Asianet Suvarna News Asianet Suvarna News

ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದಕೊಂಡಿತೆ ಜೆಡಿಎಸ್‌?

ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದಕೊಳ್ಳಿತೇ ಜೆಡಿಎಸ್‌?

ಮೀಸಲಾತಿ ಕಿಚ್ಚಿನಿಂದ ದೂರ ಉಳಿಯುವ ಸುಳಿವು ಕೊಟ್ಟಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ

Did JDS keep distance from Okkaligas reservation struggle  snr
Author
First Published Nov 29, 2022, 6:33 AM IST

ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ ( ನ.29):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 123 ಸೀಟು ಗುರಿಯೊಂದಿಗೆ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಚುನಾವಣೆ ಘೋಷಣೆಗೂ ಮೊದಲೇ ಮತದಾರರ ಬೇಟೆ ಆರಂಭಿಸಿರುವ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಸದ್ಯ ಭುಗಿಲೇಳುತ್ತಿರುವ ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ.

ಚಿಕ್ಕಬಳ್ಳಾಪುರ (Chikkaballapura)  ವಿಧಾನಸಭಾ ಕ್ಷೇತ್ರದ ನಂದಿಯಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ವೇಳೆ, ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಪಾಡುವ ಸುಳಿವು ಎಚ್ ಡಿ ಕುಮಾರಸ್ವಾಮಿ (HD Kumaraswamy ) ನೀಡಿದ್ದು, ಇದೇ ಕಾರಣಕ್ಕೆ ಪಂಚರತ್ನ ರಥಯಾತ್ರೆ ನೆಪವೊಡ್ಡಿ ಭಾನುವಾರ ಬೆಂಗಳೂರಿನಲ್ಲಿ ಒಕ್ಕಲಿಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಹೋರಾಟದ ರೂಪುರೇಷಗಳ ಸಭೆಗೂ ಕುಮಾರಸ್ವಾಮಿ ಗೈರಾಗಿದ್ದರು.

ಕಾಂಗ್ರೆಸ್‌ ಪಕ್ಷದಿಂದ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ ಪಕ್ಷದಿಂದ ಮಾಜಿ ಸಿಎಂ ಸದಾನಂದಗೌಡ ಸೇರಿದಂತೆ ಕಂದಾಯ ಸಚಿವರಾದ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪಾಲ್ಗೊಂಡಿದ್ದರು. ಆದರೆ ಜೆಡಿಎಸ್‌ನಿಂದ ಪಕ್ಷದ ಪ್ರಮುಖರು ಯಾರು ಕೂಡ ಒಕ್ಕಲಿಗರ ಮೀಸಲಾತಿ ಸಂಬಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ಹಿಡಿಯಬೇಕೆಂಬ ಮಹತ್ವಕಾಂಕ್ಷೆ ಹೊತ್ತು ಕುಮಾರಸ್ವಾಮಿ ರಾಜ್ಯದಲ್ಲಿ 100 ದಿನಗಳ ಕಾಲ ಪಂಚ±ರತ್ನ ರಥಯಾತ್ರೆ ನಡೆಸುತ್ತಿದ್ದು ಇತಂಹ ಸಂದರ್ಭದಲ್ಲಿ ತಮ್ಮ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡರೆ ಬೇರೆ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬಹುದೆಂದು ಹೇಳಿ ಕುಮಾರಸ್ವಾಮಿ ಮೀಸಲಾತಿ ಕಿಚ್ಚಿನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ.

ಸ್ವಾಮೀಜಿ ನನಗೂ ಕರೆದಿದ್ದರು: ಒಕ್ಕಲಿಗರಿಗೆ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ.4 ರಿಂದ ಶೇ.12 ರಷ್ಟುಹೆಚ್ಚಿಸಬೇಕೆಂಬ ಒತ್ತಡ ಇದೆ. ಆದರೆ ಮೊದಲು ರಾಜ್ಯದಲ್ಲಿ ನಮ್ಮ ಸಮಾಜದ ಶೈಕ್ಷಣಿಕ, ಉದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವರದಿ ತರಿಸಿಕೊಳ್ಳಿಯೆಂದು ಶ್ರೀಗಳಿಗೆ ಹೇಳಿದ್ದೇನೆ. ನಮ್ಮಲ್ಲಿಯೆ ಅನೇಕ ಪಗಂಡ, ಉಪಗಂಡಗಳು ಇವೆ. ಎಷ್ಟುಮಂದಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದ್ದಾರೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ಮೀಸಲಾತಿ ಹೋರಾಟ ನಡೆಯಬೇಕೆಂದು ಶ್ರೀಗಳಿಗೆ ತಿಳಿಸಿದ್ದೇನೆಂದರು.

ಒಟ್ಟಾರೆ ರಾಜ್ಯ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗ ವಿವಿಧ ಸಮಾಜಗಳು ಮೀಸಲಾತಿಗಾಗಿ ಹೋರಾಟದ ಕಿಚ್ಚು ಹೆಚ್ಚು ಮಾಡುತ್ತಿರುವಾಗಲೇ ಅದರಲ್ಲೂ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯದ ಶ್ರೀಗಳು ಈಗ ಹೋರಾಟಕ್ಕೆ ದಿನಾಂಕ ನಿಗಧಿಪಡಿಸಿರುವವಾಗಲೇ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನೆಪದಲ್ಲಿ ಸಮುದಾಯದ ಹೋರಾಟದಿಂದ ದೂರ ಉಳಿದು ಎಲ್ಲ ವರ್ಗಗಳ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಕೋಟ್‌

ನಾನು ಜಾತಿ ರಾಜಕಾರಣ ಮಾಡಿಲ್ಲ. ಮಾಡುವುದು ಇಲ್ಲ. ನಾನು ಮುಖ್ಯಮಂತ್ರಿಯಾದರೆ, ಶ್ರೀಮಂತ, ಬಡವ ಎನ್ನುವುದರ ಆಧಾರದ ಮೇಲೆ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿ ಮೇಲೆ ಮೀಸಲಾತಿ ಒದಗಿಸುವ ಕೆಲಸ ಮಾಡುತ್ತೇನೆ.

-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಒಕ್ಕಲಿಗರ ಮೀಸಲಾತಿ:ಕುಮಾರಸ್ವಾಮಿ ಹೇಳಿದ್ದೇನು?

ಮೀಸಲಾತಿ ಎನ್ನುವುದು ಜನ ಸಂಖ್ಯೆಗೆ ಅನುಗುಣವಾಗಿ ನೀಡುವುದು ಅಲ್ಲ. ಯಾವ ಸಮುದಾಯ ಆರ್ಥಿಕ, ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದಿದೆ. ಅದರಲ್ಲೂ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗೆ ಇರುವ ಯಾವುದೇ ಜಾತಿಯ ಬಡವರಿಗೂ ಆದ್ಯತೆಯಾಗಿ ಮೀಸಲಾತಿ ಸಿಗಬೇಕೆಂದು ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರು.

ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದಕೊಳ್ಳಿತೇ ಜೆಡಿಎಸ್‌?

ಮೀಸಲಾತಿ ಕಿಚ್ಚಿನಿಂದ ದೂರ ಉಳಿಯುವ ಸುಳಿವು ಕೊಟ್ಟಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ

Follow Us:
Download App:
  • android
  • ios