Dharwad: ಬೀದಿಗೆ ಬಂದ ಕೋವಿಡ್ ವಾರಿಯರ್ಸ್ ಕುಟುಂಬಗಳು
* ಕೆಲಸದಿಂದ ತೆಗೆದು ಹಾಕಿದ ರಾಜ್ಯ ಸರ್ಕಾರ
* ಬೀದಿಗೆ ಬಂದ ಕೋವಿಡ್ ವಾರಿಯರ್ಸ್ ಕುಟುಂಬಗಳು
* ಗುತ್ತಿಗೆ ಆದಾರದ ಮೆಲೆ ಮುಂದುವರಿಸುವಂತೆ ಆಗ್ರಹ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣನ್ಯೂಸ್ ಧಾರವಾಡ
ಧಾರವಾಡ, (ಮೇ.19): ಕಳೆದ ಮೂರು ವರ್ಷದಿಂದ ಕೊರೋನಾ ದೇಶವ್ಯಾಪ್ತಿ ಹೆಮ್ಮಾರಿ ಆಗಿ ಬಂದು ಅದೆಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿದೆ, ರಾಜ್ಯದಲ್ಲಿ ಮೊದಮೊದಲು ಕೊರೊನಾ ವಕ್ಕರಿಸಿದಾಗ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಪೇಶಂಟ್ ಕಡೆ ಹೋಗಲೂ ಭಯ ಬಿಳ್ತಾ ಇದ್ರು. ಆದರೆ ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ 6463 ಜನರನ್ನ ರಾಜ್ಯ ಸರಕಾರ ಹೊರಗುತ್ತಿಗೆಯ ಮೆಲೆ ಆರೋಗ್ಯ ಇಲಾಖೆ ಕೆಲಸಕ್ಕೆ ತೆಗೆದುಕೊಂಡು ಇದೀಗ ಅವರನ್ನ ಕೆಲಸದಿಂದ ತೆಗೆದು ಹಾಕಿದೆ. ಇದರಿಂದ ಸದ್ಯ ವಾರಿಯಸ್೯ಗಳು ಬೀದಿಗೆ ಬಂದಿದ್ದಾರೆ.
ಹೌದು... ರಾಜ್ಯದಲ್ಲಿ ಮೊದಮೊದಲು ಕೊವಿಡ್ ಬಂದಾಗ ಕೊರೋನಾ ಯಾರಿಗಾದ್ರೂ ಬಂದರೆ ಸ್ವತಹ ಸಂಭಂದಿಕರೆ ಕೋವಿಡ್ ಪೇಶಂಟ್ ನಿಂದ ಕಿಲೋ ಮೀಟರ್ ದೂರ ನಿಂತು ನೋಡಿ ಹೋಗ್ತಾ ಇದ್ರು,ಆ ಸಮಯದಲ್ಲಿ ಪಿಪಿಇ ಕಿಟ್ ಹಾಕಿಕ್ಕೊಂಡು ಕೊರೋನಾ ರೋಗಿಗಳ ಹತ್ರನೆ ಇದ್ದು ಅವರ ಉಪಚಾರ ಮಾಡಿ ಆರೋಗ್ಯವಂತರಾಗಿ ಮಾಡಿ ಹೋಗೋವರೆಗೂ ಈ ಗುತ್ತಿಗೆ ಆಧಾರದ ಮೆಲೆ ತೆಗೆದುಕ್ಕೊಂಡು ನೌಕರಸ್ಥರು, ನಿಜವಾದ ಕೊರೋನಾ ವಾರಿಯರ್ಸ, ಅದೆಷ್ಡೋ ಕುಟುಂಬಗಳ ಕಣ್ಣಿರು ಒರೆಸಿದ್ದಾರೆ ಆದರೆ ಸದ್ಯ ಸರಕಾರ ಇವರ ಬಾಳು ಬೀದಿ ಪಾಲು ಮಾಡಿದೆ.
ಅತಿವೃಷ್ಟಿ; ಧಾರವಾಡದ ಎಲ್ಲಾ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳ ನೇಮಕ, ಕರೆ ಮಾಡಿ
ಇವರನ್ನ ಎರಡು ವರ್ಷದಿಂದ ಕೊವಿಡ್ ವಾರಿಯರ್ಸ ಅಂತ ಬಳಕೆ ಮಾಡಿಕ್ಕೋಂಡು ಇವರನ್ನ ಸರಕಾರ ಕೆಲಸದಿಂದ ಕೈ ಬಿಟ್ಟಿದೆ..ಇವರಿಗೆ ರಿಸ್ಕ್ ಅಲೌನ್ಸ್ ಪ್ರತಿ ತಿಂಗಳು 5000 ಸಾವಿರ ಕೊಡಬೇಕು ಅಂತ ಸರಕಾರದ ಆದೇಶ ವಿದೆ, ಆದರೂ ಒಬ್ಬರಿಗೂ ರಿಸ್ಕ ಅಲೌನ್ಸ್ ನೀಡಿಲ್ಲ, ಪ್ರಬ್ರುವರಿ ಮತ್ತು ಮಾರ್ಚ ತಿಂಗಳ ಎರಡು ತಿಂಗಳ ವೇತನ ನೀಡಿಲ್ಲ ಎಂದು ಸದ್ಯ ನಮಗೆ ನ್ಯಾಯ ಕೊಡಿಸಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಕಣ್ಣೀರು ಹಾಕಿ ನಮಗೆಲ್ಲೂ ನ್ಯಾಯ ಸಿಗಲ್ಲ, ಸರಕಾರಕ್ಕೆ ಮನವಿ ಮಾಡಿಕ್ಕೊಂಡಿದ್ದೇವೆ ಸರಕಾರ ಕ‌್ಯಾರೆ ಎನ್ನುತ್ತಿಲ್ಲ ನಮಗೆ ನ್ಯಾಯ ಸಿಗುತ್ತೆ ಎಂದು ಕಣ್ಣೀರು ಹಾಕಿ ಅಳಲು ತೋಡಿಕ್ಕೊಂಡರು
ಇನ್ನು ರಾಜ್ಯದಲ್ಲಿ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ 6463 ಜನರನ್ನ ಸದ್ಯ ಸರಕಾರ ಗುತ್ತಿಗೆ ಆದಾರದ ಮೆಲೆ ತೆಗೆದುಕ್ಕೊಂಡು ಅವರನ್ನ ಕೈ ಬಿಟ್ಟಿದೆ..ಎರಡು ತಿಂಗಳ ಸ್ಯಾಲರಿ, ನೀಡಬೇಕಾದ ರಿಸ್ಕ್ ಅಲೌನ್ಸ್, ನೀಡಬೇಕು ಇನ್ನು ಆರೋಗ್ಯ ಇಲಾಖೆಯಲ್ಲಿ ರಾಜ್ಯವ್ಯಾಪ್ತಿ 1419, ಶ್ರುಶೂಷಕರು, ಲ್ಯಾಬ್ ಟೆಕ್ನಶಿಯನ್ ನಲ್ಲಿ 505, ಫಾರ್ಮಾಸಿಸ್ಟ 916 ಹುದ್ದೆಗಳು, ಮತ್ತು ಗ್ರುಪ್ ಡಿ ಆಧಾರದ ಮೇಲೆ ಹುದ್ದೆಗಳನ್ನ ಭರ್ತಿ ಮಾಡಿಕ್ಕೊಳ್ಳಲಿ, ನೇರ ನೇಮಕಾರಿಯಾದ್ರೂ ಮಾಡಲು ಇಲ್ಲದಿದ್ದರೆ ಗುತ್ತಿಗೆ ಆದಾರದ ಮೆಲೆ ನಮಗೆ ಮುಂದುವರೆಯುವಂತೆ ಮಾಡಲಿ ಎಂದು ಕೊರೋನಾ ವಾರಿಯರ್ಸ ಅವರ ಸರಕಾರಕ್ಕೆ ಬೇಡಿಕೆಯಾಗಿದೆ.
ಈ ಕುರಿತು ಆರೋಗ್ಯ ಇಲಾಖೆ, ಮತ್ತು ಉಪಸಭಾಪತಿ ಗಳಿಗೆ ಪತ್ರನೂ ಕೋಡಾ ಬರೆದಿದ್ದಾರೆ...ಆದರೆ ಇವರನ್ನ ಸರಕಾರ ಬಳಕೆ ಮಾಡಿಕ್ಕೊಂಡು ರದ್ದಿ ಪೇಪರ ತರಾ ಬಿಸಾಕಿದ್ದಾರೆ..ಆದರೆ ವಾರಿರ್ಯರ್ಸ ನ್ನ ಸರಕಾರ ಕಡೆಗಣಿಸಿದ್ದು ಸರಿಯಲ್ಲ ಎಂದು ವಾರಿಯರ್ಸ ಕೋಷಕರು ಸರಕಾರಕ್ಕೆ ಹಿಡಿ ಶಾಪವನ್ನ ಹಾಕಿದ್ದಾರೆ...ಇನ್ನು ಪ್ರತಿ ತಿಂಗಳೂ 13,ಕೋಟಿ,34 ಲಕ್ಷದ 53,000 ಸಾವಿರ ವೇತನವನ್ನ ರಾಜ್ಯ ಸರಕಾರ ನೀಡುತ್ತಾ ಬಂದಿದೆ..ಆದರೆ ಕೇವಲ ಸ್ಯಾಲರಿ ನೀಡಿದೆ ಹೊರತು, ರಿಸ್ಕ್ ಅಲೌನ್ಸ್ ಕೊಡಬೇಕಿತ್ತು ಆದೇಶದ ಪ್ರಕಾರ ಅದನ್ನ ಕೊಟ್ಟಿಲ್ಲ ನಮಗೆ ನಮ್ಮ ಮಕ್ಕಳ ಪೀಸ್ ಕಟ್ಟಲಿಕ್ಕೆ ಸದ್ಯ ಹಣವಿಲ್ಲ ಎಂದು ಕಣ್ಣೀರು ಇಡುತ್ತಿದ್ದಾರೆ..ಈ ಸಮಸ್ಯ ಇಡಿ ರಾಜ್ಯದ್ಯಂತ ಇರುವ ಹಿನ್ನಲೆ ನಮಗೆ ನ್ಯಾಯ ಕೊಡಿಸಿ ಎಂದು ಕೇಳಿ ಕ್ಕೊಂಡರು
ಒಟ್ಟಿನಲ್ಲಿ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿದ ಕೊರೊನಾ ವಾರಿಯರ್ಸ ಕುಟುಂಬಗಳು ಸದ್ಯ ಕಣ್ಣೀರು ಹಾಕುವಂತಾಗಿದೆ, ಇನ್ನು ಸರಕಾರ ರದ್ದಿ ಪೇಪರ್ ಥರಾ ಇವರನ್ನ ಬಳಕೆ ಮಾಡಿಕ್ಕೊಂಡು ಸದ್ಯ 6463 ಕುಟುಂಬಗಳನ್ನ ಬೀದಿಗೆ ತಳ್ಳಿದೆ, ಇನ್ನು ಕೊರೊನಾ ನಾಲ್ಕನೆಯ ಅಲೆ ಬಂತು ಅಂದ್ರೆ ಅದೆ ಕೊರೊನಾ ವಾರಿಯರ್ಸ ಬೇಕಾಗುತ್ತೆ ಎಂಬುದು ಸರಕಾರಕ್ಕೆ ಗೊತ್ತಿಲ್ಲವೆ, ಒಟ್ಟಿನಲ್ಲಿ ಅವರನ್ನ ಮರಳಿ ಗುತ್ತಿಗೆ ಆಧಾರದ ಮೆಲೆ ಕೆಲಸ ಕೊಡಬೇಕು, ಅವರಿಗೆ ಎರಡು ವರ್ಷದಿಂದ ಬರುವ ರಿಸ್ಕ್ ಅಲೌನ್ಸ್ ಕೊಡಬೇಕು, ಎರಡು ತಿಂಗಳ ಸ್ಯಾಲರಿ ಕೊಡಬೇಕು ಎಂಬುದು ವಾರಿಯರ್ಸ ಒತ್ತಾಯವಾಗಿದೆ.