ಟೊಮೆಟೋ ದರ ಏರಿದರೂ ರೈತನ ಜೇಬು ಖಾಲಿ
- ಟೊಮೆಟೋ ಬೆಲೆ ದಿಢೀರನೆ ಗಗನಕ್ಕೇರಿದ್ದರೂ ರೈತನ ಜೇಬು ಖಾಲಿ
- ನೂರಾರು ಎಕರೆ ಪ್ರದೇಶದ ಟೊಮೆಟೊ ಬೆಳೆಗಳು ರೋಗಕ್ಕೆ ತುತ್ತು
ಬಂಗಾರಪೇಟೆ (ಅ.19): ಟೊಮೆಟೋ (Tomato) ಬೆಲೆ (Price) ದಿಢೀರನೆ ಗಗನಕ್ಕೇರಿದ್ದರೂ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ (Rain) ರೈತರು (Farmers) ಬೆಳೆದ ನೂರಾರು ಎಕರೆ ಪ್ರದೇಶದ ಟೊಮೆಟೊ ಬೆಳೆಗಳು ರೋಗಕ್ಕೆ ( disease) ತುತ್ತಾಗಿರುವ ಕಾರಣ ಅನ್ನದಾತನಿಗೆ ನಿರಾಸೆ ಉಂಟಾಗಿದೆ.
ಕೊರೋನಾ (Corona) ಲಾಕ್ ಡೌನ್ (lockdown) ತೆರವಾದ ನಂತರ ಇದೇ ಮೊದಲ ಬಾರಿಗೆ ಟೊಮೆಟೊಗೆ ಬಲು ಬೇಡಿಕೆ ಉಂಟಾಗಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿದೆ. ಹೀಗೆ ಉತ್ತಮ ಬೆಲೆ ಇದ್ದರೂ ಸಹ ರೈತರಿಗೆ ಸಂತಸವಿಲ್ಲ. ಲಕ್ಷಾಂತರ ರು.ಗಳ ಬಂಡವಾಳ ಹಾಕಿ ಬೆಳೆದ ಬೆಳೆಗಳು ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೋಗಕ್ಕೆ ತುತ್ತಾಗಿವೆ. ಬೆಳೆಯನ್ನು ರಕ್ಷಿಸಿಕೊಳ್ಳಲು ಎಷ್ಟೆ ಕೀಟನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರದೆ ರೈತರು ಹತಾಶರಾಗಿದ್ದಾರೆ.
Kolara ಟೊಮೆಟೋ ದರ ಭರ್ಜರಿ ಏರಿಕೆ : ರೈತರಿಗೆ ಬಂಪರ್
ತೋಟದಲ್ಲಿ ಫಸಲಿಲ್ಲ: ಈ ಮೊದಲು ಟೊಮೆಟೊಗೆ ಸೂಕ್ತ ಬೆಲೆ ಇಲ್ಲದ ಕಾರಣ ಬಹಳಷ್ಟು ರೈತರು ಬೆಳೆ ರಕ್ಷಣೆಗೆ ಸಾವಿರಾರು ರೂ.ಗಳನ್ನು ಖರ್ಚು ಮಾಡಲ ಹಿಂದೇಟು ಹಾಕಿದ್ದರು. ಕೆಲವು ರೈತರು ಸಾಧ್ಯವಾದಷ್ಟುಬೆಳೆಗಳನ್ನು ಕಾಪಾಡಿಕೊಂಡು ಬಂದಿದ್ದರೂ ಈಗ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ನಿರೀಕ್ಷೆಯಷ್ಟು ಫಸಲು ಸಿಗದ ಕಾರಣ ಅಲ್ಪ ಪ್ರಮಾಣದಲ್ಲಿ ಮಾತ್ರ ಟೊಮೆಟೊ ಮಾರುಕಟ್ಟೆಗೆ (Market) ಬರುತ್ತಿದೆ.
ಈ ಬಾರಿ ಟೊಮೆಟೋಗೆ ಸೀಸನ್‌ನಲ್ಲಿ ನಿರೀಕ್ಷೆಯಷ್ಟುಉತ್ತಮ ಬೆಲೆ ಸಿಗದೆ ರೈತರು ಕಂಗಾಲಾಗಿದ್ದರು. ಅಕ್ಕಪಕ್ಕದ ರಾಜ್ಯಗಳಾದ ತಮಿಳುನಾಡು (tamilnadu), ಕೇರಳ (kerala), ಆಂದ್ರಪ್ರದೇಶ (Andra pradesh) ಸೇರಿ ಇತರೆ ರಾಜ್ಯಗಳಲ್ಲೂ ಮಳೆಯಿಂದಾಗಿ ಬೆಳೆಗಳು ನಾಶವಾದ ಕಾರಣ ಅಲ್ಲಿನ ವ್ಯಾಪಾರಸ್ಥರು ಕೋಲಾರದ (Kolar) ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಅನ್ ಸೀಸನ್‌ನಲ್ಲೂ ಬೆಲೆ ಏರಿಕೆಯಾಗಿದೆ.
ಕೋಲಾರದ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಒಂದಕ್ಕೆ 250 ರಿಂದ 800 ರೂಗಳ ವರೆಗೂ ಮಾರಾಟವಾಗುತ್ತಿದ್ದು,ರೈತರಲ್ಲಿ ಸಂತಸ ಒಂದು ಕಡೆ ಇದ್ದರೆ ಅಧಿಕ ಮಳೆಯಿಂದ ಬೆಳೆ ಕಳೆದುಕೊಂಡ ಕಾರಣ ಮತ್ತೊಂದು ಕಡೆ ದುಃಖ ಉಂಟಾಗಿದೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಬೆಲೆ ಇಲ್ಲದೆ ರೈತರು ಟೊಮೆಟೋವನ್ನು ಎಲ್ಲೆಂದರಲ್ಲಿ ಸುರಿಯುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗ ಬೆಲೆ ಇದೆ ಆದರೆ ತೋಟದಲ್ಲಿ ಫಸಲಿಲ್ಲವೆಂಬುದು ರೈತರ ಅಳಲು.
Bengaluru| ಟೊಮೆಟೋ ದುಬಾರಿ: ಕೇಜಿಗೆ ಈಗ 70 ರೂ., ಗ್ರಾಹಕರ ಜೇಬಿಗೆ ಕತ್ತರಿ
ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಕೀಟನಾಶಕ (Pesticides ) ಸಿಂಪಡಣೆ ಮಾಡಲು ಸಾಧ್ಯವಾಗದೆ ರೋಗ ಬಾಧೆ ಉಲ್ಬಣವಾಗಿದೆ. ರೋಗ ನಿಯಂತ್ರಣಕ್ಕೆ ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ ಸೂಚಿಸುವ ಕೆಲವು ಕೀಟನಾಶಕಗಳನ್ನು ಸಿಂಪಡನೆ ಮಾಡಿದರೆ ರೋಗವನ್ನು ಹತೋಟಿಗೆ ತರಬಹುದು.
- ಶಿವಾರೆಡ್ಡಿ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ.