ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ.. ಹಂದಿ ಅಣ್ಣಿ ಸಹೋದರ ಗಿರೀಶ್ ಕೊಚ್ಚಿಹಾಕಿದ್ರು!
ನಟೋರಿಯಸ್ ರೌಡಿ ಹಂದಿ ಗಿರೀಶ್ ಹತ್ಯೆ/ ಮಾರಣಾಂತಿಕ ಹಲ್ಲೆಯಿಂದ ಸಾವನ್ನಪ್ಪಿದ ಗಿರೀಶ್/ ತೂರ ಬಿಲ್ಲೆ ಗ್ಯಾಂಬ್ಲಿಂಗ್ ವಿಚಾರದಲ್ಲಿ ಗಲಾಟೆ/ ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ
ಶಿವಮೊಗ್ಗ(ಫೆ. 06) ನಟೋರಿಯಸ್ ರೌಡಿ ಹಂದಿ ಅಣ್ಣಿ ಸಹೋದರ ರೌಡಿ ಗಿರೀಶ್ ನನ್ನು ಶಿವಮೊಗ್ಗದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶಿವಮೊಗ್ಗದ ಅನುಪಿನ ಕಟ್ಟೆ ಬಡಾವಣೆಯ ಸಿದ್ದೇಶ್ವರ ಸರ್ಕಲ್ ಬಳಿ ಮಾರಾಕಾಸ್ತ್ರ ದಿಂದ ಅಜ್ರು ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ. ಅನುಪಿನ ಕಟ್ಟೆಯ ಮಂದಾರ ಶಾಲೆಯ ಹಿಂಭಾಗ ತೂರ ಬಿಲ್ಲೆ ಗ್ಯಾಂಬ್ಲಿಂಗ್ ನಡೆಸಲಾಗಿತ್ತು. ಈ ಗ್ಯಾಂಬ್ಲಿಂಗ್ ಆಟದಲ್ಲಿ ಹಣ ಹಾಕಿದ್ದ ರೌಡಿ ದೊರೈ ಹಾಗೂ ಗ್ಯಾಂಬ್ಲರ್ ಅಜ್ರು ನಡುವೆ ಆಟದ ಸಂಬಂಧ ಮಾತಿನ ಚಕಮಕಿ ನಡೆದಿತ್ತು.
ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು; ಕೊಂದೆ ಬಿಟ್ಟ ಪಾಪಿ
ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಗಿರೀಶ್ ಜೊತೆಗಾರರಾದ ಹರೀಶ್, ರಮೇಶ್ ಮದ್ಯೆ ಪ್ರವೇಶಿಸಿ ದೊರೈಗೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದರೌಡಿ ಗಿರೀಶ್ ಮತ್ತು ಅಜ್ರು ನಡುವೆ ಗಲಾಟೆ ನಡೆದಿದೆ. ಉಳಿದವರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ.
ತಕ್ಷಣವೇ ಅಲ್ಲಿಂದ ಎರಡು ಬೈಕಿನಲ್ಲಿ ಹೊರಟ ಗಿರೀಶ್ ನನ್ನು ಮೂರು ಬೈಕಿನಲ್ಲಿ ಹಿಂಬಾಲಿಸಿ ಬಂದ ಅಜ್ರು ಗ್ಯಾಂಗ್ ಆ್ಯಟಾಕ್ ಮಾಡಿದೆ. ಸಿದ್ದೇಶ್ವರ ಸರ್ಕಲ್ ಬಳಿ ಅಟ್ಯಾಕ್ ಮಾಡುತ್ತಿದ್ದಂತೆ ಗಿರೀಶ್ ಜೊತೆಗಾರರಾದ ಹರೀಶ್, ರಮೇಶ್, ಪ್ರಮೋದ್ ತಪ್ಪಿಸಿಕೊಂಡರೆ ಗಿರೀಶ್ ತಪ್ಪಿಸಿಕೊಳ್ಳಲಾಗದೇ ಚಾಕು ಇರಿತಕ್ಕೊಳಗಾಗಿ ರಸ್ತೆಯಲ್ಕೆ ಬಿದ್ದಿದ್ದಾನೆ. ಹೀಗೆ ಮಾರಣಾಂತಿಕ ಹಲ್ಲೆಗೊಳಗಾದ ಹಂದಿ ಗಿರೀಶ್ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನೀಡುವ ಮೊದಲೆ ಸಾವನ್ನಪ್ಪಿದ್ದಾನೆ.
ಇದೀಗ ಶಿವಮೊಗ್ಗದ ತುಂಗಾನಗರ ಠಾಣೆಯ ಪೋಲಿಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮಧ್ಯೆ ಆರೋಪಿ ಅಜ್ರು ಗ್ಯಾಂಗ್ ಪೋಲಿಸರ ಮುಂದೆ ಶರಣಾಗಲು ನಿರ್ಧರಿಸಿದೆ ಎಂಬ ಮಾಹಿತಿಯೂ ಇದೆ.