ಸರ್ಕಾರಿ ಶಾಲೆಗಳಿಗೆ ಉಚಿತ ಟಿವಿ, ಲ್ಯಾಪ್ ಟಾಪ್ ವಿತರಣೆ

ಟಿ.ನರಸಿಪುರ ತಾಲೂಕಿನ ಬನ್ನೂರು ಹೋಬಳಿಯ ಮಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಎಬಿಇನ್ ಬೆವ್ ಬ್ರೆವರಿ ಕಂಪನಿಯಿಂದ ಸ್ವಧಾರ್ ಯೋಜನೆ ಅಡಿಯಲ್ಲಿ ಹಲವು ಗ್ರಾಮಗಳಲ್ಲರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಗ್ರಾಮೀಣ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಉಚಿತವಾಗಿ ಎಲ್ ಇಡಿ ಟಿ.ವಿ. ಹಾಗೂ ಲ್ಯಾಪ್ ಟಾಪ್ ಉಪಕರಣಗಳನ್ನು ವಿತರಿಸಿತು.

Distribution of free TV, laptop to government schools snr

  ಬನ್ನೂರು : ಟಿ.ನರಸಿಪುರ ತಾಲೂಕಿನ ಬನ್ನೂರು ಹೋಬಳಿಯ ಮಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಎಬಿಇನ್ ಬೆವ್ ಬ್ರೆವರಿ ಕಂಪನಿಯಿಂದ ಸ್ವಧಾರ್ ಯೋಜನೆ ಅಡಿಯಲ್ಲಿ ಹಲವು ಗ್ರಾಮಗಳಲ್ಲರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಗ್ರಾಮೀಣ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಉಚಿತವಾಗಿ ಎಲ್ ಇಡಿ ಟಿ.ವಿ. ಹಾಗೂ ಲ್ಯಾಪ್ ಟಾಪ್ ಉಪಕರಣಗಳನ್ನು ವಿತರಿಸಿತು.

ಹೋಬಳಿಯ ವಡ್ಡರಕೊಪ್ಪಲು ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಬಿಇನ್ ಬೆವ್ ಬ್ರೆವರಿ ಕಂಪನಿ ವತಿಯಿಂದ ವಡ್ಡರಕೊಪ್ಪಲು, ಮಲಿಯೂರು, ನಂಜಾಪುರ, ಬಿ. ಬೆಟ್ಟಹಳ್ಳಿ, ಕುಂತನಹಳ್ಳಿ. ಸಿ.ವಿ. ಕೊಪ್ಪಲು ಗ್ರಾಮಗಳಲ್ಲಿರುವ ಶಾಲೆಗಳಿಗೆ ಉಚಿತವಾಗಿ ಎಲ್.ಇಡಿ ಟಿ.ವಿ ಹಾಗೂ ಲ್ಯಾಪ್ ಟಾಪ್ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಮಕ್ಕಳಿಂದ ಹೇಳಿಸುವ ಮೂಲಕ ಚಾಲನೆ ನೀಡಿದರು.

ಎಬಿಇನ್ ಬೆವ್ ಬ್ರೆವರಿ ಕಂಪನಿಯ ಉಪ ಅಧೀಕ್ಷಕ ಮಹೇಶ್ ಮಾತನಾಡಿ, ಇಂದಿನ ಶಿಕ್ಷಣಕ್ಕೂ ನಮ್ಮ ಕಾಲದ ಶಿಕ್ಷಣಕ್ಕೂ ವ್ಯತ್ಯಾಸವನ್ನು ಕಾಣ ಬಹುದಾಗಿದೆ, ನಮ್ಮ ಕಾಲದಲ್ಲಿ ಬಳಪ, ಸ್ಲೇಟ್ ನ್ನು ಕೊಟ್ಟು ಶಿಕ್ಷಕರು ಕಲಿಸುತ್ತಿದ್ದರು. ಆದರೆ ಇಂದು ಶಿಕ್ಷಕರು ಕಾಲ ಬದಲಾದಂತೆ ಶಿಕ್ಷಣದಲ್ಲೂ ಬದಲಾವಣೆಯನ್ನು ತಂದು ತಮಗೆಲ್ಲಿರಿಗೂ ಪ್ರಪಂಚವನ್ನು ತಂತ್ರಜ್ಙಾನವನ್ನು ಬಳಸಿ ನಿಮ್ಮ ಕಣ್ಮುಂದೆಯೇ ಕಾಣುವಂತಹ ದೇಶದಲ್ಲಿ ನಡೆಯುವ ಘಟನೆಗಳನ್ನು ಕಾಣಬಹುದು ಎಂದರು.

ಮಲಿಯೂರು ಗ್ರಾಪಂ ಪಿಡಿಒ ಪುಟ್ಟಸ್ವಾಮಿ ಮಾತನಾಡಿ, ಇಂದಿನ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲೇ ಶಿಕ್ಷಣ ಕಲಿಕೆಗೆ ಒತ್ತು ನೀಡುತ್ತಿರುವ ಈಗಿನ ಕಾಲದಲ್ಲಿ ವಡ್ಡರಕೊಪ್ಪಲು ಗ್ರಾಮದ ಗ್ರಾಮಸ್ಥರು ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ತಮ್ಮ ಮಕ್ಕಳನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.

ಎಬಿಇನ್ ಬೆವ್ ಬ್ರೆವರಿ ಕಂಪನಿ ನಿರ್ದೇಶಕ ಅಮಿತ್ ತ್ರಿಪಾಠಿ, ಸಿಎಸ್.ಅರ್ ಆಶ್ವಿನ್ಕುಮಾರ್ ಮಾತನಾಡಿದರು.

ಎಬಿಇನ್ ಬೆವ್ ಬ್ರೆವರಿ ಕಂಪನಿಯ ಗಿರೀಶ್ ನಾಡಿಗರ್, ಎಚ್.ಆರ್.ಓ ಸಚಿನ್, ತಿರುಪತಿ, ವಿನಯ್ ಕುಮಾರ್, ಪುಟ್ಟೇಗೌಡ ಹಾಗೂ ಮುಖ್ಯಶಿಕ್ಷಕ ಸುಬ್ರಮಣ್ಯ, ಸಹ ಶಿಕ್ಷಕರಾದ ಪುನೀತಾ, ದೇವರಾಜು, ಲೀನಾ, ಕಾಂತರಾಜು, ಲೂದಮೇರಿ, ಗ್ರಾಪಂ ಸದಸ್ಯರು ಇದ್ದರು.

Latest Videos
Follow Us:
Download App:
  • android
  • ios