ಮುಲ್ಲಾನ ಓಣಿ ಪಿ.236ನೊಂದಿಗೆ ಆಹಾರ ಹಂಚಿದವನಿಗೂ ಇದೀಗ ಪಾಸಿಟಿವ್‌|ಈವರೆಗೂ ಪಿ.236 ಆಹಾರದ ಕಿಟ್‌ ಇಸಿದುಕೊಂಡರಾರ‍ಯರು ತಾವಾಗಲೇ ಬರುತ್ತಲೇ ಇಲ್ಲ| ಯಾವ ರೀತಿ ಇವರನ್ನು ಪತ್ತೆ ಹಚ್ಚಬೇಕೆಂಬುದೇ ಸವಾಲು| ಮತ್ತೊಂದು ಕೊರೋನಾ ಪ್ರಕರಣ ಪತ್ತೆಯಾಗಿದ್ದರಿಂದ ಕರಾಡಿ ಓಣಿ ಸಂಪೂರ್ಣ ಸೀಲ್‌ಡೌನ್‌| 

ಹುಬ್ಬಳ್ಳಿ(ಏ.19): ಕೊರೋನಾ ವಿಷಯದಲ್ಲಿ ಜಿಲ್ಲಾಡಳಿತಕ್ಕೀಗ ಮುಲ್ಲಾನ ಓಣಿಯ ಕೇಸ್‌ ದೊಡ್ಡ ಸವಾಲಾಗಿ ಕುಳಿತಿದೆ. ಆಹಾರದ ಕಿಟ್‌ ಯಾರಾರ‍ಯರು ಇಸಿದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಗದೇ ಆಡಳಿತ ಯಂತ್ರ ಕಂಗೆಟ್ಟಿದೆ. ಈ ನಡುವೆ ಮತ್ತೊಂದು ಪ್ರಕರಣ ಪಾಸಿಟಿವ್‌ ಆಗುತ್ತಿದ್ದಂತೆ ನಗರದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೊಂದು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕರಾಡಿ ಓಣಿಯನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತ ಆದೇಶಿಸಿದೆ.

ಹೌದು ಕಳೆದ ಮೂರು ದಿನಗಳ ಹಿಂದೆಯಷ್ಟೆ ಪಿ-236 ಪತ್ತೆಯಾಗಿತ್ತು. ಆಗ ಈತ ಡಾಕಪ್ಪ ಸರ್ಕಲ್‌ನಿಂದ ಕಾಳಮ್ಮನ ಅಗಸಿವರೆಗೂ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿತ್ತು. ಆಗಲೇ ಜಿಲ್ಲಾಡಳಿತ ಈತನಿಂದ ಯಾರಾರ‍ಯರು ಆಹಾರದ ಕಿಟ್‌ಗಳನ್ನು ಪಡೆದಿದ್ದೀರೋ ಅವರೆಲ್ಲರೂ ಸ್ವಯಂಪ್ರೇರಣೆಯಿಂದ ಆಗಮಿಸಿ ಪರೀಕ್ಷೆಗೊಳಗಾಗಬೇಕು ಎಂದು ಸೂಚನೆ ನೀಡಿದ್ದರು. ಆಗನಿಂದಲೂ ಪ್ರತಿನಿತ್ಯ ಈ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಹಲವು ಅಧಿಕಾರಿಗಳು ತಾವೇ ಮೈಕ್‌ ಹಿಡಿದು ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

ಆದರೂ ಈವರೆಗೂ ಯಾರೊಬ್ಬರು ತಾವಾಗಿಯೇ ಆಗಮಿಸಿ ಪರೀಕ್ಷೆಗೊಳಪಡಿಸಿಕೊಂಡಿಲ್ಲ. ಇದು ಕಂಗೆಡಿಸಿದ್ದು, ಯಾರಾರ‍ಯರು ಆಹಾರದ ಕಿಟ್‌ ಇಸಿದುಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿಸಿದೆ. ಈ ಸಂಬಂಧ ಇನ್ನಷ್ಟುಜಾಗೃತಿ ಮೂಡಿಸಲಾಗುತ್ತಿದೆ. ಜನರೇ ತಾವೇ ತಮ್ಮ ಜವಾಬ್ದಾರಿ ಅರಿತು ಪರೀಕ್ಷೆಗೊಳಗಾಗಲು ಮುಂದಾಗಬೇಕು ಎಂದು ತಾಲೂಕಾಡಳಿತ ಹೇಳುತ್ತಿದೆ.
ಇದರೊಂದಿಗೆ ಪಿ.236ನೊಂದಿಗೆ ಸೇರಿ ಆಹಾರದ ಕಿಟ್‌ ಹಂಚಿಕೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗೂ (ಪಿ-363 ಇದೀಗ ಕೊರೋನಾ ದೃಢಪಟ್ಟಿದೆ. ಇದು ಇನ್ನಷ್ಟುಕಂಗೆಡಿಸಿದ್ದು, ಈತನ ಸಂಪರ್ಕ ಯಾರಾರ‍ಯರು ಹೊಂದಿದ್ದಾರೋ ಅವರನ್ನು ಹುಡುಕಬೇಕಾಗಿದೆ.

ಆನಂದನಗರದಲ್ಲೂ ಹಂಚಿಕೆ:

ಇದೀಗ ಪಿ- 236 ಬರೀ ಡಾಕಪ್ಪನ ಸರ್ಕಲ್‌ನಿಂದ ಕಾಳಮ್ಮನ ಅಗಸಿವರೆಗೆ ಮಾತ್ರ ಆಹಾರದ ಕಿಟ್‌ ವಿತರಣೆ ಮಾಡಿರಲಿಲ್ಲ. ಆನಂದನಗರದಲ್ಲೂ ಆಹಾರದ ಕಿಟ್‌ ವಿತರಿಸಿದ್ದು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇದರಿಂದ ಇದೀಗ ಆನಂದನಗರದಲ್ಲೂ ಕೊರೋನಾ ಹಬ್ಬುವ ಸಾಧ್ಯತೆಯಿಂದ ಅಲ್ಲೂ ಯಾರಾರ‍ಯರು ಆಹಾರದ ಕಿಟ್‌ಗಳನ್ನು ಇಸಿದುಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ತಾಲೂಕಾಡಳಿತ ಮಾಡಬೇಕಿದೆ.

ಆತಂಕ:

ನಗರದಲ್ಲಿ ಮತ್ತೊಂದು ಕೊರೋನಾ ಪ್ರಕರಣ ದೃಢಪಟ್ಟಹಿನ್ನೆಲೆಯಲ್ಲಿ ಆತಂಕವನ್ನುಂಟು ಮಾಡಿದೆ. ಇನ್ನು ಎಷ್ಟುಕೇಸ್‌ಗಳು ಬರುತ್ತವೆ ಎಂಬ ಭೀತಿ ಜನರಲ್ಲಿ ಉಂಟಾಗಿದೆ. ಇದರಿಂದಾಗಿ ಪೊಲೀಸರು ಮತ್ತಷ್ಟುಬಿಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ವಿನಾಕಾರಣ ಅಲೆದಾಡುವವರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಸೀಲ್‌ಡೌನ್‌ಮಾಡಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಆದೇಶಿಸಿದ್ದಾರೆ.

ಪಿ-363 ಪ್ರಕರಣ ಪತ್ತೆಯಾಗಿರುವ ಕರಾಡಿ ಓಣಿಯ ನೂರು ಮೀಟರ್‌ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಈ ಪ್ರದೇಶದಲ್ಲಿ ಯಾರು ಹೋಗುವಂತಿಲ್ಲ. ಯಾರು ಬರುವಂತಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ಜಿಲ್ಲಾಧಿಕಾರಿ ದೀಪಾ ಚೋಳನ್‌ ಕೊಟ್ಟಿದ್ದಾರೆ.