ಉತ್ತರ ಕನ್ನಡ: ವಿಕಲ ಚೇತನರಿಗೆ ಬಸ್ ನಿಲ್ದಾಣದಲ್ಲಿ ತಪ್ಪದ‌ ಸಂಕಷ್ಟ

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ವಿಕಲಚೇತನರ ರ‍್ಯಾಂಪ್ ಎದುರು ಶುಲ್ಕದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರಿಂದ ವಿಕಲಚೇತನರ ಓಡಾಟಕ್ಕೆ ತೊಂದರೆ ಉಂಟಾಗಿದ್ದು, ಈ ರ‍್ಯಾಂಪ್ ಪ್ರಯೋಜನಕ್ಕೆ ಬಾರದಂತಾಗಿದೆ. 

Difficulty for disabled passengers at Kumta bus stand uttarakannada rav

ಕುಮಟಾ (ಫೆ.27) : ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ವಿಕಲಚೇತನರ ರ‍್ಯಾಂಪ್ ಎದುರು ಶುಲ್ಕದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರಿಂದ ವಿಕಲಚೇತನರ ಓಡಾಟಕ್ಕೆ ತೊಂದರೆ ಉಂಟಾಗಿದ್ದು, ಈ ರ‍್ಯಾಂಪ್ ಪ್ರಯೋಜನಕ್ಕೆ ಬಾರದಂತಾಗಿದೆ. 

ಕುಮಟಾ ಪಟ್ಟಣ(Kumata town)ದ ಹೊಸ ಬಸ್ ನಿಲ್ದಾಣದಲ್ಲಿ ವಿಕಲಚೇತನ(Disability) ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಕೆಎಸ್‌ಆರ್‌ಟಿಸಿ(KSRTC) ಸಂಸ್ಥೆ  ರ‍್ಯಾಂಪ್ ನಿರ್ಮಿಸಿದೆ. ಬಸ್ ನಿಲ್ದಾಣದೊಳಕ್ಕೆ ತೆರಳುವ ಮೆಟ್ಟಿಲುಗಳನ್ನು ಹತ್ತಲು ತೊಂದರೆಯಾಗುವುದರಿಂದ ವಿಕಲಚೇತನರಿಗಾಗಿ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಸಂಸ್ಥೆಯು ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಸಿ, ರ‍್ಯಾಂಪ್ ನಿರ್ಮಿಸಿದ್ದು, ಇಳಿಜಾರಾಗಿರುವ ರ‍್ಯಾಂಪ್‌ನಲ್ಲಿ  ಸುಲಭವಾಗಿ ತೆರಳಬಹುದು. ಅಲ್ಲದೇ, ವ್ಹೀಲ್ ಚೇರ್(Wheel chair) ಮೇಲೆ ಬರುವ ವಿಕಲಚೇತನರಿಗೆ ಈ ರ‍್ಯಾಂಪ್ ಹೆಚ್ಚು ಸಹಾಯಕಾರಿಯಾಗಲಿದೆ. 

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಪ್ರಯಾಣಿಕರಿಗೆ ವಿಶೇಷ ಸೇವೆ

ಆದ್ರೆ, ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿರುವ ಈ ರ‍್ಯಾಂಪ್ ಲಗೇಜ್‌ಗಳನ್ನಿಡುವ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲದೇ, ಈ ರ‍್ಯಾಂಪ್‌ನ ಎದುರಲ್ಲಿಯೇ ಶುಲ್ಕವಿರುವ ಬೈಕ್ ಪಾರ್ಕಿಂಗ್(Bike parking) ವ್ಯವಸ್ಥೆ ಮಾಡಲಾಗಿದ್ದು, ಬಹುತೇಕ ಪ್ರಯಾಣಿಕರು ಈ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇಟ್ಟು ತೆರಳುವುದರಿಂದ ರ‍್ಯಾಂಪ್‌ನ ಮುಂಭಾಗ ಬೈಕ್‌ಗಳಿಂದಲೇ ಮುಚ್ಚಿರುತ್ತದೆ. ಹಾಗಾಗಿ ವಿಕಲಚೇತನರು ಬಸ್ ನಿಲ್ದಾಣದೊಳಕ್ಕೆ ಬರಲು ಸಮಸ್ಯೆ ಉಂಟಾಗಿದೆ. 

ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ರ‍್ಯಾಂಪ್‌ನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ವಿಕಲಚೇತನರಿಗೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ  ಬಸ್ ನಿಲ್ದಾಣದ ಎದುರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮಂಜುನಾಥ ಕಾಗಲ್(Manjunath kagal) ಅವರು ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios