ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವುದು ಅತ್ಯಂತ ಕಷ್ಟಕರ ಕೆಲಸ. ಅದೊಂದು ಮುಳ್ಳಿನ ಹಾಸಿಗೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.

 ಹೊಸಕೋಟೆ (ಆ.31): ಅಧಿಕಾರ ಎನ್ನುವುದು ಪಡೆದುಕೊಂಡಾಗ ಸಂಭ್ರಮದ ಜೊತೆಗೆ ಅಧಿಕಾರ ನಿಭಾಯಿಸುವುದು ಕಷ್ಟಕರವಾದ್ದು, ಒಂದು ರೀತಿಯಲ್ಲಿ ಮುಳ್ಳಿನ ಹಾಸಿಗೆ ಇದ್ದಂತೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎ.ಅಪ್ಸರ್‌ ತಿಳಿಸಿದರು.

ನಗರದ ಸಯ್ಯದ್‌ ಪ್ಯಾಲೇಸ್‌ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಎಂಟಿಬಿ ನಾಗರಾಜ್‌ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಹೊಸಕೋಟೆ ನಗರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಸಂಘಟನೆ ಮಾಡುವ ಮೂಲಕ ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತೇನೆ. ಬಿಜೆಪಿ ದೇಶದಲ್ಲಿ ಅತಿ ದೊಡ್ಡ ಹಾಗೂ ಸರ್ವ ಧರ್ಮಿಯ ಸಮಾನತೆ ಪಕ್ಷವಾಗಿದೆ ಎಂದರು.

ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್?..

ಅಲ್ಪಸಂಖ್ಯಾತ ಮುಖಂಡ ಶೌರತ್‌ ಮಾತನಾಡಿ ಬಿಜೆಪಿ ಪಕ್ಷ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ಥಾನಮಾನ ನೀಡಿದೆ. ನಗರಸಭೆಯಲ್ಲಿ 4 ಸದಸ್ಯರು, ಟೌನ್‌ ಬ್ಯಾಂಕ್‌ನಲ್ಲಿ ಇಬ್ಬರು ನಿದೇಶಕರು ಬಿಜೆಪಿಯಿಂದ ಗೆದ್ದಿದ್ದು, ಗೆಲುವಿಗಾಗಿ ಹಲವಾರು ನಾಯಕರು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟುಸ್ಥಾನಮಾನವನ್ನು ಬಿಜೆಪಿ ಪಕ್ಷ ನೀಡಲಿದ್ದು ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತಾಗಬೇಕು ಎಂದರು.

ನಗರಸಭೆ ಸದಸ್ಯರಾದ ಗುಲ್ಜಾರ್‌, ವೆಂಕಟೇಶ್‌, ರೋಷನ್‌, ಖಲೀಂ, ಮುಖಂಡರಾದ ಅಬ್ದುಲ್ಲಾ, ಸಾದಿಕ್‌, ಜಾವಿದ್‌, ಯಾರಬ್‌, ಶಕೀಲ್‌, ಇನಾಯತ್‌ ಉಲ್ಲಾ, ಜಮ್ರುದ್‌, ಅನ್ಸರ್‌, ತಬು ಇದ್ದರು.