Asianet Suvarna News Asianet Suvarna News

ಹಾವೇರಿ: 304 ಜನರ ಕೊರೋನಾ ವರದಿ ನೆಗೆಟಿವ್‌

ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದವರ ಒಟ್ಟು 7025 ಜನರ ರಕ್ತ, ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ರವಾನೆ| ಕೊರೋನಾ ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್‌ನಲ್ಲಿ ಒಬ್ಬರನ್ನು ದಾಖಲಿಸಿಕೊಂಡು ಚಿಕಿತ್ಸೆ|

DHO M jayanand says 304 people Coronavirus Report Negative From Haveri district
Author
Bengaluru, First Published Jun 4, 2020, 8:35 AM IST

ಹಾವೇರಿ(ಜೂ.04): ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದ 304 ಜನರ ಲ್ಯಾಬ್‌ ವರದಿ ನೆಗಟಿವ್‌ ಬಂದಿದ್ದು, ಬುಧವಾರ ಮತ್ತೆ 231 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪ್ರಭಾರ ಡಿಎಚ್‌ಒ ಡಾ. ಎಂ. ಜಯಾನಂದ ತಿಳಿಸಿದ್ದಾರೆ. 

ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದವರ ಒಟ್ಟು 7025 ಜನರ ರಕ್ತ, ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೋನಾ ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್‌ನಲ್ಲಿ ಒಬ್ಬರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಹಾವೇರಿ: ನಾಲ್ಕು ತಿಂಗಳಾದರೂ ಕಾಯಿ ಬಿಡದ ಮೆಣಿಸಿನ ಗಿಡ, ಸಂಕಷ್ಟದಲ್ಲಿ ರೈತ

ಈವರೆಗೆ ಒಟ್ಟು 7055 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 6558 ವರದಿಗಳು ನೆಗೆಟಿವ್‌ ಬಂದಿದೆ. 16 ಕೊರೋನಾ ಪಾಸಿಟಿವ್‌ ಬಂದಿದ್ದು, 6 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದ 441 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios