Asianet Suvarna News Asianet Suvarna News

18 ಕುಟುಂಬಗಳಿಗೆ ಧರ್ಮಸ್ಥಳ ಕ್ಷೇತ್ರದಿಂದ ಭೂಮಿ ದಾನ

  • ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡು ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನದಲ್ಲಿದ್ದ 1.6 ಎಕ್ರೆ ಜಾಗ
  •  ಹಲವು ವರ್ಷಗಳಿಂದ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ 18 ಕುಟುಂಬಗಳಿಗೆ ಶ್ರೀ ಕ್ಷೇತ್ರದ ವತಿಯಿಂದ  ದಾನ
Dharmasthala Temple Donated land to 18 families snr
Author
Bengaluru, First Published Oct 13, 2021, 4:15 PM IST
  • Facebook
  • Twitter
  • Whatsapp

 ಪುತ್ತೂರು (ಅ.13):  ಉಪ್ಪಿನಂಗಡಿ (Uppinangadi) ಗ್ರಾಮದ ಕದಿಕ್ಕಾರು ಬೀಡು ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದ (Shri Dharmasthala) ಅಧೀನದಲ್ಲಿದ್ದ 1.6 ಎಕ್ರೆ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ 18 ಕುಟುಂಬಗಳಿಗೆ ಶ್ರೀ ಕ್ಷೇತ್ರದ ವತಿಯಿಂದ ಅವರು ಹೊಂದಿರುವ ಜಮೀನನ್ನು (Land) ದಾನ ರೂಪದಲ್ಲಿ ನೀಡಲಾಗಿದ್ದು, ಮಂಗಳವಾರ ಭೂಮಿಯ ಹಕ್ಕುಪತ್ರ ವಿತರಣೆ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ (Sub Rigistrar Office) ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಡಿ.ಹರ್ಷೇಂದ್ರ ಕುಮಾರ್‌ (D Harshendra kumar) ಅವರು 18 ಕುಟುಂಬಗಳಿಗೆ ಹಕ್ಕುಪತ್ರ (Documents) ಹಸ್ತಾಂತರಿಸಿದರು. ಇದರೊಂದಿಗೆ ಎಲ್ಲ ಕುಟುಂಬಕ್ಕೆ ವಸ್ತ್ರದಾನವನ್ನು ಮಾಡಲಾಯಿತು.

ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ

ಬಳಿಕ ಮಾತನಾಡಿದ ಅವರು ಉಳುವನೆ ಹೊಲದೊಡೆಯ ಕಾನೂನು (Land-reforms Act) ಜಾರಿಯ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ 3600 ಎಕರೆ ಜಮೀನನ್ನು ಗೇಣಿದಾರರಿಗೆ ನೀಡಲಾಗಿತ್ತು. ಆ ಕಾಲದಿಂದಲೇ ಕದಿಕ್ಕಾರು ಬೀಡಿನ ಜಾಗದಲ್ಲಿ ವಾಸವಾಗಿದ್ದ ಕುಟುಂಬಗಳು ಕ್ಷೇತ್ರದ ಮೇಲಿನ ಭಕ್ತಿಯಿಂದ ಡಿಕ್ಲೆರೇಷನ್‌ಗೆ ಅರ್ಜಿ ಹಾಕಿರಲಿಲ್ಲ. ಆ ಕುಟುಂಬಕ್ಕೆ ಕ್ಷೇತ್ರದ ವತಿಯಿಂದ ಹಕ್ಕುಪತ್ರ ಮಾಡಿ ದಾನ ರೂಪದಲ್ಲಿ ಜಮೀನು ನೀಡಲಾಗಿದೆ ಎಂದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ: 3 ತಿಂಗಳು ಜೈಲು ಶಿಕ್ಷೆ

ಕ್ಷೇತ್ರದ ಭೂ ವಿಭಾಗದಲ್ಲಿನ ಅಧಿಕಾರಿ ಸುಭಾಷ್‌ ಮಾತನಾಡಿ ಉಪ್ಪಿನಂಗಡಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ 300 ಎಕ್ರೆ ಜಮೀನು ಹೊಂದಿತ್ತು. ಭೂ ಸುಧಾರಣಾ ಕಾಯ್ದೆ ಬಳಿಕ ಹಂಚಿ ಹೋಗಿ ಪ್ರಸ್ತುತ 23 ಎಕ್ರೆ ಜಮೀನು ಕ್ಷೇತ್ರದ ಅಧೀನದಲ್ಲಿದೆ. ಕದಿಕ್ಕಾರು ಬೀಡಿನ ಮನೆಯು ಉಪ್ಪಿನಂಗಡಿ ಭೇಟಿಯ ಸಂದರ್ಭದಲ್ಲಿ ಡಾ. ಹೆಗ್ಗಡೆ (Dr. Veerendra heggade) ಅವರು ಉಳಿದುಕೊಳ್ಳುತ್ತಿದ್ದ ಮನೆಯಾಗಿತ್ತು ಎಂದರು.

ಭೂಮಿ ಪಡೆದುಕೊಂಡು ಎಲ್ಲಾ ಕುಟುಂಬಗಳ ಪರವಾಗಿ ಡಿ.ಹರ್ಷೇಂದ್ರ ಕುಮಾರ್‌ ಅವರನ್ನು ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌, ತಹಸೀಲ್ದಾರ್‌ ರಮೇಶ್‌ ಬಾಬು, ಉದ್ಯಮಿ ಅಶೋಕ್‌ ಕುಮಾರ್‌ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ ದ.ಕ.ಜಿಲ್ಲೆ-2ರ ನಿರ್ದೇಶಕ ಪ್ರವೀಣ್‌ ಕುಮಾರ್‌, ತಾಲೂಕು ಯೋಜನಾಧಿಕಾರಿ ಆನಂದ ಮತ್ತಿತರರಿದ್ದರು.

ಭಕ್ತರಿಗೆ ಸಂಪೂರ್ಣ ನಿರ್ಬಂಧ ತೆರವು

 ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವಿಧಿಸಿದ್ದ ವಾರಾಂತ್ಯ ನಿರ್ಬಂಧಗಳನ್ನು ದ.ಕ. ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿ ಸೇರಿ ಎಲ್ಲರೂ ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಪಡೆದುಕೊಳ್ಳಬೇಕು. 

ಭಕ್ತರು ಎರಡು ಡೋಸ್‌ ಲಸಿಕೆ ಪಡೆದಿದ್ದರೂ ಕಡ್ಡಾಯವಾಗಿ 72 ಗಂಟೆಗಿಂತ ಮುಂಚೆಯ ನೆಗೆಟಿವ್‌ ವರದಿ ತರಬೇಕು ಎಂದು ಷರತ್ತು ವಿಧಿಸಲಾಗಿದೆ. ಅಲ್ಲದೆ ದೇವಸ್ಥಾನಗಳಲ್ಲಿ ಕೋವಿಡ್‌ ಲಸಿಕಾ ಕೇಂದ್ರ ತೆರೆಯಬೇಕು ಎಂದೂ ಸೂಚಿಸಲಾಗಿದೆ.

Follow Us:
Download App:
  • android
  • ios