Asianet Suvarna News Asianet Suvarna News

ಸ್ಮಾರ್ಟ್ ಸಿಟಿಯಲ್ಲಿ ಡಿಜಿಟಲ್ ಆಟೋ ಬುಕ್ಕಿಂಗ್ ಸೇವೆ

ನಗರದ ಸಾರ್ವಜನಿಕರು ಆಟೋ ರಿಕ್ಷಾಗಳ ಸೇವೆಯನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಬುಕ್ ಮಾಡಿ ಬಳಕೆ ಮಾಡ ಕೊಳ್ಳಬಹುದು.

Digital Auto Booking Service in Smart City snr
Author
First Published Dec 1, 2023, 10:02 AM IST

  ತುಮಕೂರು :  ನಗರದ ಸಾರ್ವಜನಿಕರು ಆಟೋ ರಿಕ್ಷಾಗಳ ಸೇವೆಯನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಬುಕ್ ಮಾಡಿ ಬಳಕೆ ಮಾಡ ಕೊಳ್ಳಬಹುದು.

‘ನಮ್ಮ ಯಾತ್ರಿ’ ಅಪ್ಲಿಕೇಶನ್ ಮೂಲಕ ಆಟೋ ಸೇವೆ ನಮ್ಮ ಯಾತ್ರಿ ಅಪ್ಲಿಕೇಷನ್ ನಗರದಲ್ಲಿ ಬಿಡುಗಡೆಯಾಯಿತು.

ನಗರದ ಯಲ್ಲಮ್ಮ ಪುಟ್ಟಪ್ಪ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಮ್ಮ ಯಾತ್ರಿ ಅಪ್ಲಿಕೇಶನ್‌ ಬಿಡುಗಡೆ ಮಾಡಲಾಯಿತು.

ನಮ್ಮ ಯಾತ್ರಿ ಸಮುದಾಯದ ನಿರ್ದೇಶಕ ರಾಜೀವ್ ಮಾತನಾಡಿ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಟೋ ಚಾಲಕರು ಹಾಗೂ ಪ್ರಯಾಣಿಕರಿಗೆ ನೆರವಾಗಿರುವ ನಮ್ಮ ಯಾತ್ರಿ ಸ್ಮಾರ್ಟ್‌ ಸಿಟಿ ತುಮಕೂರಿನಲ್ಲೂ ಹೆಚ್ಚಿನ ಜನರಿಗೆ ಸಹಾಯವಾಗಲಿದೆ. ಆಟೋ ಚಾಲಕರು ಮತ್ತು ಗ್ರಾಹಕರ ನಡುವೆ ಸಾಮರಸ್ಯದ ಸಮುದಾಯ ನಿರ್ಮಿಸುವಲ್ಲಿ ಈ ಆ್ಯಪ್ ನೆರವಾಗಲಿದೆ.

ನಮ್ಮ ಯಾತ್ರಿಯ ಮುಖ್ಯಸ್ಥ ಶ್ಯಾನ್ ಮಾತನಾಡಿ, ತುಮಕೂರಿನಲ್ಲಿ ಆಟೋ ಪ್ರಯಾಣವನ್ನು ಆಧುನಿಕರಿಸಲು, ಜನರ ಬೇಡಿಕೆಗೆ ಅನುಗುಣವಾಗಿ ನಿಗದಿತ ಪ್ರಯಾಣ ದರದೊಂದಿಗೆ ಸೇವೆ ಒದಗಿಸಲಾಗುತ್ತದೆ. ಜೊತೆಗೆ ಆಟೋ ಚಾಲಕರ ಸಬಲೀಕರಣಕ್ಕೂ ಈ ಅಪ್ಲಿಕೇಶನ್ ನೆರವಾಗಲಿದೆ ಎಂದರು.

ಆಟೋ ಚಾಲಕರ ಸಂಘದ ಮುಖಂಡ ನವೀನ್‌ ಕುಮಾರ್, ನಗರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು, ಮನೆ ಬಾಗಿಲಿಗೆ ಬಂದು ಪಿಕಪ್ ಮಾಡಲು ಸಾರ್ವಜನಿಕರಿಗೆ ಇಂತಹ ಯೋಜನೆಯ ಬೇಡಿಕೆ ಇತ್ತು. ಇಂದಿನಿಂದ ಈ ಸೇವೆ ಆರಂಭವಾಗಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯ ಸೂಪರಿಂಟೆಂಡೆಂಟ್ ಬಿ.ಎಚ್. ರಾಜೇಶ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಮುಖಂಡರಾದ ಎಂ.ಎಸ್.ಚಂದ್ರಶೇಖರ್, ಚಾಂದ್ ಪಾಷ, ನುಸ್ರತ್ ಉಲ್ಲಾ ಖಾನ್ ಷರೀಫ್ ಹಾಗೂ ವಿವಿಧ ಆಟೋ ಚಾಲಕರ ಸಂಘದ ಮುಖಂಡರು ಭಾಗವಹಿಸಿದ್ದರು.

Follow Us:
Download App:
  • android
  • ios