ಕೊಪ್ಪಳ(ಜ.15): ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕೇವಲ ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ಈಗ ನಾನಾ ದೇಶಗಳಲ್ಲಿಯೂ ಗವಿಮಠ ಭಕ್ತರು ಇದ್ದು, ಅಲ್ಲಿಯೂ ಜಾತ್ರೆಯ ರಥೋತ್ಸವವನ್ನು ನೇರವಾಗಿ ವೀಕ್ಷಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಗವಿಮಠದ ವತಿಯಿಂದ ಅಪ್ ಲೋಡ್ ಮಾಡಲಾಗುತ್ತದೆ ಮತ್ತು ನೇರ ಪ್ರಸಾರವೂ ಇರುತ್ತದೆ. ಇದನ್ನು ದೇಶ, ವಿದೇಶಗಳಲ್ಲಿ ನೋಡಿರುವ ವಿವರ ಲಭ್ಯವಾಗಿದೆ. 

205 ನೇ ಗವಿಸಿದ್ಧೇಶ್ವರ ಮಹಾರಥೋತ್ಸವದ ಜಾತ್ರೆಯ ನೇರ ಪ್ರಸಾರವನ್ನು ಶ್ರೀಮಠದ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವಿಧ ದೇಶದ ಜನರು ವೀಕ್ಷಿಸಿದ್ದಾರೆ. ಭಾರತ 21,604, ಯುನೈಟೆಡ್ ಸ್ಟೇಟ್-144, ಏಷಿಯಾ ಫೆಸಿಪಿಕ್-127, ಆಸ್ಟ್ರೇಲಿಯಾ-38, ಓಮನ್-25, ಸಿಂಗಾಪುರ-22, ಯುರೋಪ್-14, ಜರ್ಮನಿ-11, ಯುನೈ ಟೆಡ್ ಅರಬ್ ಎಮಿರೇಟ್ಸ್-11, ಸೌಧಿ ಅರೇಬಿಯಾ-6, ಮಲೇಷಿಯಾ-6, ಉಕ್ರೇನ್ -5, ಯುನೈಟೆಡ್ ಕಿಂಗ್ಡಮ್-4, ಐರ್ಲೆಂಡ್ -1, ವಿಯಟ್ನಾಂ-1, ಪೋಲೆಂಡ್-1, ರಷಿ ಯನ್ ಫೆಡರೇಷನ್-1, ಇಟಲಿ-1, ಕೆನಡಾ- 4, ಚೀನಾ-3, ಬೆಲ್ಜಿಯಂ-3, ಜಪಾನ್-3, ಫಿಲಿಫೈನ್ಸ್-2, ಸ್ವೀಡನ್-2, ಅಲ್ಜೇರಿಯಾ-1, ಲಿಬಿಯಾನ್ ಅರಬ್ ಜಮಾಹಿರಿಯಾ-1, ನೆದರ್‌ಲ್ಯಾಂಡ್-1, ಪ್ರಾನ್ಸ್-೧ ಹಾಗೂ ರಷ್ಯಾ ರಿಪಬ್ಲಿಕ್-4 ರಾಷ್ಟ್ರಗಳಲ್ಲಿರುವ ಭಕ್ತಾಧಿಗಳು ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನೇರ ಪ್ರಸಾರವನ್ನು ವೀಕ್ಷಿಸಿ ಆನಂದಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗವಿಮಠದ ಅಧಿಕೃತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಹ ಮಹಾ ರಥೋತ್ಸವದ ದಿನದಂದು ಬೆ. 3ಕ್ಕೆ ಕರ್ತೃ ಗದ್ದುಗೆಗೆ ಅಭಿಷೇಕದ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದ್ದ ವಿಡಿಯೋ 91,706 ಭಕ್ತ ಜನರಿಗೆ ತಲುಪಿದೆ. ಇದಕ್ಕೆ 5,742 ಭಕ್ತಾದಿಗಳು ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸುವುದರ ಮೂಲಕ ಮತ್ತೊಬ್ಬರಿಗೆ ಅದನ್ನು ವಿನಿಮಯ ಮಾಡಿಕೊಂಡಿದ್ದಾರೆ. ಹಾಗೆಯೇ ತೆಪ್ಪೋತ್ಸವದ ಕಾರ್ಯಕ್ರಮದ ವಿಡಿಯೋವನ್ನು 6,954 ಭಕ್ತರು ವೀಕ್ಷಿಸಿ, 291 ಭಕ್ತಜನರು ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸುವುದರ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ. 

ಈ ವರ್ಷದ ಜಾಥಾದ ಲಕ್ಷ ವೃಕ್ಷೋತ್ಸವದ ವಿಡಿಯೋವನ್ನು 13,613 ಭಕ್ತರು ವೀಕ್ಷಿಸಿ, 902 ಭಕ್ತರು ಹಂಚಿಕೊಂಡಿದ್ದಾರೆ. ಮಹಾ ರಥೋತ್ಸವಕ್ಕೆ ಆಮಂತ್ರಣ ನೀಡುವ ವಿಡಿಯೋವನ್ನು 2,47,958 ಭಕ್ತರು ನೋಡಿ, ಹಂಚಿಕೊಂಡರೆ, ಅಜ್ಜನ ಜಾತ್ರೆಗೆ ಬನ್ನಿ ಎಂಬ 2002ರ ಆಮಂತ್ರಣ ಪತ್ರಿಕೆಯನ್ನು 82,490 ಭಕ್ತ ಜನರಿಗೆ ತಲುಪಿದ್ದು, 3,985 ಭಕ್ತರು ಶೇರ್ ಮಾಡಿದ್ದಾರೆ. ಇದಲ್ಲದೇ ಜಾತ್ರೆಯ ನೇರ ವೀಕ್ಷಣೆಗೆ ಈ ಸಲ ಕ್ಯೂಆರ್ ಕೋಡ್ ಸೌಲಭ್ಯ ಮಾಡಲಾಗಿದ್ದು, 3754 ಭಕ್ತಜನರು ಜಾತ್ರಾ ಕಾರ್ಯ ಕ್ರಮಗಳನ್ನು ಡೌನ್‌ಲೋಡ್ ಮಾಡಿದ್ದಾರೆ. 

ಇದೇ ರೀತಿ ಜಾತ್ರೆಯ ಮಾಹಿತಿ ನೀಡುವ ಧ್ವನಿಮುದ್ರಿತ 7,50,000 ಎಸ್‌ಎಂಎಸ್‌ನ್ನು ಕಳುಹಿಸಲಾಗಿದ್ದು, ಅದರಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಆ ಕರೆ ಸ್ವೀಕರಿಸಿದ್ದಾರೆ. ವಾಟ್ಸಾಪ್ ಗುಂಪಿನಲ್ಲಿ 1,50,000 ಭಕ್ತರು ಜಾತ್ರೆಯ ಮಾಹಿತಿ ಪಡೆದಿರುತ್ತಾರೆ. ಅದೇ ರೀತಿ 204 ಭಕ್ತ ಜನರು ಆನ್‌ಲೈನ್ ಅಭಿಷೇಕ ಸೌಲಭ್ಯದ ಮೂಲಕ ಕರ್ತೃ ಗದ್ದುಗೆಗೆ ಅಭಿಷೇಕ ಮಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲೂ ಅಜ್ಜನ ಜಾತ್ರೆ ವೈಭವ ಮತ್ತಷ್ಟು ಇಮ್ಮಡಿಗೊಂಡಿದೆ.

ಈ ಬಗ್ಗೆ ಮಾತನಾಡಿದ ತಂತ್ರಜ್ಞಾನ ಉಸ್ತುವಾರಿ ಮಂಜುನಾಥ ಉಲ್ಲತ್ತಿ ಅವರು, ನಾನಾ ದೇಶದಲ್ಲಿಯೂ ಗವಿಮಠ ರಥೋತ್ಸವವನ್ನು ವೀಕ್ಷಣೆ ಮಾಡಿದ್ದಾರೆ. ಹಿಂದಿಗಿಂತಲೂ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಅಂತರ್ಜಾಲದಲ್ಲಿಯೇ ಲಕ್ಷಾಂತರ ಭಕ್ತರು ನೇರ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.