Asianet Suvarna News Asianet Suvarna News

ಮಹಿಷ ದಸರಾ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ

ಮಹಿಷ ದಸರಾ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು

discussion About Mahisha Dussehra name change snr
Author
First Published Oct 9, 2023, 8:14 AM IST

  ಮೈಸೂರು :  ಮಹಿಷ ದಸರಾ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟವನ್ನು ಮಹಿಷ ಬೆಟ್ಟ ಅಂತಾ ಹಾಕಿರುವುದು ತಪ್ಪು. ಇದನ್ನ ಸರಿಪಡಿಸಲು ಸೂಚಿಸುತ್ತೇನೆ ಎಂದರು.

ನಾವು ದಸರಾಗೆ ಪರ್ಯಾಯವಾಗಿ ಮಹಿಷ ದಸರಾ ಮಾಡುತ್ತಿಲ್ಲ. ಚಾಮುಂಡೇಶ್ವರಿಯನ್ನು ನೆನದು ನಾವು ಮಹಿಷ ದಸರಾ ಮಾಡುತ್ತೇವೆ. ಯಾರಿಗೂ ನೋವನ್ನುಂಟು ಮಾಡುವುದು ನಮ್ಮ ಉದ್ದೇಶವಲ್ಲ. ರೈತ ದಸರಾ, ಮಹಿಳಾ ದಸರಾ ರೀತಿ ನಾವು ಮಹಿಷ ದಸರಾ ಮಾಡುತ್ತೇವೆ. ಇದನ್ನು 10 ದಿನಗಳ ಕಾಲ ಆಚರಿಸುವುದಿಲ್ಲ ಎಂದು ಅವರು ಹೇಳಿದರು.

ಮಹಿಷ ದಸರಾವನ್ನು ಮಹಿಷ ಮಹೋತ್ಸವ, ಮಹಿಷ ದಿನಾಚರಣೆ ಅಥವಾ ಮಹಿಷ ಸಮಾವೇಶ ಹೆಸರಿನಲ್ಲಿ ಇದನ್ನ ಆಚರಿಸುತ್ತೇವೆ. ಬೇರೆ ಸಮಯದಲ್ಲಿ ಆಚರಿಸಲು ಚಿಂತನೆ ನಡೆಸುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಸಂತೋಷ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ‌. ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡುತ್ತೇವೆ. ಮಹಿಷ ದಸರಾಗೆ 50 ವರ್ಷ ಹಿನ್ನೆಲೆ ಇದೆ ಎಂದು ಅವರು ತಿಳಿಸಿದರು.

ಮಂಟೇಲಿಂಗಯ್ಯ 1974 ರಲ್ಲೇ ಮಹಿಷನಿಗೆ ಪೂಜೆ ಸಲ್ಲಿಸಿ ಮಹಿಷ ದಸರಾ ಪ್ರಾರಂಭಿಸಿದ್ದರು. ಸರ್ಕಾರಕ್ಕೂ ಮಹಿಷ ದಸರೆಗೂ ಸಂಬಂಧವಿಲ್ಲ. ಇದನ್ನು ಸರ್ಕಾರಕ್ಕೆ ಟ್ಯಾಗ್ ಮಾಡಬೇಡಿ. ನಾನು ಮುಖ್ಯಮಂತ್ರಿಯವರನ್ನು ಬೇರೆ ವಿಚಾರಕ್ಕೆ ಭೇಟಿ ಮಾಡಿದ್ದಾಗಿ ಅವರು ಸ್ಪಷ್ಟಪಡಿಸಿದರು.

ಮಹಿಷಾ ದಸರಾ

  ಮೈಸೂರು :  ನಗರದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅ. 13 ರಂದು ಮಹಿಷ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.

ಅಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಬಳಿ ಎಲ್ಲರೂ ಸೇರಿ, ಬಳಿಕ ಆದಿ ದ್ರಾವಿಡ ದೊರೆ ಮಹಿಷಾಸುರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ, ನಂತರ ಪುರಭವನಕ್ಕೆ ಬೈಕ್ ರ್ಯಾ ಲಿ ಮೂಲಕ ಆಗಮಿಸಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಆದರ್ಶ ಪುರುಷರನ್ನು ಕೊಂದವರ ಹೆಸರಿನಲ್ಲಿ ನಮ್ಮಿಂದಲೇ ಹಬ್ಬ ಮಾಡಿಸುತ್ತಿರುವುದು ಬೇಸರದ ಸಂಗತಿ. ಮಹಿಷ ದಸರಾ ಒಂದು ಸಾಂಸ್ಕೃತಿಕ ಹಬ್ಬವಾಗಿದ್ದು, ಅದು ಮೂಲ ನಿವಾಸಿಗಳ ಅಸ್ಮಿತೆಯಾಗಿದೆ. ಇಂತಹ ಸಂದರ್ಭದಲ್ಲಿ ಓರ್ವ ಸಂಸದರಾಗಿ ಪ್ರತಾಪ್ಸಿಂಹ ಅವರು ಮಹಿಷ ದಸರಾ ಆಚರಣೆ ಸಂಬಂಧ ಸಂಘರ್ಷಕ್ಕೂ ಸಿದ್ಧ ಎನ್ನುವುದು ಸರಿಯಲ್ಲ. ಮಹಿಷ ದಸರಾ ಆಚರಣೆ ಮಾಡಬಾರದೆನ್ನುವ ಅಧಿಕಾರ ಇವರಿಗಿಲ್ಲ ಎಂದರು.

ಬಳಿಕ, ಹಿಂದೂ ಧರ್ಮ ತತ್ವ ಸರ್ವರೂ ಸುಖಿಯಾಗಿರಲಿ ಎಂದದಿದ್ದರೆ, ಇದಕ್ಕೆ ವಿರುದ್ಧವಾಗಿ ಸಂಸದ ಮನು ಸಂವಿಧಾನ ಬೇಕೆನ್ನುವಂತೆ ಮಾತನಾಡುತ್ತಿದ್ದಾರೆ. ಸಂಘರ್ಷಕ್ಕೆ ಇವರು ಪ್ರಚೋದನೆ ನೀಡುವುದು ಸರಿಯಲ್ಲ. ಬೇಕಿದ್ದರೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಮತ ತಮಗೆ ಬೇಡ ಎಂದು ಬಹಿರಂಗವಾಗಿ ತಿಳಿಸಲಿ ಎಂದು ತಾಕೀತು ಮಾಡಿದರು.

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ನಿಮ್ಮ ಹಬ್ಬ ನೀವು ಆಚರಿಸಿಕೊಳ್ಳಿ, ನಮ್ಮ ಹಮ್ಮ ನಾವು ಆಚರಿಸುತ್ತೇವೆ. ಹೀಗಾಗಿ ತಮಗಿರುವ ಅಧಿಕಾರವನ್ನು ಸಂಸದರು ದುರುಪಯೋಗ ಪಡಿಸಿಕೊಳ್ಳುವುದು ಬೇಡ, ಸಂವಿಧಾನ ಎಲ್ಲರೂ ಸಮಾನರು ಎಂದಿದೆ. ಯಾವುದೇ ಧರ್ಮ ಗ್ರಂಥ, ಅಂಶವನ್ನು ನಾವು ಒಪ್ಪುವುದಿಲ್ಲ. ಬದಲಾಗಿ ಸಂವಿಧಾನ ಒಪ್ಪುತ್ತೇವೆ. ಮಹಿಷ ಒಂದು ವೇಳೆ ರಾಕ್ಷಸ ಆಗಿದ್ದರೆ ಅವನ ಹೆಸರನ್ನು ಈ ಊರಿಗೇಕೆ ಇರಿಸುತ್ತಿದ್ದರು ಎಂಬ ಜ್ಞಾನವೂ ಸಂಸದರಿಗೆ ಇಲ್ಲ ಎದು ಅವರು ಆರೋಪಿಸಿದರು.

ಮಹಿಷ ದಸರಾಕ್ಕೆ 50ವರ್ಷ; ವಿವಾದ ಹುಟ್ಟುಹಾಕಿದ ಆಹ್ವಾನ ಪತ್ರಿಕೆ!

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಂಸದ ಚಾಮುಂಡಿಬೆಟ್ಟ ಚಲೋ ಎನ್ನುವ ವೇಳೆ ಬಿಜೆಪಿ ನಾಯಕರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇವರಾರೂ ಮುಖ್ಯರಲ್ಲ. ಇವರು ಪ.ಜಾತಿ ಮತ್ತು ಪ.ಪಂಗಡದ ವಿರುದ್ಧ ಹಿಂದುಳಿದ ವರ್ಗ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರು ಸಂಘರ್ಷ ಎಂದಾಗಲೇ ಪೊಲೀಸರು, ಜಿಲ್ಲಾಡಳಿತ ಕ್ರಮ ಕೈಗೊಂಡು ಬಂಧಿಸಬೇಕಿತ್ತು. ಇಂತರಹವರಿಂದ ಸಮಾಜಕ್ಕೆ ಕೆಡುಕಾಗುತ್ತಿದೆ ಎಂದು ಅವರು ದೂರಿದರು.

Follow Us:
Download App:
  • android
  • ios