Asianet Suvarna News Asianet Suvarna News

ಯಡಿಯೂರಪ್ಪರನ್ನ ರಾಜಾಹುಲಿ ಎಂದ ಅನರ್ಹ ಶಾಸಕ ಆನಂದ್ ಸಿಂಗ್!

2013ರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡೋಕೆ ಆಗಲಿಲ್ಲ| ಹಿಂದಿನ ಬಿಜೆಪಿ ಸರ್ಕಾರದಲ್ಲಾದ ಅನುದಾನ ಮಾತ್ರ ಕ್ಷೇತ್ರದಲ್ಲಿ ಇತ್ತು| ಸಿದ್ದರಾಮಯ್ಯ ಸರ್ಕಾರದಲ್ಲಿ ಬಿಜೆಪಿ ಶಾಸಕನೆಂದು ಅನುದಾನ ನೀಡಲಿಲ್ಲ| ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದ ಆನಂದ್ ಸಿಂಗ್|

Disqualified MLA Anand Singh Talks Over CM B S Yediyurappa
Author
Bengaluru, First Published Nov 25, 2019, 2:40 PM IST

ಹೊಸಪೇಟೆ(ನ.25): ಹದಿನಾಲ್ಕು ತಿಂಗಳು ರಾಜ್ಯಕ್ಕೆ ಗ್ರಹಣ ಹಿಡಿದಿತ್ತು. ಅನಿವಾರ್ಯ ಕಾರಣದಿಂದ ಬಿಜೆಪಿ ಬಿಟ್ಟು ಹೋಗಿದ್ದೆ, ಎಲ್ಲವನ್ನೂ ಬಹಿರಂಗವಾಗಿ ಹೇಳೋಕೆ ಆಗುವುದಿಲ್ಲ, ಹದಿನಾಲ್ಕು ತಿಂಗಳು ವನವಾಸಕ್ಕೆ ಹೋಗಿ ಮರಳಿ ಗೂಡಿಗೆ ಬಂದಿದ್ದೇನೆ ಎಂದು ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, 2013ರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡೋಕೆ ಆಗಲಿಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲಾದ ಅನುದಾನ ಮಾತ್ರ ಕ್ಷೇತ್ರದಲ್ಲಿ ಇತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಬಿಜೆಪಿ ಶಾಸಕನೆಂದು ಅನುದಾನ ನೀಡಲಿಲ್ಲ ಎಂದು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನುದಾನ ನೀಡಿದ ಬಗ್ಗೆ ಗುಣಗಾನ ಮಾಡಿದ ಆನಂದ ಸಿಂಗ್ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ನಲ್ಲಿ ನಾಲ್ಕು ಗುಂಪುಗಳಿವೆ,  ಅದರಲ್ಲಿ ನಾಲ್ಕು ಬಣ ಇವೆ. ಕಾಂಗ್ರೆಸ್ ಮಾಡುತ್ತಿರುವ ಟೀಕೆಗೆ ಮತದಾನದ ಮೂಲಕ ಉತ್ತರ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios