ಕಬ್ಬು ಬೆಳೆಗಾರರು ಎಫ್‌ಆರ್‍‌ಪಿ ಹೆಚ್ಚಳ ಹಾಗೂ ಎಥನಾಲ್ ಖರೀದಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಸಮಿತಿ ರಚಿಸಿದೆ ಎಂದು ದಿಂಗಾಲೇಶ್ವರ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ದಿನೇ-ದಿನೇ ಹೆಚ್ಚುತ್ತಲೇ ಹೋಗುತ್ತಿದೆ. ಅಲ್ಲದೇ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟ ಈ ಹೋರಾಟ ಇಂದು ಕಿತ್ತೂರು ನಾಡಿನಲ್ಲಿ ಒಗ್ಗೂಡಲಿದೆ. ಅಲ್ಲದೇ ಯಾವುದೇ ಕಾಣಕ್ಕೂ ಕಬ್ಬಿನ ಎಫ್‌ಆರ್‍‌ಪಿಯನ್ನು ಪ್ರತಿ ಟನ್‌ಗೆ 5500 ಹೆಚ್ಚಿಸಬೇಕು. ಎಥನಾಲ್‌ ಶೇ.100 ಎಥನಾಲ್‌ ಖರೀದಿ ಸೇರಿ ವಿವಿಧ ಬೇಡಿಕೆ ಇಟ್ಟು ಹೋರಾಟ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ದಿಂಗಾಲೇಶ್ವರ ಶ್ರೀ ರಾಮಕೃಷ್ಣ ಹೆಗಡೆ ಮಾತು ನೆನೆಪಿಸಿ ಮಾರ್ಮಿಕ ಮಾತನ್ನು ಆಡಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಹಾವೇರಿಯಲ್ಲಿ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಕಿಡಿ!

ರೈತರ ಹೋರಾಟ ಹತ್ತಿಕ್ಕಲು ಮತ್ತೊಂದು ಸಮಿತಿ ರಚನೆ ಮಾಡಿದ್ದಾರೆ. ತಮಾಷೆ ಅಂದ್ರೆ ಇದ್ದ ಸರ್ಕಾರ ಸ್ವಾಮಿನಾಥನ್ ಸಮಿತಿ ವರದಿ ಇದ್ದರೂ, ಅದನ್ನು ಜಾರಿ ಮಾಡದೇ, ಮತ್ತೊಂದು ಸಮಿತಿ ರಚನೆಗೆ ಮುಂದಾಗಿರ ದೊಡ್ಡ ಮೋಸ ಎಂದಿದ್ದಾರೆ. ರೈತರಿಗೆ ನ್ಯಾಯ ಕೊಡಬೇಕು ಅನ್ನೋ ಉದ್ದೇಶ ಸರ್ಕಾರಕ್ಕಿಲ್ಲ. ರೈತರ ಹೋರಾಟ ತಗ್ಗಿಸಲು ಸಮಿತಿ ರಚನೆ ಮಾಡಲಾಗಿದೆ. ರೈತರ ಹೋರಾಟದ ವಿಚಾರದಲ್ಲಿ ರಾಜಕೀಯ ಪಕ್ಷಗಳು ಮಧ್ಯೆ ಬರಬಾರದು ಎಂದು ಹೇಳಿದ್ದಾರೆ.

ಉತ್ತರಕ್ಕೆ ಸಿಗುವ ಸವಲತ್ತು, ದಕ್ಷಣಕ್ಕೂ ಸಿಗಲಿ!

ಉತ್ತರ ಭಾರತ–ದಕ್ಷಿಣ ಭಾರತ ಎಂದು ದೇಶವನ್ನು ಎರಡು ಭಾಗ ಮಾಡಿದೆ. ಉತ್ತರ ಭಾರತದ ರೈತರು, ಕಾರ್ಖಾನೆಗಳಿಗೆ ಸಿಗುವ ಆದ್ಯತೆ. ದಕ್ಷಿಣ ಭಾರತದ ರೈತರು, ಕಾರ್ಖಾನೆಗಳಿಗೆ ಸಿಗುತ್ತಿಲ್ಲ. ನಮ್ಮ ಭಾಗದಲ್ಲಿ ಕೇವಲ ಶೇ.20ರಷ್ಟು ಎಥನಾಲ್ ಖರೀದಿ. ಉತ್ತರ ಭಾರತದಲ್ಲಿ ಶೇ.80ರಷ್ಟು ಖರೀದಿ ದಕ್ಷಿಣ ಭಾರತದ ರೈತರಿಗೆ ಬಹುದೊಡ್ಡ ಅನ್ಯಾಯವಾಗುತ್ತಿದೆ. ಪವಿತ್ರ ಹಬ್ಬದ ಸಂದರ್ಭದಲ್ಲೂ ರೈತರು ತೀವ್ರ ನೋವಿನಲ್ಲಿದ್ದಾರೆ. ರೈತರ ನೋವು ಅರ್ಥ ಮಾಡಿಕೊಳ್ಳದವರ ವರ್ತನೆ ಸಂಕಟ ಉಂಟುಮಾಡಿದೆ ಯಾವುದೇ ಪರಿಸ್ಥಿತಿಯಲ್ಲೂ ರೈತರು ಹೋರಾಟ ಹಿಂಪಡೆಯಬಾರದು ಎಂದಿದ್ದಾರೆ.

ನ್ಯಾಯ ಪಡೆದುಕೊಂಡೇ ಮನೆಗೆ ಮರಳಬೇಕು!

ರೈತ ಸಂಘಟನೆಗಳ ವಿರುದ್ಧ ಮಾತನಾಡುವವರ ವಿರುದ್ಧ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ ದಿಂಗಾಲೇಶ್ವರ ಸ್ವಾಮೀಜಿ, ರೈತರ ಹೋರಾಟವನ್ನು ತೇಜೋವಧೆ ಮಾಡುವುದನ್ನು ಬಿಟ್ಟು ಬೇಡಿಕೆ ಈಡೇರಿಸಿ, ರಾಜ್ಯ ಸರ್ಕಾರ ಮಾಡಬೇಕಾದ ಕೆಲಸ ರಾಜ್ಯ ಸರ್ಕಾರ ಮಾಡಲಿ. ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸ ಕೇಂದ್ರ ಸರ್ಕಾರ ಮಾಡಲಿ. ಎರಡೂ ಸರ್ಕಾರಗಳು ರೈತರಿಗೆ ನ್ಯಾಯ ಒದಗಿಸಲಿ. ಕೇವಲ ರಾಜ್ಯ ಸರ್ಕಾರವನ್ನೇ ಗುರಿಯಾಗಿಸುವುದು ಸರಿಯಲ್ಲ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮಗೂ ಗೊತ್ತಿದೆ. ರೈತರೂ ಯಾವುದಕ್ಕೂ ಹಿಂಜರಿಯದೇ ನ್ಯಾಯ ಪಡೆದುಕೊಂಡೆ ಮುಂದಿನ ಹೆಜ್ಜೆ ಇಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ.

ಅತಿವೃಷ್ಟಿಗೆ ಸ್ಪಂದಿಸಿದ ಕೇಂದ್ರ!

ಹಿಂದೆ ಅತಿವೃಷ್ಟಿಯಾದಾಗ ಕೇಂದ್ರದ ಒಬ್ಬ ಸಚಿವರೂ ಗಮನ ಹರಿಸಿರಲಿಲ್ಲ. ಅಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದ್ದರು, ಆದರೆ ಇಲ್ಲಿ ಒಬ್ಬರ ಮುಖವನ್ನು ನೋಡಲಿಕ್ಕೆ ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತಾಪಿ ಕುಟುಂಬಗಳಿಂದ ರಾಜಕೀಯ ನಾಯಕರು ಬರಬೇಕು. ಶ್ರೀಮಂತ ಕುಟುಂಬಗಳಿಂದ ನಾಯಕರು ಬಂದರೆ ರೈತರ ನೋವು ಅರ್ಥ ಆಗಲ್ಲ. ರೈತರ ಬೇಡಿಕೆ ಈಡೇರಿಸಿ, ತೇಜೋವಧೆ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ರಾಮಕೃಷ್ಣ ಹೆಗಡೆ ಮಾತು ನೆನೆದ ದಿಂಗಾಲೇಶ್ವರ ಶೀ!

ಹೌದು, ನನಗೂ ನಮ್ಮ ಹಿರಿಯರೂ ಹೇಳುವ ಮಾತು ನೆನೆಪಿಗೆ ಬರುತ್ತದೆ. ರಾಮಕೃಷ್ಣ ಹೆಗಡೆ ಒಂದು ಮಾತು ಹೇಳಿದ್ದರಂತೆ, ಯಾವುದೇ ಒಂದು ಹೋರಾಟವನ್ನು ಅವಸಾನಕ್ಕೆ ತಳ್ಳಬೇಕಾದರೆ, ಒಂದು ಸಮಿತಿಯನ್ನು ರಚನೆ ಮಾಡಬೇಕಂತೆ, ಅದನ್ನು ರಚಿಸಿದರೆ ಆ ಹೋರಾಟವನ್ನು ಮುಗಿಸಬಿಟ್ಟಂತೆ ಎಂದು ಹೇಳಿದ್ದರಂತೆ. ಆದ್ದರಿಂದ ಈ ಸಮಿತಿಯನ್ನು ರಚಿಸುವುದು ರೈತರಿಗೆ ಮಾಡುವ ಮೋಸ ಎಂದು ಹೇಳಿದ್ದಾರೆ.