ ಪೊಲೀಸ್‌ ವಿಭಾಗ (Police) ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಕೊಡಗು ಜಿಲ್ಲೆಯ ಪಟ್ಟಣಗಳಲ್ಲಿ ನೆನೆಗುದಿಗೆ ಬಿದ್ದಿರುವ ಕೋಟ್ಯಂತರ ರು. ಯೋಜನೆಯ ಯುಜಿಡಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು, ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಪ್ರವಾಹ ದಿಂದ ನಷ್ಟಕ್ಕೊಳಗಾದ ಜಿಲ್ಲೆಯ ಬೆಳೆಗಾರರು, ರೈತಾಪಿ ವರ್ಗಕ್ಕೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು, ನದಿ, ಜಲ ಮೂಲಗಳ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೂಲಕ ಪ್ರತಿ ವರ್ಷ ನದಿ ಹಬ್ಬ ವಿಶೇಷ ಕಾರ್ಯಕ್ರಮ ಆಯೋಜಿಸುವುದು, ಕಾವೇರಿ ನೀರು ಬಳಕೆ ಮಾಡುವ ಬೆಂಗಳೂರು ಮತ್ತಿತರ ಪಟ್ಟಣಗಳಲ್ಲಿ ಕಾವೇರಿ ಸೆಸ್‌ ಸಂಗ್ರಹಿಸಿ ಈ ಮೊತ್ತವನ್ನು ಕೊಡಗು ಜಿಲ್ಲೆಯ ಕಾವೇರಿ ಅಭಿವೃದ್ಧಿಗೆ ಬಳಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸುವುದು.

Follow Us:
Download App:
  • android
  • ios