ಹಾಂಗ್‌ಕಾಂಗ್‌ ಜೊತೆ ನೇರ ವಿಮಾನಯಾನ ಸಂಪರ್ಕ ಹೊಂದಿರುವ ದೇಶದ ಮೂರನೇ ನಗರ ಎಂಬ ಖ್ಯಾತಿಗೆ ಪಾತ್ರವಾದ ಬೆಂಗಳೂರು 

ಬೆಂಗಳೂರು(ಸೆ.03):  ಅಕ್ಟೋಬರ್‌ 11 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಗ್‌ಕಾಂಗ್‌ಗೆ ನೇರ ವಿಮಾನ ಸಂಪರ್ಕ ಸೇವೆ ಪ್ರಾರಂಭಗೊಳ್ಳಲಿದೆ. ಹಾಂಗ್‌ಕಾಂಗ್‌ ಜೊತೆ ನೇರ ವಿಮಾನಯಾನ ಸಂಪರ್ಕ ಹೊಂದಿರುವ ದೇಶದ ಮೂರನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ.

Add Asianetnews Kannada as a Preferred SourcegooglePreferred

ಕ್ಯಾಥೆ ಪೆಸಿಫಿಕ್‌ನ ಬೋಯಿಂಗ್‌ 777-300 ಎರಡು ವಿಮಾನ, ಎರಡೂ ನಗರಗಳ ನಡುವೆ ತಡೆ ರಹಿತ ಹಾರಾಟ ನಡೆಸಲಿದೆ. ಈ ವಿಮಾನದಲ್ಲಿ ಎಕನಾಮಿಕ್‌, ಪ್ರೀಮಿಯಂ ಎಕನಾಮಿಕ್‌ ಹಾಗೂ ಬಿಸಿನೆಸ್‌ ಕ್ಲಾಸ್‌ ಇರಲಿದೆ.
ಈ ಹೊಸ ಸೇವೆಯ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್‌, ಹಾಂಕಾಂಗ್‌ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ನೇರ ವಿಮಾನ ಸಂಪರ್ಕ ಪ್ರಾರಂಭಿಸುತ್ತಿದ್ದೇವೆ. ವಿಶ್ವದ 8 ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್‌ವೇ ಎಂದೇ ಪರಿಗಣಿಸಿವೆ. ಇದರ ಮುಂದುವರಿದ ಭಾಗವಾಗಿ ಇದೀಗ ಹಾಂಗ್‌ಕಾಂಗ್‌ಗೆ ನೇರವಾಗಿ ವಿಮಾನ ಹಾರಾಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.

ದೆಹಲಿ-ಬೆಳಗಾವಿ ಮಧ್ಯೆ ವಿಮಾನ ಶುರು

ಇದುವರೆಗೆ ಮುಂಬೈ ಹಾಗೂ ದೆಹಲಿಯಿಂದ ಮಾತ್ರ ಹಾಂಗ್‌ಕಾಂಗ್‌ಗೆ ನೇರ ವಿಮಾನ ಸಂಪರ್ಕವಿತ್ತು. ದಕ್ಷಿಣ ಭಾರತದ ಜನರು ಹಾಂಗ್‌ಕಾಂಗ್‌ಗೆ ತೆರಳಲು ದೆಹಲಿಯಲ್ಲಿ ಇಂಟರ್‌ಚೇಂಜ್‌ ಮಾಡಬೇಕಾಗಿತ್ತು. ಆದರೀಗ ದಕ್ಷಿಣ ಭಾರತದ ಜನರಿಗಾಗಿಯೇ ಬೆಂಗಳೂರಿನಲ್ಲಿ ನೇರ ಸಂಪರ್ಕ ಕಲ್ಪಿಸುವ ವಿಮಾನದ ಹಾರಾಟವನ್ನು ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ವಿವರಿಸಿದರು.