Asianet Suvarna News Asianet Suvarna News

ಮಂಗಳೂರು: ನೇತ್ರಾವತಿ ಎಕ್ಸಪ್ರೆಸ್‌ ರೈಲಿನಲ್ಲಿ ಡೀಸೆಲ್‌ ಸೋರಿಕೆ

ಮುಂಬೈನಿಂದ ತಿರುವನಂತಪುರದ ಕಡೆಗೆ ಹೊರಟಿದ್ದ ನೇತ್ರಾವತಿ ಎಕ್ಸಪ್ರೆಸ್‌ ರೈಲಿನಲ್ಲಿ ಶನಿವಾರ ಮುಂಜಾನೆ ಡೀಸೆಲ್‌ ಸೋರಿಕೆಯಾಗಿ ಮೂಲ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದು ಪ್ರಯಾಣಿಕರು ತೊಂದರೆಗೀಡಾದರು. ರೈಲಿನಲ್ಲಿ ಸುಮಾರು 600ರ ವರೆಗೆ ಪ್ರಯಾಣಿಕರಿದ್ದು ಏಕಾಏಕಿ ರೈಲು ನಿಲುಗಡೆಯಿಂದ ತೊಂದರೆಗೀಡಾದರು.

Diese leakage in train at mangalore
Author
Bangalore, First Published Sep 1, 2019, 3:35 PM IST

ಮಂಗಳೂರು(ಸೆ.01): ಮುಂಬೈನಿಂದ ತಿರುವನಂತಪುರದ ಕಡೆಗೆ ಹೊರಟಿದ್ದ ನೇತ್ರಾವತಿ ಎಕ್ಸಪ್ರೆಸ್‌ ರೈಲಿನಲ್ಲಿ ಶನಿವಾರ ಮುಂಜಾನೆ ಡೀಸೆಲ್‌ ಸೋರಿಕೆಯಾಗಿ ಮೂಲ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದು ಪ್ರಯಾಣಿಕರು ತೊಂದರೆಗೀಡಾದರು.

ಶುಕ್ರವಾರ ಮಧ್ಯಾಹ್ನ ಮುಂಬಾಯಿಯ ಪನ್ವೇಲಿನಿಂದ 12 ಗಂಟೆಗೆ ತಿರುವನಂತಪುರ ಕಡೆಗೆ ಹೊರಟಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ಪಡುಬಿದ್ರೆ ತಲುಪುತ್ತಿದ್ದಂತೆ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಡೀಸೆಲ್‌ ಸೋರಿಕೆಯಾಗಿದೆ.

ಕುಡ್ಲದಲ್ಲಿ ಬ್ಯಾಂಕಿಗೂ-ಬ್ಯಾಂಕಿಗೂ ಮದುವೆ..!

ಇದನ್ನು ಗಮನಿಸಿದ ಚಾಲಕ ಮೂಲ್ಕಿಯಲ್ಲಿ ರೈಲು ನಿಲ್ಲಿಸಿದ್ದಾನೆ. ರೈಲಿನಲ್ಲಿ ಸುಮಾರು 600ರ ವರೆಗೆ ಪ್ರಯಾಣಿಕರಿದ್ದು ಏಕಾಏಕಿ ರೈಲು ನಿಲುಗಡೆಯಿಂದ ತೊಂದರೆಗೀಡಾದರು. ಓಣಂ ಹಬ್ಬದ ಪ್ರಯುಕ್ತ ಊರಿಗೆ ತೆರಳುತ್ತಿದ್ದ ಕೇರಳೀಯರಿಗೂ ಅತಂತ್ರ ಸ್ಥಿತಿ ಎದುರಾಗಿತ್ತು. ಸುಮಾರು ಎರಡು ತಾಸು ಬಳಿಕ ಸುರತ್ಕಲ್‌ನಿಂದ ಬೇರೆ ಎಂಜಿನ್‌ ತರಿಸಿ ರೈಲು ಮತ್ತೆ ಪ್ರಯಾಣ ಮುಂದುವರಿಸಿದೆ.

Follow Us:
Download App:
  • android
  • ios