ಧಾರ​ವಾಡ[ಫೆ.06]: ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವ ಮೂಲಕ ಅಧಿಕಾರಿಗಳು ಹಾಗೂ ಸ್ವಪಕ್ಷದ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದ ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ವಿರೋಧ ಪಕ್ಷಗಳ ಜತೆಗೂಡಿ ಸ್ವಪಕ್ಷದ ಸದಸ್ಯರೇ ಅಧಿಕಾರದಿಂದ ಕೆಳಗಿಳಿಸಿದ್ದಾರೆ.

ಧಾರವಾಡದ ಜಿ.ಪಂ. ಅಧ್ಯ​ಕ್ಷೆ ಚೈತ್ರಾ ಶಿರೂರ ವಿರುದ್ಧ ಮಂಡ​ನೆ​ಯಾ​ಗಿದ್ದ ಅವಿ​ಶ್ವಾಸ ಗೊತ್ತು​ವಳಿಗೆ ಮಂಗ​ಳ​ವಾರ ನಡೆದ ವಿಶೇಷ ಸಭೆ​ಯಲ್ಲಿ ಅನುಮೋದನೆ ಸಿಕ್ಕಿದ್ದು, ಅಧಿಕಾರ ಕಳೆದುಕೊಂಡಿದ್ದಾರೆ. ಇದರಿಂದ ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

ಜಿಪಂ ಒಟ್ಟು 22 ಸಂಖ್ಯಾಬಲ ಹೊಂದಿದ್ದು, ಬಿಜೆಪಿ 10, ಕಾಂಗ್ರೆಸ್‌ 11 ಹಾಗೂ ಒಬ್ಬ ಪಕ್ಷೇ​ತರ ಸದ​ಸ್ಯ​ರಿ​ದ್ದಾರೆ. ಪಕ್ಷೇ​ತರ ಸದ​ಸ್ಯ ಶಿವಾ​ನಂದ ಕರಿ​ಗಾರ ಬೆಂಬಲ ಪಡೆದು ಬಿಜೆಪಿ ಎರಡೂವರೆ ವರ್ಷಗಳ ಹಿಂದೆ ಅಧಿ​ಕಾ​ರದ ಗದ್ದುಗೆ ಏರಿತ್ತು. ಚೈತ್ರಾ ಶಿರೂರ ಅಧ್ಯಕ್ಷೆಯಾಗಿದ್ದರು.

ಆದರೆ, ಚೈತ್ರಾ ಶಿರೂರ ವರ್ತ​ನೆ ಹಾಗೂ ಅಧಿ​ಕಾ​ರಿ​ಗಳು, ಸದ​ಸ್ಯ​ರೊಂದಿಗೆ ಹೊಂದಾ​ಣಿಕೆ ಇಲ್ಲ​ದಿ​ರುವ ಕಾರಣ ಸ್ವ ಪಕ್ಷ ಬಿಜೆಪಿ ಸದ​ಸ್ಯ​ರ​ಲ್ಲಿಯೇ ಭಿನ್ನ​ಮತ ಉಂಟಾ​ಗಿತ್ತು. ಇದರ ಲಾಭ ಪಡೆದ ಕಾಂಗ್ರೆಸ್‌ ಸದ​ಸ್ಯರು ಅವಿ​ಶ್ವಾಸ ಮಂಡಿಸಿದ್ದರು. ಚೈತ್ರಾ ಶಿರೂರ ವಿರುದ್ಧ ಅವಿ​ಶ್ವಾಸ ಮಂಡಿ​ಸಲು 15 ಮತ​ಗಳು ಬೇಕಿತ್ತು. ಕಾಂಗ್ರೆಸ್‌ 11, ಪಕ್ಷೇ​ತರ ಒಂದು ಹಾಗೂ ಬಿಜೆ​ಪಿಯ ನಾಲ್ಕು ಜನ (ರತ್ನಾ ಪಾಟೀಲ, ಅಣ್ಣಪ್ಪ ದೇಸಾಯಿ, ಮಂಜವ್ವ ಹರಿಜನ, ಜ್ಯೋತಿ ಬೆಂತೂರ) ಒಟ್ಟು 16 ಜನ ಕೈ ಎತ್ತಿದ ಕಾರಣ ಅವಿ​ಶ್ವಾಸಕ್ಕೆ ಜಯ ದೊರೆ​ಯಿತು.