ಬೊಮ್ಮಾಯಿಯಿಂದ ಗೃಹ ಖಾತೆ ವಾಪಸ್ ಪಡೆಯಲಿ : ಸ್ವಾಮೀಜಿ

ಬಸವರಾಜ ಬೊಮ್ಮಾಯಿ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಗೃಹ ಖಾತೆಯನ್ನ ಯೋಗ್ಯ ವ್ಯಕ್ತಿಗೆ ನೀಡಬೇಕು ಎಮದು ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. 

dingaleshwara Swamiji Slams Basvaraj Bommaih  Over Mutt property  snr

ಹುಬ್ಬಳ್ಳಿ (ಜ.25):  ಕೆಎಲ್‌ಇ ಸಂಸ್ಥೆಗೆ ಮೂರು ಸಾವಿರ ಮಠದ ಆಸ್ತಿಯನ್ನು ಕೊಟ್ಟಿದ್ದು ತಪ್ಪು.ಮಠದ ಉನ್ನತ ಮಟ್ಟದ ಸಮಿತಿಯವರು ಮಠವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಬಾಲೆಹೊಸೂರಿನಲ್ಲಿ ಮಾತನಾಡಿದ ಸ್ವಾಮೀಜಿ ನನ್ನ ಬಗ್ಗೆ ಪತ್ರ ಹಂಚುವ ಮೂಲಕ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.  ಮಠದ ಆಸ್ತಿ ಹೊಡೆಯಲು ಆಡಳಿತ ಪಕ್ಷ, ವಿರೋಧ ಪಕ್ಷದವರು ಶಾಮಿಲಾಗಿದ್ದಾರೆ. ಬಿಜೆಪಿ, ವಿಶ್ವ ಹಿಂದು ಪರಿಷತ್ತು, ಆರ್‌ಎಸ್‌ಎಸ್, ಎಬಿವಿಪಿ, ಭಜರಂಗ ದಳದವರು ಬಾಯಿ ತೆರೆದು ಮಾತಾಡಬೇಕು.  ಮೂರು ಸಾವಿರ ಮಠದ ಆಸ್ತಿಯನ್ನು ಕೆಎಲ್‌ಇ ಸಂಸ್ಥೆ ಕೊಳ್ಳೆ ಹೊಡೆದ್ರು ನೀವು ಸುಮ್ಮನೆ ಕುಳಿತಿರುವ ಉದ್ದೇಶವೇನು.? ಎಂದು ಕೇಳಿದರು. 

ಶಿವಮೊಗ್ಗ ಹುಣಸೋಡು ಸ್ಫೋಟದ ಬಗ್ಗೆ ಬೊಮ್ಮಯಿ ಪ್ರತಿಕ್ರಿಯಿಸಿದ್ದು ಹೀಗೆ ..

ಮಠದ 500 ಕೋಟಿ ರೂಪಾಯಿ ಆಸ್ತಿಯನ್ನು ಕೆಲವೇ ಕೆಲವರು ಲೂಟಿ ಹೊಡೆದಿದ್ದಾರೆ.  ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಕಾಂಗ್ರೆಸ್ ನಾಯಕ ವೀರಣ್ಣ‌ ಮತ್ತಿಕಟ್ಟಿ ಸಾಥ್ ನೀಡಿದ್ದಾರೆ.  ಪ್ರಭಾಕರ್ ಕೊರೆ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಶಂಕ್ರಣ್ಣ ಮುನವಳ್ಳಿ, ಮೋಹನ‌ ಲಿಂಬಿಕಾಯಿ ಇವರೆಲ್ಲರೂ ಬಿಜೆಪಿಯವರೇ.  ಈ ಎಲ್ಲರೂ ಮಠದ ಉನ್ನತ ಮಟ್ಟದ ಸಮಿತಿಯಲ್ಲಿದ್ದಾರೆ. ಮಠದ ಆಸ್ತಿ ಮಠಕ್ಕೆ ಬರುವವರೆಗೂ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಬಸವರಾಜ ಬೊಮ್ಮಯಿಯವರು ನನ್ನಿಂದ ಬಹಳಷ್ಟು ಲಾಭವನ್ನ ತೆಗೆದುಕೊಂಡು ಹೋಗಿದ್ದಾರೆ.  ಈಗ ನಾನು ಮೂರು ಸಾವಿರ ಮಠಕ್ಕೆ ಹೋಗದಂತೆ ಪೊಲೀಸರನ್ನು ಬಂದೋಬಸ್ತ್‌ ನಿಲ್ಲಿಸುತ್ತಾರೆ.  ಬಸವರಾಜ ಬೊಮ್ಮಾಯಿ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಗೃಹ ಖಾತೆಯನ್ನ ಯೋಗ್ಯ ವ್ಯಕ್ತಿಗೆ ನೀಡಬೇಕು, ಬೊಮ್ಮಾಯಿಯಂತವರ ಕೈಯಲ್ಲಿ ಕೊಡಬಾರದು ಎಂದು ಅಸಮಾಧಾನ ಹೊರಹಾಕಿದರು. 

Latest Videos
Follow Us:
Download App:
  • android
  • ios