"

ಬಳ್ಳಾರಿ(ಜೂ.11): ಕೊರೋನಾ ಭೀತಿ ಮಧ್ಯೆ ದೇವಸ್ಥಾನ ಓಪನ್ ಆದರೂ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿರುವ ದೇವರಿಗೆ ಮಾತ್ರ ಪೂಜೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೌದು, ಪುರಾತತ್ವ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಅರ್ಚಕರು ಹಂಪಿಯ ಸುಪ್ರಸಿದ್ಧ ಬೃಹತ್ ಬಣವಿಲಿಂಗ ಸ್ವಾಮಿಗೆ ಹೊರಗಡೆಯಿಂದ ಪೂಜೆ ಮಾಡಿದ್ದಾರೆ. 

ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡುವ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಣವಿಲಿಂಗ ದೇವಸ್ಥಾನ ಬೀಗ ತೆರೆಯದ ಅಧಿಕಾರಿಗಳ ವಿರುದ್ಧ ಅರ್ಚಕರೂ ಕೂಡ  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಳ್ಳಾರಿ: ಹಂಪಿ ದೇವ​ಸ್ಥಾನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ

ಹತ್ತು ವರ್ಷಗಳ ಹಿಂದೆ ದೇವಸ್ಥಾನಕ್ಕೆ ಗೇಟ್ ನಿರ್ಮಾಣ ಮಾಡಿದ್ದ ಪುರಾತತ್ವ ಇಲಾಖೆಯ ಅಧಿಕಾರಿಗಳು ಪೂಜೆ ವೇಳೆಗೆ ಗೇಟ್ ಅನ್ನು ತೆರೆಯುತ್ತಿದ್ದರು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇವಾಲಲಯವನ್ನ ಬಂದ್‌ ಮಾಡಲಾಗಿತ್ತು.  ಇದೀಗ ಸರ್ಕಾರ ಪೂಜೆಗೆ ಅವಕಾಶ ನೀಡಿದೆ. ಆದರೂ ಕೂಡ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಅರ್ಚಕರು ದೇವಸ್ಥಾನದ ಹೊರಗಡೆಯಿಂದಲೇ ಪೂಜೆ ಮಾಡಿದ್ದಾರೆ. ಇದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.