ಕೊನೆಗೂ ಗೆದ್ದ ಲಕ್ಷ್ಮೀ ಹೆಬ್ಬಾಳ್ಕರ್: ಶೀಘ್ರದಲ್ಲೇ ಪಿಎಲ್ ಡಿ ಬ್ಯಾಂಕ್ ಚುನಾವಣೆ!

First Published 5, Sep 2018, 2:39 PM IST
Dharwar High Court orders for PLD Bank election
Highlights

ಲಕ್ಷ್ಮೀ ಹೆಬ್ಬಾಳ್ಕರ್ ಗುಂಪಿಗೆ ಕಾನೂನು ಹೋರಾಟದಲ್ಲಿ ಜಯ! ಆದಷ್ಟು ಬೇಗ ಪಿಎಲ್ ಡಿ ಬ್ಯಾಂಕ್ ಚುನಾವಣೆ ನಡೆಸುವಂತೆ ಆದೇಶ! ಮಹತ್ವದ ತೀರ್ಪು ಪ್ರಕಟಿಸಿದ ಧಾರವಾಡ ಹೈಕೋರ್ಟ್! ಬೇಗ ಚುನಾವಣೆ ನಡೆಸುವಂತೆ ಬೆಳಗಾವಿ ತಹಶೀಲ್ದಾರಗೆ ಸೂಚನೆ

 

ಬೆಳಗಾವಿ(ಸೆ.5): ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ.

ಆ.28ರಂದು ನಡೆಯಬೇಕಿದ್ದ ಚುನಾವಣೆಯನ್ನು ರಾಜಕೀಯ ಕಾರಣಗಳಿಂದ ತಹಶೀಲ್ದಾರ ಮುಂದೂಡಿದ್ದರು. ಪಿಎಲ್ ಡಿ ಬ್ಯಾಂಕ್ ನಿರ್ದೇಶಕರೊಬ್ಬರು ಕಾಣೆಯಾಗಿದ್ದಾರೆ ಎಂಬ ಆರೋಪದಲ್ಲಿ ತಹಶೀಲ್ದಾರ ಚುನಾವಣೆಯನ್ನು ಮುಂದೂಡಿದ್ದರು. ತಹಶೀಲ್ದಾರ ನಡೆ ಪ್ರಶ್ನಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿತ ೯ ನಿರ್ದೇಶಕರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಆದಷ್ಟು ಬೇಗ ಚುನಾವಣೆ ನಡೆಸುವಂತೆ ಬೆಳಗಾವಿ ತಹಶೀಲ್ದಾರ ಮತ್ತು ಪಿಎಲ್ ಡಿ ಬ್ಯಾಂಕ್ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ. ಹೆಬ್ಬಾಳ್ಕರ್ ಪರ ಇರುವ ೯ ನಿರ್ದೇಶಕರ ಒಪ್ಪಿಗೆ ಮೇರೆಗೆ ಚುನಾವಣೆ ನಡೆಸಿ ಎಂದು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗುಂಪಿಗೆ ಜಯ ಸಿಕ್ಕಂತಾಗಿದೆ.

loader