ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಶವ ಹೂತಿಟ್ಟ ಪ್ರಕರಣದಲ್ಲಿ, ಎರಡು ಹಳೆಯ ಕೇಸ್‌ಗಳು ಮತ್ತೆ ಮರುಜೀವ ಪಡೆದುಕೊಂದಿದೆ. 

ಬೆಂಗಳೂರು/ಕೊಚ್ಚಿ (ಜು.25): ಕರ್ನಾಟಕದ ಸುಪ್ರಸಿದ್ಧ ದೇವಾಲಯ ಪಟ್ಟಣವಾದ ಧರ್ಮಸ್ಥಳದಲ್ಲಿ(dharmasthala) ಹಲವು ಶವ ಹೂತಿಟ್ಟ (mass burial) ಪ್ರಕರಣ ಮತ್ತು ವ್ಯವಸ್ಥಿತ ಅಪರಾಧಗಳ ಬಗ್ಗೆ ಸಾಲು ಸಾಲು ಆರೋಪಗಳಿಂದ ನಲುಗುತ್ತಿರುವ ವೇಳೆಯಲ್ಲಿ, ಹಿಂದಿನ ಎರಡು ಬಗೆಹರಿಯದ ಕೇಸ್‌ಗಳು ಮತ್ತೆ ಬೆಳಕಿಗೆ ಬಂದಿವೆ. ಅದರೊಂದಿಗೆ ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಹೊಂದಿರುವ ಅಧಿಕಾರಸ್ಥರ ಬಗ್ಗೆ ಆಳವಾದ ತನಿಖೆಯ ಬೇಡಿಕೆಗೆ ಹೊಸ ಬಲವನ್ನು ನೀಡಿದೆ.

ಈ ಸಾಮೂಹಿಕ ಶವ ಹೂತಿಟ್ಟ ಆರೋಪಗಳಲ್ಲಿ ಕೇರಳದ (Kerala) ಲಿಂಕ್‌ ಕೂಡ ಪಡೆದಿಕೊಂಡಿದೆ. ಕೇರಳದ ಒಂದು ಕುಟುಂಬ, 2018 ರಲ್ಲಿ ಧರ್ಮಸ್ಥಳ ಬಳಿ ನಡೆದ ಸಾವನ್ನು ಇದೇ ರೀತಿ ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಕಣ್ಣೂರು ನಿವಾಸಿ ಅನೀಶ್ ಜಾಯ್ (Aneesh Joy) ತಮ್ಮ ತಂದೆ ಕೆ.ಜೆ. ಜಾಯ್ (KJ Joy) ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ತಲಿಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯನ್ನು ಕರ್ನಾಟಕ ಪೊಲೀಸರು ರಸ್ತೆ ಅಪಘಾತ ಎಂದು ದಾಖಲಿಸಿದ್ದರೂ, ಧರ್ಮಸ್ಥಳದಲ್ಲಿ ತಮ್ಮ ಒಡೆತನದ ಭೂಮಿಯನ್ನು ಕಬಳಿಸುವ ಪ್ರಯತ್ನದಲ್ಲಿ ತಮ್ಮ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಅನೀಶ್ ಆರೋಪಿಸಿದ್ದಾರೆ.

ಧರ್ಮಸ್ಥಳದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಸುಭಾಷ್ ಚಂದ್ರ ಜೈನ್ ಎಂಬ ವ್ಯಕ್ತಿ ಆಸ್ತಿಯ ವಿಷಯದಲ್ಲಿ ತನ್ನ ತಂದೆಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. "ಪೊಲೀಸರು ಎರಡು ದಿನಗಳಲ್ಲಿ ವಾಹನವನ್ನು ಕಂಡುಕೊಂಡರು, ಆದರೆ ಅದು ಅಪರಿಚಿತ ವಾಹನ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಪ್ರಕರಣವನ್ನು ಮುಂದುವರಿಸಬೇಡಿ ಮತ್ತು ನನ್ನ ಜೀವಕ್ಕೆ ಅಪಾಯವಿದೆ ಎಂದು ಅವರು ನನಗೆ ಹೇಳಿದರು. ಅದಕ್ಕಾಗಿಯೇ ನಾನು ಕೇರಳಕ್ಕೆ ತೆರಳಿದೆ" ಎಂದು ಅನೀಶ್ ಹೇಳಿದ್ದಾರೆ.

ಆಗಿದ್ದೇನು?: ಅನೀಶ್ ಜಾಯ್ ಅವರ ತಂದೆ ಕೆ.ಜೆ. ಜಾಯ್ ಏಪ್ರಿಲ್ 5, 2018 ರಂದು ಧರ್ಮಸ್ಥಳದಲ್ಲಿ ಸಾವು ಕಂಡಿದ್ದರು. ಮೂಡುಬಿದಿರೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಅಪಘಾತದಲ್ಲಿ ಅವರು ಸಾವು ಕಂಡಿದ್ದರು. ಇದು ಸಾಮಾನ್ಯ ಆಕಸ್ಮಿಕ ಸಾವು ಅಲ್ಲ ಎಂಬ ಅನುಮಾನವಿತ್ತು ಮತ್ತು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಢಿಕ್ಕಿ ಹೊಡೆದವನನ್ನು ಹಾಗೂ ಕಾರನ್ನು ಎರಡು ದಿನಗಳ ಕಾಲ ಠಾಣೆಯಲ್ಲಿ ಇರಿಸಲಾಗಿತ್ತು, ನಂತರ ಆತನ್ನು ಬಿಡುಗಡೆ ಮಾಡಲಾಯಿತು. ಇಲ್ಲಿನ ಪ್ರಮುಖ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ ಮತ್ತು ಆತನನ್ನು ಹಿಂಬಾಲಿಸಬಾರದು ಎಂದು ಎಸ್‌ಐ ಅನೀಶ್‌ಗೆ ತಿಳಿಸಿದರು. ಆತನನ್ನು ಹಿಂಬಾಲಿಸಿದರೆ ಆತನ ಜೀವಕ್ಕೆ ಅಪಾಯವಿದೆ ಎಂದು ಎಸ್‌ಐ ಹೇಳಿದ್ದಾಗಿ ಅನೀಶ್‌ ತಿಳಿಸಿದ್ದಾರೆ.

ಅನೀಶ್ ಅವರ ಅಜ್ಜ ಕರ್ನಾಟಕಕ್ಕೆ ವಲಸೆ ಬಂದು 45 ಎಕರೆ ಭೂಮಿಯನ್ನು ಹೊಂದಿದ್ದರು. ಅವರು ರಬ್ಬರ್ ಮತ್ತು ಗೋಡಂಬಿ ಬೆಳೆಯುವ ಮೂಲಕ ಜೀವನ ಸಾಗಿಸುತ್ತಿದ್ದರು. ನಾವಿದ್ದ ಸ್ಥಳ ಧರ್ಮಸ್ಥಳದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿದೆ. ಅಲ್ಲಿನವರು ಆ ಭೂಮಿಯನ್ನು ನೀಡುವಂತೆ ಕೇಳಿದರು. ಅದನ್ನು ಅವರಿಗೆ ಉಚಿತವಾಗಿ ನೀಡಬೇಕೆಂದು ಅವರು ಬಯಸಿದ್ದರು.

23 ಎಕರೆಯ ಜಾಗ ಬರೀ 18 ಲಕ್ಷಕ್ಕೆ ಮಾರಾಟ

ಅದಾದ ಬಳಿಕ ನಮ್ಮ ತಂದೆ ಕೆಜ ಜಾಯ್‌ ಅಲ್ಲಿಯೇ ಒಂದು ಹೋಟೆಲ್‌ ಆರಂಭಿಸಿದ್ದರು. ಈ ವೇಳೆ ಅಲ್ಲಿನ ಪ್ರಮುಖ ಲ್ಯಾಂಡ್‌ ಬ್ರೋಕರ್‌ ಸುಭಾಶ್‌ ಚಂದ್ರ ಜೈನ್‌, ನಮ್ಮನ್ನು ಸಂಪರ್ಕಿಸಿ ಈ ಜಾಗವನ್ನು ಮಾರುವಂತೆ ಹೇಳಿದ್ದರು. ಕೊನೆಗೆ ನಮ್ಮಿಂದ ಒತ್ತಾಯಪೂರ್ವಕವಾಗಿ ಜಾಗವನ್ನು ಮಾರಾಟ ಮಾಡಿಸಿಕೊಂಡರು. 23 ಎಕರೆಯ ಜಾಗವನ್ನು ಬರೀ 18 ಲಕ್ಷ ಹಣ ಫಿಕ್ಸ್‌ ಮಾಡಿದ್ದರು. ನನ್ನ ಅಪ್ಪನ ಸಹೋದರರೆಲ್ಲರೂ ಇದರಿಂದಾಗಿ ಕೇರಳಕ್ಕೆ ಶಿಫ್ಟ್‌ ಆದರೆ, ತಂದೆ ಮಾತ್ರ ಹೋಟೆಲ್‌ ನಡೆಸುತ್ತಿದ್ದರು ಎಂದು ಅನೀಶ್‌ಜಾಯ್‌ ಹೇಳಿದ್ದಾರೆ.

ಅದಾದ ಬಳಿಕ ಉಳಿದ ಜಾಗವನ್ನೂ ಮಾರಾಟ ಮಾಡುವಂತೆ ಒತ್ತಾಯ ಮಾಡಿದರು. ಆದರೆ, ಇದಕ್ಕೆ ತಂದೆ ಒಪ್ಪಲಿಲ್ಲ. ಬ್ಯಾಂಕ್‌ಗೆ ಹೀಗಿ ಜಾಗದ ಮೇಲೆ ಸಾಲ ತೆಗೆದುಕೊಳ್ಳಲು ಮುಂದಾದರು. ಆದರೆ, ಬ್ಯಾಂಕ್‌ನಲ್ಲಿ ಇರುವುದು ಪೂರ್ತಿ ಅವರದೇ ಜನ. ಸುಭಾಷ್‌ ಚಂದ್ರ ಜೈನ್‌ಗೆ ಈ ಮಾಹಿತಿ ಗೊತ್ತಾದ ಬಳಿಕ ಸಮಸ್ಯೆ ಶೂರುವಾಯಿತು. ಸಾಲತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಂದೆ ಓಡಾಡುತ್ತಿರುವಾಗಲೇ ಒಂದು ತಿಂಗಳ ಅಂತರದಲ್ಲಿ ಅವರು ಬೈಕ್‌ ಅಪಘಾತದಲ್ಲಿ ಸಾವು ಕಂಡರು.

ಧರ್ಮಸ್ಥಳದ ಬಗ್ಗೆ ಹೊರಬರುತ್ತಿರುವ ಎಲ್ಲಾ ಮಾಹಿತಿಗಳು ಕೂಡ ನಿಜ ಎಂದು ಅನೀಶ್ ಹೇಳಿದ್ದಾರೆ. ತನ್ನ ತಂದೆಯ ಸಾವಿನ ಮೂಲಕ ನನಗೆ ಇದು ಮನವರಿಕೆ ಆಗಿದೆ. ಸುಮಾರು ನೂರು ಜನರನ್ನು ಕೊಂದು ಸಮಾಧಿ ಮಾಡಲಾಗಿದೆ ಎಂದು ಬಹಿರಂಗವಾದ ನಂತರ, ಅನೀಶ್ ಧರ್ಮಸ್ಥಳಕ್ಕೆ ಹೋಗಿ ಮತ್ತೆ ಪೊಲೀಸರಿಗೆ ದೂರು ನೀಡಿದರು ಮತ್ತು ತಲಿಪರಂಬ ಪೊಲೀಸರಿಗೆ ಸಹ ದೂರು ನೀಡಿ, ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿದ್ದಾರೆ.

ಪದ್ಮಲತಾ ಕೇಸ್‌

ಮರುಜೀವ ಪಡೆದುಕೊಂಡ ಪ್ರಕರಣಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು 1986ರಲ್ಲಿ ಧರ್ಮಸ್ಥಳದ ಬೋಳ್ಯಾರು ಗ್ರಾಮದ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಅವರ ಸಾವು. ಸುಮಾರು ನಾಲ್ಕು ದಶಕಗಳ ಹಿಂದೆ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು.56 ದಿನಗಳ ನಂತರ ನೇತ್ರಾವತಿ ನದಿಯಲ್ಲಿ ಆಕೆಯ ಶವಗಳು ಕೈಕಾಲುಗಳನ್ನು ಕಟ್ಟಿಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದವು. ಆದರೆ, ಕೇಸ್‌ನಲ್ಲಿ ಯಾರನ್ನೂ ಬಂಧಿಸಿರಲಿಲ್ಲ. ಕೊನೆಗೆ ಈ ಪ್ರಕರಣವನ್ನು ಕ್ರಿಮಿನಲ್‌ ತನಿಖಾ ಇಲಾಖೆ (ಸಿಐಡಿ), ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕೇಸ್‌ ಮುಚ್ಚಿಹಾಕಿತು. ಈ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಚರ್ಚೆ ಆರಂಭವಾಗಿದೆ.

ಪದ್ಮಲತಾ ಅವರ ಸಹೋದರಿ ಚಂದ್ರಾವತಿ ಅವರು ತಮ್ಮ ಸಹೋದರಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ದೀರ್ಘಕಾಲದಿಂದ ಆರೋಪಿಸುತ್ತಿದ್ದಾರೆ. ಈಗ ಧರ್ಮಸ್ಥಳ ಸಾಮೂಹಿಕ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೊಲೆ ದಾಖಲೆಗಳನ್ನು ಮತ್ತೆ ತೆರೆಯುವಂತೆ ಕೋರಿದ್ದಾರೆ. "ನಮಗೆ ಪ್ರಸ್ತುತ ಅಧಿಕಾರಿಗಳ ಮೇಲೆ ಇನ್ನೂ ನಂಬಿಕೆ ಇದೆ" ಎಂದು ಅವರು ಹೇಳಿದರು, "ನಮ್ಮ ಪ್ರಕರಣದ ನಂತರ ಈ ಘಟನೆಗಳು ಕಡಿಮೆಯಾಗಿವೆ, ಆದರೆ ಸೌಜನ್ಯ ಪ್ರಕರಣದ ನಂತರ ಅವು ಮತ್ತೆ ಪ್ರಾರಂಭವಾಗಿವೆ. ಇಂತಹ ಘಟನೆಗಳು ನಿಲ್ಲಬೇಕು' ಎಂದಿದ್ದಾರೆ.

ಅವರ ಪ್ರಕಾರ, ಪದ್ಮಲತಾ ಡಿಸೆಂಬರ್ 22, 1986 ರಂದು ಉಜಿರೆಯಲ್ಲಿ ಕಾಲೇಜು ಕಾರ್ಯಕ್ರಮಕ್ಕೆ ತೆರಳಿದ್ದರು ಮತ್ತು ಅವರು ಮತ್ತೆ ಹಿಂತಿರುಗಲಿಲ್ಲ. ಆರಂಭದಲ್ಲಿ ಪೊಲೀಸರು ಹಿಂಜರಿಕೆಯಿಂದ ಕಾಣೆಯಾದ ದೂರು ದಾಖಲಿಸುವಲ್ಲಿ ವಿಳಂಬವಾದರೂ, ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದ ಅವರ ತಂದೆ ಅಂತಿಮವಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ವಾರಗಳ ನಂತರ ಅವರ ಮನೆಯ ಬಳಿ ಶವ ಪತ್ತೆಯಾದಾಗ, ಅದು ಅಸ್ಥಿಪಂಜರವಾಗಿತ್ತು, ಮೃತದೇಹದ ಮೇಲಿನ ಬಟ್ಟೆ ಮತ್ತು ಕೈಗಡಿಯಾರದಿಂದ ಶವವನ್ನು ಗುರುತಿಸಲಾಯಿತು. ಈ ಸಾವಿಗೆ ಕಾರಣವೇನು, ಆರೋಪಿಗಳು ಯಾರು ಅನ್ನೋದು ಈವರೆಗೂ ಪತ್ತೆಯಾಗಿಲ್ಲ.

ಧರ್ಮಸ್ಥಳದಲ್ಲಿ ಭಯ ಮತ್ತು ಮೌನದ ವಾತಾವರಣವಿದೆ ಎಂದು ಎರಡೂ ಕುಟುಂಬಗಳು ಬೊಟ್ಟು ಮಾಡಿವೆ, ಅಲ್ಲಿ ಪೊಲೀಸರು ಮತ್ತು ರಾಜಕೀಯ ಪ್ರಭಾವವು ನ್ಯಾಯವನ್ನು ಬಹಳ ಹಿಂದಿನಿಂದಲೂ ತಡೆಯುತ್ತಿದೆ ಎಂದು ಅವರು ಹೇಳುತ್ತಾರೆ. ಸಾಮೂಹಿಕ ಶವ ಹೂತಿಟ್ಟ ಆರೋಪಗಳ ತನಿಖೆಗಾಗಿ ಈಗ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲಾಗಿರುವುದರಿಂದ, ಇದು ಅವರ ದೀರ್ಘಕಾಲದಿಂದ ಮೌನವಾಗಿದ್ದ ಕಥೆಗಳನ್ನು ಮತ್ತೆ ತೆರೆಯುತ್ತದೆ ಎಂದು ಅವರು ಆಶಿಸಿದ್ದಾರೆ.