Asianet Suvarna News Asianet Suvarna News

ಮಠ ಖಾಲಿ ಮಾಡಿದ ಮುರುಘಾ ಶರಣರ ಶಿಷ್ಯೆ

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಹೊಸಹಳ್ಳಿಯಲ್ಲಿದ್ದ ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠವಾಗಿದ್ದ ಪಡುವಲ ಮಠದ ರೇವತಿ ಮಠವನ್ನು ಬಿಟ್ಟು ಹೋಗಿದ್ದಾರೆ.

  disciple of Muruga Shri vacated  the Mutt snr
Author
First Published Jan 30, 2023, 6:44 AM IST

 ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಹೊಸಹಳ್ಳಿಯಲ್ಲಿದ್ದ ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠವಾಗಿದ್ದ ಪಡುವಲ ಮಠದ ರೇವತಿ ಮಠವನ್ನು ಬಿಟ್ಟು ಹೋಗಿದ್ದಾರೆ.

ಮುರುಘಾಶರಣರ ಶಿಷ್ಯೆಯಾಗಿದ್ದ ರೇವತಿ, ಮಠವನ್ನು ಒಂದು ತಿಂಗಳ ಹಿಂದೆ ಇಡೀ ಮಠವನ್ನು ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ರೇವತಿ ಗುಬ್ಬಿ ಹೊಸಹಳ್ಳಿಯಲ್ಲಿ 18 ಎಕರೆ ಜಾಗದಲ್ಲಿದ್ದ ಪಡುವಲ ಮಠದಲ್ಲಿದ್ದರು.

ಈ ಜಾಗವನ್ನು ಮರುಘಾ ಮಠಕ್ಕೆ ಗ್ರಾಮಸ್ಥರು ಹಸ್ತಾಂತರಿಸಿದ್ದರು. ಕಳೆದ 10- 12 ವರ್ಷಗಳಿಂದ ಮಠದ ಜಾಗವನ್ನು ರೇವತಿ ನೋಡಿಕೊಳ್ಳುತ್ತಿದ್ದರು. ಸುಮಾರು 50ಕ್ಕೂ ಹಸುಗಳನ್ನು ಸಾಕಿಕೊಂಡು ಅಕ್ಕ, ಅಪ್ಪ, ಅಮ್ಮನೊಂದಿಗೆ ಪಡುವಲ ಮಠದಲ್ಲಿ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಹಸುಗಳೊಂದಿಗೆ ರೇವತಿ ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.

3 ಸಾವಿರ ಎಕರೆ ಆಸ್ತಿ ಮಾರಾಟ

ಕೊಡಗು (ಜ.07):  ಚಿತ್ರದುರ್ಗದ ಬೃಹನ್ಮಠದ ಮುರುಘಾ ಶ್ರೀಗಳೇನೋ ಜೈಲು ಸೇರಿದ್ದಾರೆ. ಸರ್ಕಾರವೇನೋ ಅಲ್ಲಿಗೆ ಆಡಳಿತ ಅಧಿಕಾರಿಯನ್ನ ನೇಮಿಸಿದೆ. ಆದ್ರೆ ಅದಕ್ಕೂ ಮುನ್ನವೇ ವಿವಿಧೆಡೆ ಮಠದ ಆಸ್ತಿ ಏನಾಗಿದೆ ಅಂತ ಕೇಳಿದ್ರೆ ನೀವು ನಿಜಕ್ಕೂ ಹೌಹಾರ್ತೀರ. ಅಷ್ಟೇ ಅಲ್ಲ ಶಾಖಾ ಮಠದ ಸ್ವಾಮೀಜಿಗಳ ನೇಮಕ ವಿಚಾರ ಕೂಡ ಅಷ್ಟೇ ಶಾಕಿಂಗ್ ಆಗಿದೆ.  

ಚಿತ್ರದುರ್ಗದ ಮುರುಘಾ ಶರಣರ ಬೃಹನ್ಮಠ ಇಡೀ ರಾಜ್ಯದಲ್ಲೇ ಸಾಕಷ್ಟು ಹೆಸರು ಮಾಡಿತ್ತು. ಇಂತಹ ಮಠಕ್ಕೆ ರಾಜರ ಕಾಲದಿಂದಲೂ ಸಹಾನುಭೂತಿ ಇದ್ದೇ ಇದೆ. ಅದಕ್ಕೆ ಉದಾಹರಣೆಯೇ ಕೊಡಗಿನ ಹಾಲೇರಿ ಅರಸರ ಆಡಳಿತ. ಹೌದು ಕೊಡಗು ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭದಲ್ಲಿ ಕೊಡಗು ರಾಜ್ಯವನ್ನು ಹಾಲೇರಿ ಅರಸರು ಆಳ್ವಿಕೆ ಮಾಡಿದ್ದು ಗೊತ್ತೇ ಇದೆ. ಲಿಂಗಾಯಿತ ಅರಸರಾಗಿದ್ದ ಇವರು ಕೊಡಗಿನಲ್ಲಿದ್ದ ಈ ವೀರಶೈವ ಲಿಂಗಾಯತ ಮಠಕ್ಕೆ ಅಂದಿನ ಕಾಲದಲ್ಲೇ ಸಾವಿರಾರು ಏಕರೆ ಭೂಮಿಯನ್ನ ದಾನವಾಗಿ ಕೊಟ್ಟಿದ್ದರು. ಅದೇ ಭೂಮಿ ಇಂದು ಅಕ್ರಮವಾಗಿ ಮಾರಾಟವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇವತ್ತು ಅಕ್ರಮ ನಡೆದಿರೋದು. 

ಮುರುಘಾಮಠ ಹಾಸ್ಟೆಲ್‌ನ ಇಬ್ಬರು ಬಾಲೆಯರ ಮೇಲೆ ಅತ್ಯಾಚಾರ ಆಗಿಲ್ಲ: ವೈದ್ಯಕೀಯ ವರದಿ

3 ಸಾವಿರ ಎಕರೆ ಆಸ್ತಿ ಮಾರಾಟ: ಅರಸರು ಕೊಟ್ಟ ಭೂಮಿಯನ್ನು ಈಗ ಅರೆಸ್ಟ್ ಆಗಿರೋ ಮುರುಘಾ ಶರಣರು ತಾವು ನೇಮಕ ಮಾಡಿರೋ ಮ್ಯಾನೇಜರ್ ಮೂಲಕ ಅಕ್ರಮವಾಗಿ ಮಾರಿಸಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. 3,600 ಏಕರೆ ಇದ್ದ ಮಠದ ಆಸ್ತಿ ಇಗ ಕಳೆದ 10 ವರ್ಷಗಳಿಂದ ಉಳಿದಿರೋದು ಕೇವಲ 600 ಏಕರೆ. ಅಂದರೆ ಹಂತ ಹಂತವಾಗಿ ಸುಮಾರು 3,000 ಏಕರೆಯಷ್ಟು ಭೂಮಿ ಮಾರಾಟ ಮಾಡಲಾಗಿದೆ. ಶ್ರೀಗಳು ಜೈಲು ಸೇರಿದ ಮೇಲೂ ಇತ್ತ ಮ್ಯಾನೇಜರಿಂದ ಆಸ್ತಿ ಮಾರಾಟ ಅಂತ ಖುದ್ದು ವೀರಶೈವ ಮುಖಂಡರೇ ಆರೋಪಿಸಿದ್ದಾರೆ. ಮಠದ ಆಸ್ತಿಯನ್ನು ಅಕ್ರಮವಾಗಿ ಜಿಪಿಎ ಮಾಡಲಾಗಿದ್ದು, ಅದೆಲ್ಲವನ್ನು ಬಿಡಿಸಬೇಕಾಗಿದೆ ಎಂದು ಭಕ್ತರಾದ ಮಹೇಶ್ ಅವರು ಒತ್ತಾಯಿಸಿದ್ದಾರೆ.

ಆಸ್ತಿ ಮಾರಾಟ ತಡೆಗೆ ಸೂಕ್ತ ಕ್ರಮವಹಿಸಿ: ಮಠದ ಪರಂಪರೆ ಮರೆತ ಮುರುಘಾ ಶ್ರೀಗಳ ವಿರುದ್ಧ ಭಕ್ತರ ಆಕ್ರೋಶ ವ್ಯಕ್ತವಾಗ್ತಿದೆ. ಕೊಡಗಿನಲ್ಲಿರುವ ಶಾಖಾ ಮಠಗಳ ಶಿಥಿಲಾವಸ್ಥೆಗೆ ಶ್ರೀಗಳೇ ಕಾರಣ ಅಂತ ಸಮುದಾಯದ ಮುಖಂಡರು ಹೇಳ್ತಿದ್ದಾರೆ. ಅತ್ತ ಮಠದ ಆಸ್ತಿ ಮಾರಾಟದ ಜೊತಗೆ, ಇತ್ತ ಶಾಖಾ ಮಠಗಳಿಗೆ ಸ್ವಾಮೀಜಿಗಳನ್ನು ನೇಮಿಸದೇ ನಿರ್ಲಕ್ಷ್ಯ ಮಾಡಲಾಗಿದೆ. ಹತ್ತು ಹಲವು ವರ್ಷಗಳಿಂದ ಶಾಖಾ ಮಠಗಳಿಗೆ ಸ್ವಾಮೀಜಿ ನೇಮಿಸಿಲ್ಲ ಅಂತ ವೀರಶೈವ ಮುಖಂಡರು ಆರೋಪಿಸಿದ್ದಾರೆ. 

ಸೋಮವಾರಪೇಟೆಯಲ್ಲಿ ಸಭೆ:
ಈ ಕುರಿತು ಸೋಮವಾರಪೇಟೆಯ ಮಠದಲ್ಲಿ ಸಭೆ ನಡೆಸಿದ ವೀರಶೈವ ಮುಖಂಡರು ಮತ್ತು ಸ್ಥಳೀಯ ಸ್ವಾಮೀಜಿಗಳು ಅನಾಥವಾದ ವಿರಕ್ತ ಮಠ, ಬೇಳೂರು ಮಠ, ಅಬ್ಬಿಮಠ, ಗುತ್ತಿ ಮಠದ ಪರಿಸ್ಥಿತಿ ಕೇಳದವರಾಗಿದ್ದಾರೆ. ಮಠದ ಕಟ್ಟಡ ಹಾಗೂ ಇದ್ದ ಸ್ವಾಮೀಜಿಗಳ ಗದ್ದಿಗೆಯನ್ನೇ ಧ್ವಂಸ ಮಾಡಿ ಮ್ಯಾನೇಜರ್ ಹೊಸ ಕಟ್ಟದ ನಿರ್ಮಿಸ್ತಿದ್ದಾರೆ. ಇತ್ತ ಯಾವ ಮಠಗಳಿಗೂ ಸ್ವಾಮೀಜಿಗಳೇ ಇಲ್ಲದೆ ಮ್ಯಾನೇಜರಿಂದ ಆಡಳಿತ ನಡೀತಿದೆ. ಸ್ವಾಮೀಜಿಗಳಿಲ್ಲದೆ ಬಿಕೋ ಎನ್ನುತ್ತಿರುವ ಮಠಗಳು ಬೀಳುವ ಹಂತಕ್ಕೆ ಬಂದಿವೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 

ದುರ್ಗದ ಏಳು ಸುತ್ತಿನ ಕೋಟೆಗೆ ಲಗ್ಗೆ ಇಟ್ಟ ಪ್ರವಾಸಿಗರು; ಮುರುಘಾ ಮಠಕ್ಕೂ ದೌಡು!

ಚಿತ್ರದುರ್ಗ ಮಠಕ್ಕೆ ಸ್ವಾಮೀಜಿ ನೇಮಿಸಿ: ವೀರಶೈವ ಮುಖಂಡರಾದ ಪ್ರಭುದೇವ್ ಮಾತನಾಡಿ, ಒಂದು ವೇಳೆ ಚಿತ್ರದುರ್ಗ ಮಠದಿಂದ ಸ್ವಾಮೀಜಿ ನೇಮಿಸದಿದ್ರೆ ನಾವೇ ನೇಮಿಸಿಕೊಳ್ತೀವಿ. ಮಠದ ಕಟ್ಟಡ ಬೀಳುವ ಹಂತಕ್ಕೆ ಬಂದರೂ ದುರಸ್ತಿಯನ್ನೂ ಮಾಡುತ್ತಿಲ್ಲ. ತಕ್ಷಣ ಶಾಖಾ ಮಠಗಳಿಗೆ ಸ್ವಾಮಿಗಳನ್ನ ನೇಮಿಸಬೇಕು. ಮಠಕ್ಕೆ ಸ್ವಾಮೀಜಿಗಳ ನೇಮಕವಾಗಬೇಕು, ಮಠ ಪರಂಪರೆ ಉಳಿಯಬೇಕು ಎಂದು ಕೊಡಗಿನ ವೀರಶೈವ ಸಮುದಾಯದ ಮುಖಂಡರಿಂದ ಸಭೆ ನಡೆಸಿ ಬೃಹನ್ಮಠಕ್ಕೆ ಎಚ್ವರಿಕೆ ನೀಡಿದ್ದೇವೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಅತ್ಯಂತ ಶ್ರೇಷ್ಠವಾದ ಮಠ ಪರಂಪರೆಗೆ ಚಿತ್ರದುರ್ಗ ಬೃಹನ್ಮಠದ ಸ್ವಾಮೀಜಿಗಳಿಂದ ಅನ್ಯಾಯವಾಗಿದೆ ಅನ್ನೋ ಕೂಗು ಕೊಡಗಿನಲ್ಲಿ ಜೋರಾಗಿದೆ. ಮಠದ ಆಸ್ತಿ ಮಾರಾಟದ ಜೊತೆಗೆ ಶಾಖಾ ಮಠಗಳಿಗೆ ಸ್ವಾಮೀಜಿ ನೇಮಿಸದೇ ವಂಚಿಸುರುವ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಸದ್ಯ ಸರ್ಕಾರವೇನೋ ಮಠಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಿದೆ. ಅವರಾದ್ರೂ ಮಠ ಪರಂಪರೆಗೆ ಧಕ್ಕೆ ಆಗದಂತೆ ನಡೆದುಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Follow Us:
Download App:
  • android
  • ios