Asianet Suvarna News Asianet Suvarna News

ವಿಪತ್ತು ನಿರ್ವಹಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ 2 ಬೋಟ್ ವಿತರಣೆ

  • ಅಂತೂ ಇಂತು ಬಳ್ಳಾರಿಗೆ ಸುಸಜ್ಜತ ಮತ್ತು ಹೈಟೆಕ್ ಬೋಟ್ ಗಳು ಬಂದಿವೆ.  
  • ವಿಪತ್ತು ನಿರ್ವಹಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ 2 ಬೋಟ್ ವಿತರಣೆ.
  • ಅಗತ್ಯ ರಕ್ಷಣಾ ಸಾಮಗ್ರಿಗಳ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಿದ ಡಿಸಿ ಮಾಲಪಾಟಿ
Distribution 2 hightech boats by Bellary district administration for disaster management
Author
Bangalore, First Published Aug 23, 2022, 10:34 AM IST

ಬಳ್ಳಾರಿ  (ಆ.23) : ಅಂತೂ ಇಂತು ಬಳ್ಳಾರಿಗೆ ಸುಸಜ್ಜತ ಮತ್ತು ಹೈಟೆಕ್ ಬೋಟ್ ಗಳು ಬಂದಿವೆ.  ತುಂಗಾಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಮಳೆಯಿಂ ದಾಗಿ ಹಾಗೂ ಅಣೆಕಟ್ಟಿನಿಂದ ನೀರು ಬಿಡುಗಡೆ ಸಂದರ್ಭದಲ್ಲಿ ಮತ್ತು ಇನ್ನಿತರ ಅಹಿತಕರ ಘಟನೆಗಳು ಹಾಗೂ ವಿಪತ್ತುಗಳು ಎದುರಾದ ಸಂದರ್ಭದಲ್ಲಿ ಈ‌ ಬೋಟ್ ಗಳು ಅತ್ಯವಶ್ಯಕವಿದೆ. ಆದ್ರೇ ಈವರೆಗೂ ಬಳ್ಳಾರಿ ಸಾಮಾನ್ಯ ಬೋಟ್ ಗಳಿದ್ದು, ಅವು ಅಗಾಗಾ ಕೈಕೊಟ್ಟಿದ್ದು ಉಂಟು. ಹೀಗಾಗಿ ಇದೀಗ ಎರಡು ಅತ್ಯಾಧುನಿಕ ಬೋಟ್ ಗಳನ್ನು ತರಿಸಿ ಅಗ್ನಿಶಾಮಕ ದಳಕ್ಕೆ ಹಸ್ತಾಂತರ ಮಾಡಲಾಗಿದೆ.

ತುಂಗಾಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಬಳ್ಳಾರಿ, ವಿಜಯನಗರದಲ್ಲಿ ಪ್ರವಾಹ ಭೀತಿ

ಕಾಲಕ್ಕೆ ತಕ್ಕಂತೆ ಹೈಟೆಕ್ ವ್ಯವಸ್ಥೆ ಮಾಡಿಕೊಳ್ಳಬೇಕು:

ಕಾಲಕ್ಕೆ ತಕ್ಕಂತೆ ವಿಪತ್ತು ನಿರ್ವಹಣಾ ತಂಡದವರು ಹೈಟೆಕ್ ವ್ಯವಸ್ಥೆ ಮಾಡಿಕೊಳ್ಳಬೇಕು ಇಲ್ಲದೇ ಇದ್ರೇ ನೀರಿನ ಹೆಚ್ಚಳವಾದಾಗ ತೊಂದರೆ ಅನುಭವಿಸಬೇಕಾಗ್ತದೆ. ಕಳೆದ ತಿಂಗಳು ಸಿರಗುಪ್ಪ ದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡ ಇಬ್ಬರನ್ನು ರಕ್ಷಿಸಲು ತೆರಳಿದ ಬೋಟ್ ಸಹ ಕೈಕೊಟ್ಟು ನೀರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಯಾದಗಿರಿ ಜಿಲ್ಲೆಯಿಂದ ಬಂದ ಬೋಟ್ ರಕ್ಷಣೆ  ಮಾಡಿತ್ತು. ಹೀಗಾಗಿ ಈ ಬಾರಿ ಎಚ್ಚತ್ತ  ಬಳ್ಳಾರಿ ಜಿಲ್ಲಾಡಳಿತ ಸಿಎಸ್‍ಆರ್ ಅನುದಾನದ ಅಡಿ 2 ಬೋಟ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಖರೀದಿಸಿದೆ..

ಬಳ್ಳಾರಿಯಲ್ಲಿ ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ!

ರಕ್ಷಣಾ ಕಾರ್ಯಕ್ಕೆ ಬಲ: ರಕ್ಷಣಾ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸುವ ಹಾಗೂ ಸಹಕಾರಿಯಾಗುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತವು ಅತ್ಯಾಧುನಿಕ 2 ಬೋಟ್ (ಎಚ್‍ಡಿಪಿಇ 8 ಸೀಟರ್ ಲೈಫ್‍ಬೋಟ್), 4 ಲೈಫ್ ಜಾಕೆಟ್‍ಗಳು ಹಾಗೂ 4ಲೈಫ್‍ಬಾಯ್‍ಗಳನ್ನು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ  ಅಗ್ನಿಶಾಮಕ ಇಲಾಖೆಯ ಅಧಿಕಾರಿ ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ತಿಮ್ಮಾರೆಡ್ಡಿ ಅವರಿಗೆ ಹಸ್ತಾಂತರಿಸಿದರು.ರಕ್ಷಣಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಪತ್ತು ನಿರ್ವಹಣೆ ಮಾಡುವಂತೆ ಅವರಿಗೆ ಡಿಸಿ ಮಾಲಪಾಟಿ ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ಬೋಟ್‍ಗಳ ಕಾರ್ಯನಿರ್ವಹಣೆಯ ಕುರಿತಂತೆ ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಪರಿಶೀಲಿಸಲು ಅಣುಕು ಪರೀಕ್ಷೆ ನಡೆಸಲಿದೆ.

Follow Us:
Download App:
  • android
  • ios