ತಿರುಪತಿ ಹುಂಡಿಗೆ 20 ಚಿನ್ನದ ಬಿಸ್ಕತ್ ಹಾಕಿದ ಭಕ್ತ
ತಿರುಮಲದ ಪ್ರಖ್ಯಾತ ವೆಂಕಟೇಶ್ವರ ದೇಗುಲದ ಹುಂಡಿಗೆ ಅನಾಮಿಕ ಭಕ್ತರೊಬ್ಬರು ಬರೋಬ್ಬರಿ 2 ಕೆ.ಜಿ. ತೂಕದ 20 ಚಿನ್ನದ ಬಿಸ್ಕತ್‌ಗಳನ್ನು ಕಾಣಿಕೆಯಾಗಿ ಹಾಕಿದ್ದಾರೆ.
ತಿರುಪತಿ(ಜು.13): ತಿರುಮಲದ ಪ್ರಖ್ಯಾತ ವೆಂಕಟೇಶ್ವರ ದೇಗುಲದ ಹುಂಡಿಗೆ ಅನಾಮಿಕ ಭಕ್ತರೊಬ್ಬರು ಬರೋಬ್ಬರಿ 2 ಕೆ.ಜಿ. ತೂಕದ 20 ಚಿನ್ನದ ಬಿಸ್ಕತ್‌ಗಳನ್ನು ಕಾಣಿಕೆಯಾಗಿ ಹಾಕಿದ್ದಾರೆ.
ಶನಿವಾರದ ಹುಂಡಿ ಕಾಣಿಕೆ ಲೆಕ್ಕ ಮಾಡುವ ವೇಳೆ 20 ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿದ್ದು, ಅವು 2 ಕೆ.ಜಿ. ತೂಕ ಇವೆ ಎಂದು ತಿರುಮಲ ತಿರುಪತಿ ದೇಗುಲ (ಟಿಟಿಡಿ)ದ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು
ಕೊರೋನಾ ಹಿನ್ನೆಲೆಯಲ್ಲಿ 3 ತಿಂಗಳು ಮುಚ್ಚಲ್ಪಟ್ಟಿದ್ದ ದೇಗುಲ ಜೂ.11ರಿಂದ ಪುನಾರಂಭವಾಗಿದ್ದು, ಸುಮಾರು ಎರಡು ಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 16.7 ಕೋಟಿ ರು. ದೇಣಿಗೆ ಬಂದಿದೆ. ದರ್ಶನಕ್ಕೆ ಟಿಕೆಟ್ ಕಾಯ್ದಿರಿಸಿದ್ದ 67 ಸಾವಿರ ಮಂದಿ ವಿವಿಧ ಕಾರಣಗಳಿಂದಾಗಿ ಭೇಟಿ ನೀಡಿಲ್ಲ ಎಂದಿದ್ದಾರೆ.
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ವೆಂಕಟೇಶ್ವರ ದೇವಾಲಯ ಮರು ಆರಂಭವಾಗಿ ಎರಡು ವಾರ ಕಳೆದಾ 14 ದಿನಗಳಲ್ಲಿ ದೇವಾಲಯದಲ್ಲಿ ಸುಮಾರು 7.5 ಕೋಟಿ ಆದಾಯ ಸಂಗ್ರಹವಾಗಿತ್ತು.