Asianet Suvarna News Asianet Suvarna News

ಅ.7ರಂದು ಧಾರ​ವಾಡ ದಸರಾ ಜಂಬೂ ಸವಾ​ರಿ

ಇಂದಿನಿಂದ ಅ. 8ರ ವರೆಗೆ ಧಾರ​ವಾಡ ದಸರಾ ಕಾರ್ಯ​ಕ್ರ​ಮ​ಗಳು| ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ​ದಲ್ಲಿ ಮಹಿಳೆ, ಮಕ್ಕಳ ಕಾರ್ಯ​ಕ್ರ​ಮ​ಗಳು| ಗಾಂಧಿ​ನ​ಗರ ಈಶ್ವರ ದೇವ​ಸ್ಥಾ​ನ​ದಲ್ಲಿ ದೇವಿ ಕಾರ್ಯ​ಕ್ರ​ಮ​ಗ​ಳು| ಇಂದು ದುರ್ಗಾದೇವಿ ಮೂರ್ತಿ ಮೆರ​ವ​ಣಿಗೆ ಹಾಗೂ ಪ್ರತಿ​ಷ್ಠಾ​ಪನೆ, ಪೂಜಾ ಕಾರ್ಯ​ಕ್ರ​ಮ​ಗಳ ಮೂಲಕ ಅಧಿ​ಕೃತ ದಸರಾ ಹಬ್ಬಕ್ಕೆ ಚಾಲನೆ| ಅ. 7ರಂದು ಗಾಂಧಿ​ನ​ಗರ ಈಶ್ವರ ದೇವ​ಸ್ಥಾ​ನ​ದಿಂದ ಬೃಹತ್‌ ಜಂಬೂ ಸವಾರಿ ಮೆರ​ವ​ಣಿಗೆ| 

Dharwad Jumboo Savaro Will be Held at Oct. 7th
Author
Bengaluru, First Published Sep 29, 2019, 7:35 AM IST

ಧಾರ​ವಾಡ(ಸೆ.29): ಧಾರ​ವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ವತಿ​ಯಿಂದ ಈ ಬಾರಿ ಸೆ. 29ರಿಂದ ಅಕ್ಟೋ​ಬರ್‌ 8ರ ವರೆಗೆ ನಗ​ರದ ವಿವಿ​ಧೆಡೆ ದಸರಾ ಉತ್ಸವದ ಕಾರ್ಯ​ಕ್ರ​ಮ​ಗ​ಳನ್ನು ಆಯೋ​ಜಿ​ಸ​ಲಾ​ಗಿ​ದೆ ಎಂದು ಸಮಿತಿ ಅಧ್ಯಕ್ಷ ಗುರು​ರಾಜ ಹುಣ​ಸಿಮ​ರದ ಹೇಳಿ​ದರು.

ಶನಿವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಈಗಾ​ಗಲೇ ಕಲಾ​ಭ​ವನ ಮೈದಾ​ನ​ದಲ್ಲಿ ದಸರಾ ನಿಮಿತ್ತ ವಸ್ತು ಪ್ರದ​ರ್ಶನ ನಡೆ​ಯು​ತ್ತಿದೆ. ಸೆ. 29ರಂದು ದುರ್ಗಾದೇವಿ ಮೂರ್ತಿ ಮೆರ​ವ​ಣಿಗೆ ಹಾಗೂ ಪ್ರತಿ​ಷ್ಠಾ​ಪನೆ, ಪೂಜಾ ಕಾರ್ಯ​ಕ್ರ​ಮ​ಗಳ ಮೂಲಕ ಅಧಿ​ಕೃತ ದಸರಾ ಹಬ್ಬಕ್ಕೆ ಚಾಲನೆ ದೊರೆ​ಯ​ಲಿದೆ ಎಂದು ತಿಳಿಸಿದರು.

ಗಾಂಧಿ​ನ​ಗ​ರದ ಈಶ್ವರ ದೇವ​ಸ್ಥಾ​ನ​ದಲ್ಲಿ ನಿತ್ಯ ಬೆಳಗ್ಗೆ ಭಕ್ತ​ರಿಂದ ಪೂಜಾ ಕಾರ್ಯ​ಕ್ರ​ಮ​ಗಳು ಜರುಗಲಿವೆ. ಸೆ. 30ರಿಂದ ಅ. 8ರ ವರೆಗೂ ವಿವಿಧ ಮಹಿಳಾ ಮಂಡಳ ಮತ್ತು ಭಜನಾ ಮಂಡ​ಳಿ​ಗ​ಳಿಂದ ಭಜನೆ, 101 ಕುಮಾ​ರಿ​ಯ​ರಿಗೆ ಉಡಿ ತುಂಬು​ವುದು, ಕುಂಕು​ಮಾ​ರ್ಜನೆ, ಭಕ್ತಿ​ಗೀ​ತೆ​ಗಳು ನಡೆ​ಯ​ಲಿವೆ. ಪ್ರತಿ​ನಿತ್ಯ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿ​ದ್ದಾರೆ. ಸೆ. 29ರಿಂದ ಅ. 8ರ ವರೆಗೆ ನಿತ್ಯ ಸಂಜೆ ನವ​ರಾತ್ರಿ ಅಂಗ​ವಾಗಿ ದುರ್ಗಾ​ದೇವಿ ಸಾನ್ನಿ​ಧ್ಯ​ದಲ್ಲಿ ದೇವಿ ಮಹಾತ್ಮೆ ಹಾಗೂ ವೆಂಕ​ಟೇ​ಶ್ವರ ಪುರಾ​ಣ​ವನ್ನು ಗರಗ ಮಡಿ​ವಾ​ಳೇ​ಶ್ವ​ರದ ವೀರೇ​ಶ್ವರ ಸ್ವಾಮಿ​ಗಳು ನಡೆ​ಸಿ​ಕೊ​ಡ​ಲಿ​ದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ​ದಲ್ಲಿ ಸೆ. 3ರಿಂದ ಅಕ್ಟೋ​ಬರ್‌ 6ರ ವರೆಗೆ ನಿತ್ಯ ಮಧ್ಯಾಹ್ನ 3ರಿಂದ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವ ನಡೆ​ಯ​ಲಿದೆ. ಅ. 3ರಂದು ಎಲ್‌​ಕೆಜಿ, ಯುಕೆಜಿ ಮಕ್ಕ​ಳಿಂದ ನೃತ್ಯ ಸ್ಪರ್ಧೆ, ಮಹಿ​ಳೆಯ​ರಿ​ಗಾಗಿ ದೇವಿ ಕುರಿತು ನೃತ್ಯ ಸ್ಪರ್ಧೆ ನಡೆ​ಯ​ಲಿದ್ದು ರಮ್ಯಾ ನಾಯಕ (8722766967) ಸಂಪ​ರ್ಕಿ​ಸ​ಬ​ಹುದು. ಅದೇ ದಿನ ಪನಿತ ಚೇತನ ನೃತ್ಯ​ಶಾ​ಲೆ​ಯ ಮಕ್ಕ​ಳಿಂದ ಸಾಂಸ್ಕೃ​ತಿಕ ಸಂಜೆ ನಡೆ​ಯ​ಲಿದೆ. ಅ. 4ರಂದು ಅಡುಗೆ ಸ್ಪರ್ಧೆ, ಮಹಿ​ಳೆ​ಯ​ರಿ​ಗಾಗಿ ಸಮೂ​ಹ​ಗಾನ, ಮಹಿ​ಳೆ​ಯರ ಫ್ಯಾಶನ್‌ ಷೋ, ಅಭಿ​ವ್ಯಕ್ತ ಕಲಾ​ತಂಡದಿಂದ ಕಲಾ ಉತ್ಸವ ಜರು​ಗ​ಲಿದೆ ಎಂದು ಮಾಹಿತಿ ನೀಡಿದರು.

ಅ. 5ರಂದು ಮಹಿ​ಳೆ​ಯ​ರಿ​ಗಾಗಿ ರಂಗೋಲಿ ಸ್ಪರ್ಧೆ, ಮಹಿ​ಳೆ​ಯರ ಆಟ​ಗಳು, ಹೊಗೆ ಕಲಾ ಚಿತ್ರ​ಗಳ ಪ್ರದ​ರ್ಶನ, ಮಹಿ​ಳೆ​ಯ​ರಿಗೆ ಕಿರು​ನಾ​ಟಕ ಸ್ಪರ್ಧೆ ಹಾಗೂ ಅನಿಲ ಮೈತ್ರಿ ತಂಡ​ದಿಂದ ಜಾನ​ಪದ, ಭಾವ​ಗೀತೆ ಹಾಗೂ ಹಾಸ್ಯ ನಡೆ​ಯ​ಲಿ​ದೆ. ಅ. 6ರಂದು ಮಕ್ಕಳ ಚಿತ್ರ​ಕಲೆ, ಗುಂಪು ನೃತ್ಯ, ಕರೋಕೆ, ಭಕ್ತಿ ಹಾಗೂ ಭಾವ ಗೀತೆಗಳು ನಡೆ​ಯ​ಲಿವೆ. ಅ. 7ರಂದು ಮಧ್ಯಾಹ್ನ 2.30ಕ್ಕೆ ಗಾಂಧಿ​ನ​ಗರ ಈಶ್ವರ ದೇವ​ಸ್ಥಾ​ನ​ದಿಂದ ಬೃಹತ್‌ ಜಂಬೂ ಸವಾರಿ ಮೆರ​ವ​ಣಿಗೆ ಹೊರ​ಡ​ಲಿದೆ. ರಾಜ್ಯದ ವಿವಿಧ ಜಿಲ್ಲೆ​ಗ​ಳಿಂದ ಕಲಾ​ತಂಡ​ಗಳು ತಮ್ಮ ಕಲೆ​ಯನ್ನು ಪ್ರದ​ರ್ಶಿ​ಸ​ಲಿ​ದ್ದಾರೆ. ಮೆರ​ವ​ಣಿಗೆ ಕಡಪಾ ಮೈದಾ​ನದ ವರೆಗೂ ಸಾಗ​ಲಿದೆ. ಅ. 8ರಂದು ಸಂಜೆ 6.30ಕ್ಕೆ ಬನ್ನಿ ಮುಡಿ​ಯುವ ಕಾರ್ಯ​ಕ್ರಮ, ಸಂಜೆ 7ಕ್ಕೆ ದಾಂಡಿಯಾ ನೃತ್ಯ ಹಾಗೂ ರಾತ್ರಿ 9ಕ್ಕೆ ದೇವಿ ಮೂರ್ತಿ ವಿಸ​ರ್ಜನೆ ನಡೆ​ಯ​ಲಿದೆ ಎಂದು ತಿಳಿಸಿದರು. 

ಪ್ರತ್ಯೇಕ ಉಕ ಆಗ​ಬೇ​ಕು

ದಸರಾ ನಿಮಿತ್ತ ವಸ್ತು ಪ್ರದ​ರ್ಶ​ನ​ಕ್ಕಾಗಿ ಕಲಾ​ಭ​ವನ ಮೈದಾನ ಕೇಳಿ​ದರೆ ಬರೋ​ಬ್ಬರಿ 13 ಲಕ್ಷ ಕೇಳಿ​ದ್ದಾರೆ. ಈ ಹಬ್ಬದ ಆಚ​ರ​ಣೆಗೆ ಸರ್ಕಾ​ರ​ದಿಂದ 1 ಅನುದಾನ ನೀಡು​ತ್ತಿಲ್ಲ. ಇಂತಹ ಸಂದ​ರ್ಭ​ದಲ್ಲಿ ಮಹಾ​ನ​ಗರ ಪಾಲಿಕೆ ಉದ್ದೇ​ಶ​ಪೂ​ರ್ವ​ಕ​ವಾಗಿ ಈ ಬಾರಿ ಅಧಿ​ಕ ಪ್ರಮಾ​ಣ​ದಲ್ಲಿ ಬಾಡಿಗೆ ಕೇಳು​ತ್ತಿದೆ. ರಾಜ್ಯ ಸರ್ಕಾರ ಬೆಂಗ​ಳೂರು, ಮೈಸೂರು ಭಾಗ​ದಲ್ಲಿ ಕೋಟಿ​ಗ​ಟ್ಟಲೇ ಅನು​ದಾನ ಒದ​ಗಿ​ಸು​ತ್ತಿದ್ದು ಈ ಭಾಗಕ್ಕೆ ಪುಡಿ​ಗಾಸು ನೀಡು​ತ್ತದೆ. ಇದನ್ನು ಖಂಡಿ​ಸ​ಲೇ​ಬೇಕು. 

ನಮ್ಮ ಜನ​ಪ್ರ​ತಿ​ನಿ​ಧಿ​ಗಳಿಂದಾ​ಗಿಯೇ ನಾವು ಹಿಂದೆ ಉಳಿ​ಯು​ತ್ತಿ​ದ್ದೇವೆ. ಪ್ರತ್ಯೇಕ ಉತ್ತರ ಕರ್ನಾ​ಟ​ಕದ ಕೂಗು ಇಂತಹ ಘಟ​ನೆ​ಗ​ಳಿಂದ ಏಳು​ತ್ತಿವೆ. ದಸರಾ ಮಾಡುವ ಮೂಲಕ ಕಲಾ​ವಿ​ದ​ರಿಗೆ ಪ್ರೋತ್ಸಾಹ ಮಾಡು​ತ್ತಿ​ದ್ದರೆ, ಈ ದಸರಾ ನಿಲ್ಲಿ​ಸಲು ಕಾಣದ ಕೈಗಳು ಕೆಲಸ ಮಾಡು​ತ್ತಿ​ರು​ವುದು ಮನ​ಸ್ಸಿಗೆ ಬೇಸರ ಮೂಡಿ​ಸಿದೆ. ಆದ್ದ​ರಿಂದ ಈ ಬಾರಿ ಸರ​ಳ​ವಾಗಿ ದಸರಾ ಆಚ​ರಿ​ಸ​ಲಾ​ಗು​ತ್ತಿದೆ ಎಂದು ಗುರು​ರಾಜ ಹುಣ​ಸಿ​ಮ​ರದ ಹೇಳಿ​ದ​ರು.
 

Follow Us:
Download App:
  • android
  • ios