ಮೈಸೂರು[ಸೆ. 15]  ಮಾಜಿ ಸಚಿವ ಸಾರಾ ಮಹೇಶ್ ವಿರುದ್ಧ ಹಳ್ಳಿಹಕ್ಕಿ ವಿಶ್ವನಾಥ್ ಕಿಡಿಕಾರಿದ್ದಾರೆ. ಹಾವು ಕಡಿದರೆ ವಿಷ, ಆದ್ರೆ ವಿಶ್ವನಾಥ್ ಮೂಸಿದ್ರೆ ವಿಷ ಎಂದಿದ್ದ ಸಾರಾಗೆ ಕುಟುಕಿದ ವಿಶ್ವನಾಥ್ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.

ಸಾರಾ ಮಹೇಶ್ ಕೊಚ್ಚೆ ಗುಂಡಿ ಇದ್ದಂತೆ. ಆ ಕೊಚ್ಚೆಗುಂಡಿಗೆ ಕಲ್ಲು ಎಸೆದು ನನ್ನ ಬಿಳಿ ಶರ್ಟ್ ಮಸಿ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ. ಅವನ ಬಗ್ಗೆ ನೋ ರಿಯಾಕ್ಷನ್ ಎಂದು ಮೈಸೂರಿನಲ್ಲಿ ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

ಮೈತ್ರಿ ಸರ್ಕಾರ ಪತನ, HDD ಕುಟುಂಬದ ಕಣ್ಣೀರಿಗೆ ಕಾರಣ ಯಾರು? ವಿಶ್ವನಾಥ್ ಬಾಯಿಂದಲೇ ಕೇಳಿ

ಬೆಳಗ್ಗೆಯಷ್ಟೇ ಅನರ್ಹ ಶಾಸಕ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದ ಸಾರಾ ಮಹೇಶ್ ಗೆ ಸಂಜೆ ವಿಶ್ವನಾಥ್ ಪ್ರತಿಕ್ರಿಯೆ ರೀತಿ ಟಾಂಗ್ ನೀಡಿದ್ದಾರೆ. ಮಾಧ್ಯಮದವರ ಬಳಿ ಮಾತನಾಡಿದ ವಿಶ್ವನಾಥ್ ಸರಿಯಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.