Asianet Suvarna News Asianet Suvarna News

'ನಡೆದಾಡುವ ದೇವರು' ಸಿದ್ದೇಶ್ವರ ಶ್ರೀಗಳ ಪ್ರವಚನದ ಮಹದಾಸೆ ಕನಸಾಗಿಯೇ ಉಳಿಯಿತು!

ನಾಲತವಾಡ ಪಟ್ಟಣದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನದ ಮಹದಾಸೆ ಕನಸಾಗಿಯೇ ನಾವು ಶ್ರೀಗಳನ್ನು ಶರಣರ ಪುಣ್ಯಕ್ಷೇತ್ರ ನಾಲತವಾಡದಲ್ಲಿ ಪ್ರವಚನಕ್ಕಾಗಿ ಹಲವಾರು ಬಾರಿ ಮನವಿ ಮಾಡಿದರೂ ಅದು ಸಾಕಾರಗೊಳ್ಳಲಿಲ್ಲ. ಒಮ್ಮೆ ಆ ಅವಕಾಶ ಬಂದಿದ್ದರೂ ನಾವು ಅದನ್ನು ಸ್ವೀಕಾರ ಮಾಡಿಕೊಂಡಿಲ್ಲ ಎಂಬ ಮಾತು ಈಗ ಎಲ್ಲರ ಬಾಯಲ್ಲಿ ಭಾವುಕದಿಂದ ಕೇಳಿ ಬಂದವು.   ಉಳಿಯಿತು ಎಂಬ ಕೊರಗು ಇಲ್ಲಿಯ ಜನರಿಗೆ ಕಾಡಿದೆ.

Devotees who had the antima darshan of Sri Siddeshwar swamiji nalatawad rav
Author
First Published Jan 4, 2023, 7:28 AM IST

ನಾಲತವಾಡ (ಜ.4) : ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಶಾಂತಿಯ ವಾತಾವರಣ. ಎಲ್ಲಿ ನೋಡಿದರು ಸಿದ್ದೇಶ್ವರ ಶ್ರೀಗಳು ನಮ್ಮನ್ನು ಬಿಟ್ಟು ಇಷ್ಟುಬೇಗ ಅಗಲಬಾರದಿತ್ತು ಎಂಬ ಮಾತು ಕೇಳಿಬರುತಿತ್ತು. ಪಟ್ಟಣದ ತುಂಬ ಮೌನ ಆವರಿಸಿತ್ತು.

ಅವರ ವಿಚಾರಗಳು ಇನ್ನಮುಂದೇ ನಾವು ಕೇಳಲು ಆಗುವುದಿಲ್ಲ ಎಂಬ ಕೊರಗು ಒಂದು ಕಡೆಯಾದರೇ ನಾಲತವಾಡ ಪಟ್ಟಣದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನದ ಮಹದಾಸೆ ಕನಸಾಗಿಯೇ ಉಳಿಯಿತು ಎಂಬ ಕೊರಗು ಮತ್ತೊಂದಡೆ ಇಲ್ಲಿಯ ಜನರಿಗೆ ಕಾಡಿದೆ. ನಾವು ಶ್ರೀಗಳನ್ನು ಶರಣರ ಪುಣ್ಯಕ್ಷೇತ್ರ ನಾಲತವಾಡದಲ್ಲಿ ಪ್ರವಚನಕ್ಕಾಗಿ ಹಲವಾರು ಬಾರಿ ಮನವಿ ಮಾಡಿದರೂ ಅದು ಸಾಕಾರಗೊಳ್ಳಲಿಲ್ಲ. ಒಮ್ಮೆ ಆ ಅವಕಾಶ ಬಂದಿದ್ದರೂ ನಾವು ಅದನ್ನು ಸ್ವೀಕಾರ ಮಾಡಿಕೊಂಡಿಲ್ಲ ಎಂಬ ಮಾತು ಈಗ ಎಲ್ಲರ ಬಾಯಲ್ಲಿ ಭಾವುಕದಿಂದ ಕೇಳಿ ಬಂದವು.

ಪಂಚಭೂತಗಳಲ್ಲಿ ಲೀನರಾದ ಶತಮಾನದ ಸಂತ ಸಿದ್ದೇಶ್ವರ ಶ್ರೀ: ಅಪೇಕ್ಷೆಯಂತೆ ಅಂತ್ಯಕ್ರಿಯೆ!

ಸಿದ್ದೇಶ್ವರ ಶ್ರೀಗಳು ಸಾಹಿತಿ ದಿ.ಚಂದ್ರಶೇಖರ ಹಿರೇಮಠ ಅವರ ಪುಸ್ತಕ ಬಿಡಿಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಿತ್ಯದ ಬಗ್ಗೆ ಅತ್ಯಾದ್ಭುತವಾಗಿ ಮಾತನಾಡಿದ ಮಾತುಗಳು ಈಗ ಕೇಳಿಬರುತ್ತಿವೆ. ನಾಲತವಾಡ ಪಟ್ಟಣದಿಂದ ಸಾವಿರಾರೂ ಭಕ್ತರು ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನದಲ್ಲಿ ಭಾಗವಹಿಸಲು ಬೆಳಗ್ಗೆಯಿಂದಲೇ ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ನಮ್ಮ ಜಿಲ್ಲೆಯ ಜ್ಞಾನದ ಭಂಡಾರವನ್ನು ಕಳೆದುಕೊಂಡಿರುವ ದುಃಖ ಎಲ್ಲರ ಮುಖದಲ್ಲಿ ಕಾಣುತಿತ್ತು.

ಶ್ರದ್ಧಾಂಜಲಿ:

ಸ್ಥಳೀಯ ಅಂಜುಮನ್‌ ಕಮಿಟಿ ಕಾರ್ಯಾಲಯದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಸಿದರು. ಅವರ ಭಾವಚಿತ್ರಕ್ಕೆ ಹಾರ ಹಾಕಿ ಮೊಂಬತ್ತಿ ಹಚ್ಚಿ ಒಂದು ನಿಮಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಜುಮನ್‌ ಕಮಿಟಿ ಅಧ್ಯಕ್ಷ ಲಾಳೇಮಶಾಕ ಅವಟಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಮಾತುಗಳು ಕೇಳುವುದೇ ಒಂದು ಸೌಭಾಗ್ಯ. ಮನುಷ್ಯ ಭೂಮಿಯಲ್ಲಿ ಯಾವ ರೀತಿ ಬಾಳಬೇಕು ಎಂದು ತಮ್ಮ ಜೀವನದ ಮುಖಂತರ ತೋರಿಸಿಕೊಟ್ಟಿದ್ದಾರೆ. ಜಗತ್ತಿನಲ್ಲಿ ಜಾತ್ಯಾತೀತ ಶ್ರೀಗಳು ಯಾರಾದರು ಇದ್ದರೇ ಅದು ಸಿದ್ದೇಶ್ವರ ಶ್ರೀಗಳು ಮಾತ್ರ. ಅನೇಕ ಮುಸ್ಲಿಂ ಬಾಂಧವರು ಕೂಡ ಅವರ ಭಕ್ತರಾಗಿದ್ದರು. ಅವರನ್ನು ನಾವು ಕಳೆದುಕೊಂಡು ಇಂದು ಅನಾಥರಾಗಿದ್ದೇವೆ. ಅವರ ಆದರ್ಶದ ಬದುಕು ನಮ್ಮೆರಿಗೆ ದಾರಿ ದೀಪವಾಗಿದೆ ಎಂದರು.

ಈ ವೇಳೆ ಅಂಜುಮನ್‌ ಕಮಿಟಿ ಸದಸ್ಯರಾದ ಮೌಲಾಸಾಬ್‌ ರಕ್ಕಸಗಿ, ಉಪರಫಾರುಕ್‌ ಮೂಲಿಮನಿ, ಜಾಕಿರಹುಸೇನ್‌ ನಧಾಪ, ಸಾಹೇಬಲಾಲ್‌ ಕಸ್ಸಾಬ್‌, ಇಬ್ರಾಹಿಂ ಮುಲ್ಲಾ, ಬರಕತ್‌ ಮುಲ್ಲಾ, ಬಾಬುಸಾಹೇಬ್‌ ನಾಯ್ಕೋಡಿ, ಖಾಜಾಹುಸೇನ್‌ ಖತೀಬ, ಕುಟುಬುದ್ದಿನ್‌ ಮುಲ್ಲಾ, ಮಶಾಕ್‌ ಅವಟಿ, ಜಾಕಿರ್‌ ಮೂಲಿಮನಿ, ಅಬುಬಕರ್‌ ರಕ್ಕಸಗಿ, ವಾಜಿದ್‌ ಕಸ್ಸಾಬ್‌ ಇದ್ದರು.

ಗಣಪತಿ ವೃತ್ತದಲ್ಲಿ ಶ್ರದ್ಧಾಂಜಲಿ

ಪಟ್ಟಣದ ಮಾರುಕಟ್ಟೆಯ ಎಲ್ಲ ಅಂಗಡಿಗಳನ್ನು ಮುಚ್ಚಿ ಎಲ್ಲಾ ವ್ಯಾಪಾರಸ್ತರು, ಗಣ್ಯರು ಸೇರಿಕೊಂಡು ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಲೋಟಗೇರಿಯ ಗುರುಮೂರ್ತಿ ದೇವರು ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ವೇಳೆ ಗುರು ಪ್ರಸಾದ ದೇಶಮುಖ, ಸಂಗಪ್ಪಚಿನಿವಾಲರ, ದೇವಿಚಂದ ಜೈನ, ಶಿವಪುತ್ರ ಸ್ಥಾವರಮಠ, ನಾಗರಾಜ ಚಿನಿವಾಲರ, ಬಾಲಚಂದ್ರ ಗದಗಿನ್‌, ಅಂಬ್ರಯ್ಯ ವಿರಕ್ತಮಠ, ಮಲ್ಲಿಕಾರ್ಜುನ್‌ ಚಿನಿವಾಲರ, ಸಂಗಣ್ಣ ತಾತರೆಡ್ಡಿ, ಶರಣಪ್ಪ ಬೆಲವಂತರಕಂಠಿ, ರುದ್ರಯ್ಯ ರೇವಣಗಿಮಠ, ವೀರೇಶ ಹಾದಿಮನಿ, ರಫಿಕ್‌ ಕೊಡಗಲಿ, ಗುರುಮೂರ್ತಿ ಕಣಕಾಲಮಠ, ಅಂಬ್ರೇಶ ಪೂಜಾರಿ ಹಾಗೂ ಇನ್ನಿತರರು ಇದ್ದರು.

ಪರಿಸರ, ಭೂಮಿ, ಸಾಹಿತ್ಯ ಮತ್ತು ಇನ್ನು ಅನೇಕರಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಅವರು ಮಾತುಗಳು ಕೇಳುವುದು ಒಂದು ಪುಣ್ಯ, ಅಂತಹ ಮಹಾನ ಶ್ರೀಗಳು ನಮ್ಮನ್ನು ಇಂದು ಅಗಲಿ ಹೋಗಿದ್ದಾರೆ. ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದರು ನಾನು ಆ ಪ್ರಶಸ್ತಿಯ ಅರ್ಹನಲ್ಲ ಎಂದು ತಮ್ಮ ಜೀವಿತಾ ಅವಧಿಯಲ್ಲಿ ಒಂದು ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಅವರ ಜೀವನ ನಮಗೆ ಆದರ್ಶವಾಗಿದೆ.

ಬಸವರಾಜ ಹಾದಿಮನಿ, ಶಿಕ್ಷಕರು.

Follow Us:
Download App:
  • android
  • ios