Asianet Suvarna News Asianet Suvarna News

ಅನರ್ಹ ಶಾಸಕರೆಲ್ಲರಿಗೂ ಸಚಿವ ಸ್ಥಾನ ಖಚಿತ: ಸಚಿವ ನಾಗೇಶ್ ವಿಶ್ವಾಸ

ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಖಚಿತ, ಅದಕ್ಕಾಗಿಯೇ ಅರ್ಧದಷ್ಟುಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್‌ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಸಚಿವ ಎಚ್‌.ನಾಗೇಶ್‌ ಹೇಳಿದ್ದಾರೆ.

disqualified lawmakers will become ministers for sure says h nagesh
Author
Bangalore, First Published Aug 25, 2019, 11:35 AM IST
  • Facebook
  • Twitter
  • Whatsapp

ಕೋಲಾರ(ಆ.25): ಬಿಜೆಪಿ ಸರಕಾರದಲ್ಲಿ ನನಗೆ ಇಂಧನ ಖಾತೆ ಸಿಕ್ಕರೆ ಸಂತಸವಾಗುತ್ತದೆ. ನನಗೆ ಇಂಧನ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದು ಸಚಿವ ಎಚ್‌.ನಾಗೇಶ್‌ ಮತ್ತೊಮ್ಮೆ ಇಂಧನ ಖಾತೆ ಮೇಲೆ ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಮಾಜಿ ಶಾಸಕರ ಜತೆ ಬಿಜೆಪಿ ಸೇರ್ಪಡೆ:

ನಗರದ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ನನಗೆ ಆ ಖಾತೆ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಖಚಿತ, ಅದಕ್ಕಾಗಿಯೇ ಅರ್ಧದಷ್ಟುಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್‌ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಹೇಳಿದರು.

ಆಪರೇಷನ್‌ ಕಮಲ:

ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣರಾದವರೆಲ್ಲ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಮತ್ತೆ ಆಪರೇಷನ್‌ ಕಮಲ ನಡೆಯುತ್ತೆ ಎಂಬ ಸುಳಿವನ್ನು ಸಹ ಇದೇ ವೇಳೆ ನಾಗೇಶ್‌ ನೀಡಿದರು.

ಇನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ವಾಕ್ಸಮರ ಕುರಿತು ಪ್ರತಿಕ್ರಿಯಿಸಿದ ನಾಗೇಶ್‌, 14 ತಿಂಗಳು ಮೇಲ್ನೋಟಕ್ಕೆ ಚೆನ್ನಾಗಿದ್ದರು. ಆದರೆ ಮೈತ್ರಿ ಸರಕಾರವಿದ್ದಾಗ ನನಗೂ ನೋವಿತ್ತು. ಆರಂಭದಲ್ಲಿ ಕೊಡಬೇಕಿದ್ದ ಖಾತೆಯನ್ನು ವರ್ಷದ ನಂತರ ಕೊಟ್ಟು, ಖಾತೆ ಕೊಡಲು ಹತ್ತು ದಿನ ಸತಾಯಿಸಿದರು. ಬಿಜೆಪಿಯ ಒಬ್ಬರು ಭಿನ್ನಮತೀಯರಿಂದ ಏನೂ ಮಾಡಲಾಗೋದಿಲ್ಲ, ಬಿಜೆಪಿ ಜತೆ ನಾವೀದ್ದೇವೆ ಎಂದರು.

ಸಿದ್ದರಾಮಯ್ಯ- ಗೌಡರ ಡ್ರಾಮ:

ಸಿದ್ದರಾಮಯ್ಯ ಹಾಗೂ ದೇವೇಗೌಡರ ಕಥೆ ದೇಶಕ್ಕೇ ಗೊತ್ತು. ಅವರ ಡ್ರಾಮಾ ಕಂಪನಿ ಹೊಸತೇನಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ವ್ಯಂಗ್ಯವಾಡಿದರು. ಕಾಂಗ್ರೆಸ್‌- ಜೆಡಿಎಸ್‌ ಪಕ್ಷದಲ್ಲಿ ಉಸಿರಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅನೇಕ ಶಾಸಕರು ಪಕ್ಷಗಳನ್ನು ಬಿಟ್ಟು ಬಂದಿದ್ದಾರೆ. ಸುಭದ್ರ ಬಿಜೆಪಿ ಸರಕಾರವನ್ನು ಇಚ್ಛೆ ಪಟ್ಟು ಎಚ್‌.ನಾಗೇಶ್‌ ಬಂದಿದ್ದಾರೆ. ನಮ್ಮ ಪಕ್ಷ ದೊಡ್ಡದು, ಹೀಗಾಗಿ ಕೆಲವು ಸಣ್ಣಪುಟ್ಟಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿವೆ, ಸದ್ಯದಲ್ಲೇ ವರಿಷ್ಠರು ಬಗೆಹರಿಸಲಿದ್ದಾರೆ ಎಂದು ಹೇಳಿದರು.

ಆರೋಪಿಗಳ ವಿರುದ್ಧ ಕ್ರಮ

ಅಕ್ರಮ ಗಣಿಗಾರಿಕೆ ಮಾಡಿಕೊಂಡು ಸರಕಾರಕ್ಕೆ ವಂಚಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದ್ದು, ಮುಲಾಜು ನೋಡುವುದಿಲ್ಲ ಎಂದರು. ಇದೇ ವೇಳೆ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು, ನಂತರ ಸಚಿವರ ನೇತೃತ್ವದಲ್ಲಿ ಬಿಜೆಪಿ ಮುಖಂಡರೊಂದಿಗೆ ಗುಪ್ತ ಸಭೆಯನ್ನು ನಡೆಸಲಾಯಿತು.

ಬೆಂಬಲಿಗರಿಗಾಗಿ ರಮೇಶ್ ಕುಮಾರ್ ಲಾಬಿ : ಹುದ್ದೆಗಾಗಿ ಕಸರತ್ತು!

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕರಾದ ಎ.ನಾಗರಾಜ್‌, ವೈ.ಸಂಪಂಗಿ. ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿ.ಡಿ.ರಾಮಚಂದ್ರೇಗೌಡ, ಎಸ್‌.ಬಿ.ಮುನಿವೆಂಕಟಪ್ಪ, ನಗರ ಘಟಕದ ಅಧ್ಯಕ್ಷ ಮಾಗೇರಿ ಎಂ.ಪಿ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios