ಮೈಸೂರು[ಜು.19]: ಉಡಾನ್ ಯೋಜನೆ ಅಡಿ ಇಂದಿನಿಂದ ಮೈಸೂರಿನಿಂದ ಗೋವಾ, ಹೈದರಾಬಾದ್, ಕೊಚ್ಚಿ ನಡುವೆ ನೇರ ವಿಮಾನ ಹಾರಾಟ ಆರಂಭಗೊಂಡಿದೆ. 

ಉಡಾನ್ ಯೋಜನೆ ಅಡಿಯಲ್ಲಿ ವಿಮಾನಸೇವೆ ಚಾಲನೆ ಪಡೆದಿದ್ದು, ಇಂದು ಮಧ್ಯಾಹ್ನ 3.20 ರಿಂದ ಮೈಸೂರಿನಿಂದ ಗೋವಾಗೆ ಮೊದಲ ವಿಮಾನ ಹೊರಡಲಿದೆ. ಸಂಜೆ 5.20 ರಿಂದ ಗೋವಾದಿಂದ ಮೈಸೂರಿಗೆ ವಿಮಾನ ಹಾರಟ ಆರಂಭವಾಗಲಿದೆ.

ಅಲಯನ್ಸ್ ಏರ್ ಸಂಸ್ಥೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಇನ್ಮುಂದೆ ಹೆಚ್ಚು ಚಟುವಟಿಕೆಯಿಂದ ಕೂಡಿರಲಿದೆ.

ಈಗಾಗಲೇ ಮೈಸೂರಿನಿಂದ ಚೆನೈ, ಬೆಂಗಳೂರು, ಹೈದರಾಬಾದ್ ಗೆ ವಿಮಾನ ಹಾರಟ ಆರಂಭಿಸಲಾಗಿದೆ. ಇಂದಿನಿಂದ ಗೋವಾ ವಿಮಾನ ಸೇವೆಯೂ ಆರಂಭವಾಗಿದ್ದು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಿದ್ದರೆ.