ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭ್ಯುದಯ: ಸುರೇಶಗೌಡ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭ್ಯುದಯವಾಗುತ್ತದೆ ಎಂದು ಶಾಸಕ ಬಿ ಸುರೇಶಗೌಡ ತಿಳಿಸಿದರು.

Development of Villages through Road Development: Suresh Gowda snr

 ತುಮಕೂರು :  ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭ್ಯುದಯವಾಗುತ್ತದೆ ಎಂದು ಶಾಸಕ ಬಿ ಸುರೇಶಗೌಡ ತಿಳಿಸಿದರು.

ಅವರು ಗುರುವಾರ ಕ್ಷೇತ್ರದ ಹುಳ್ಳೇನಹಳ್ಳಿ ಮುಖ್ಯರಸ್ತೆಯಿಂದ ತೋಪೇಗೌಡನಪಾಳ್ಯಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುಖೇನ ಕ್ಷೇತ್ರದ ಜನರ ಋುಣ ತೀರಿಸುವಂತಹ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಓಆರ್‌ಎಫ್‌ ಯೋಜನೆಯಡಿಯಲ್ಲಿ ಕ್ಷೇತ್ರದ ರಸ್ತೆ ಸುಧಾರಣೆ ಮತ್ತು ರಸ್ತೆ ಅಭಿವೃದ್ಧಿಗಾಗಿ 70 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದು, ಸದರಿ ಅನುದಾನದಲ್ಲಿ ಈ ಭಾಗದ ನಾಲ್ಕಾರು ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಿಕೊಡುವುದಾಗಿ ತಿಳಿಸಿದರು. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಈ ಯೋಜನೆ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಳಕಲ್ಲು ಪಂಚಾಯಿತಿ ಅಧ್ಯಕ್ಷÜ ಆಂಜಿನಪ್ಪ, ತಾ.ಪಂ. ಮಾಜಿ ಸದಸ್ಯ ನೀಲಕಂಠಪ್ಪ, ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಸುನಂದಾ ಹನುಮೇಗೌಡರು, ಗ್ರಾ ಪಂ ಸದಸ್ಯರಾದ ಶಿವಮೂರ್ತಿ, ಕುಮಾರ್‌, ಮುಖಂಡರಾದ ವಡ್ಡರಹಳ್ಳಿ ಶ್ರೀನಿವಾಸ್‌, ಮರೀಗೌಡ, ಗ್ರಾಪಂ ಮಾಜಿ ಸದಸ್ಯರಾದ ಶಶಿಕಿರಣ…, ಹಮೀದ್‌ ಖಾನ್‌, ಗಿರೀಶ್‌, ರಮೇಶ, ನಟರಾಜು, ಹೊಳಕಲ್ಲು ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ ನಾಗಣ್ಣ, ನರುಗನಹಳ್ಳಿ ಕುಮಾರ್‌, ಹುಳ್ಳೇನಹಳ್ಳಿ ಹಾಗೂ ತೋಪೇಗೌಡನ ಪಾಳ್ಯದ ಎಲ್ಲಾ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಕ್ರಾಂತಿ

ವಿಜಯಪುರ(ಆ.26): ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಷಷ್ಠ ಮಾರ್ಗವಾಗಿ (ಸಿಕ್ಸ್‌ ಲೈನ್‌) ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಅವರು ತಿಳಿಸಿದರು. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಗತಿಯಿಂದ ದೊಡ್ಡಮಟ್ಟದ ಅನುಕೂಲವಾಗಿದೆ. ಈ ಕಾರಣಕ್ಕಾಗಿಯೇ ಪ್ರಸ್ತುತ ಚತುಷ್ಪಥ ಮಾರ್ಗವಾಗಿರುವ ಈ ರಸ್ತೆಯನ್ನು ಷಷ್ಠ ಮಾರ್ಗ (ಸಿಕ್ಸ್ ಲೇನ್) ಮಾರ್ಪಾಡು ಮಾಡಲು ಸಹ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಕಳೆದ 9 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಕಾಮಗಕಾರಿಗಳ ಗಮನಾರ್ಹ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ರಸ್ತೆ ಕ್ರಾಂತಿಯನ್ನೇ ಮಾಡಲಾಗಿದೆ. 9 ವರ್ಷಗಳ ಅವಧಿಯಲ್ಲಿ 1514.71 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು, ೪೦೨೫.೮೬ ಕೋಟಿ ಖರ್ಚು ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಬರ ವಿಚಾರದಲ್ಲಿ ಬೊಮ್ಮಾಯಿ ರಾಜಕೀಯ ಸಲ್ಲ: ಸಚಿವ ಎಂ.ಬಿ.ಪಾಟೀಲ್‌

ಕಳೆದ 9 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಅನುದಾನ ಅಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ, ರಾಜ್ಯ ಹೆದ್ದಾರಿ ಮೊದಲಾದ ಕಾಮಗಾರಿಗಳ ಪ್ರಗತಿಯ ತಾಂತ್ರಿಕ ವಿವರಣೆ, ಖರ್ಚು ಮಾಡಲಾದ ಅನುದಾನ, ಮಾರ್ಗಗಳ ಮೇಲ್ದರ್ಜೆ ಹೀಗೆ ಪ್ರಸ್ತುತ ಕಾಮಗಾರಿಯ ಹಂತದ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದರು.

ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸುಸಜ್ಜಿತವಾಗಿ ರಸ್ತೆ ನಿರ್ಮಾಣಗೊಂಡಿರುವುದುರಿಂದ ಸೊಲ್ಲಾಪೂರ ಹಾಗೂ ಮುಂಬಯಿ ಪ್ರಯಾಣಕ್ಕೆ ಸುಗಮ ಸಂಚಾರ ಸಾಧ್ಯವಾಗಿದ್ದು, ಒಟ್ಟು ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯ 110 ಕಿ.ಮೀ. ಕಾಮಗಾರಿಯನ್ನು ₹1576 ಕೋಟಿ ವೆಚ್ಚವಾಗಿದೆ ಎಂದರು.

 

Latest Videos
Follow Us:
Download App:
  • android
  • ios