200 ಕೋಟಿ ವೆಚ್ಚದಲ್ಲಿ ಕೆ.ಸಿ.ಜನರಲ್‌ ಆಸ್ಪತ್ರೆ ಅಭಿವೃದ್ಧಿ: ಸಚಿವ ದಿನೇಶ್ ಗುಂಡೂರಾವ್

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯನ್ನು ಇನ್ನಷ್ಟು ಜನಪರವಾಗಿಸಲು ₹66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಸುಮಾರು ₹200 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Development of KC General Hospital at a cost of 200 crores says Minister Dinesh Gundu rao gvd

ಬೆಂಗಳೂರು (ಜೂ.30): ನಗರದ ಕೆ.ಸಿ. ಜನರಲ್‌ ಆಸ್ಪತ್ರೆಯನ್ನು ಇನ್ನಷ್ಟು ಜನಪರವಾಗಿಸಲು ₹66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಸುಮಾರು ₹200 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನಿರ್ಮಾಣವಾಗುತ್ತಿರುವ ಟ್ರಾಮಾ ಕೇರ್ ಸೆಂಟರ್‌ ಕಾಮಗಾರಿ ಪರಿಶೀಲಿಸಿದರು. ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 50 ಬೆಡ್ ಸಾಮರ್ಥ್ಯದ ಟ್ರಾಮಾ ಸೆಂಟರ್ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕವನ್ನ ನೂತನ ಟ್ರಾಮಾ ಸೆಂಟರ್ ಸ್ಥಳಾಂತರ ಮಾಡುವ ಬಗ್ಗೆಯೂ ಅವರು ಸಮಾಲೋಚಿಸಿದರು.

ಒಬ್ರು ಸಿಎಂ ಇರೋವಾಗ ಮತ್ತೊಬ್ಬ ಸಿಎಂ ಚರ್ಚೆ ಅಪ್ರಸ್ತುತ: ಸಚಿವ ದಿನೇಶ್‌ ಗುಂಡೂರಾವ್‌

ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ₹66.78 ಕೋಟಿ ವೆಚ್ಚದಲ್ಲಿ ₹200 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಭೂಮಿಪೂಜೆ ಸಿದ್ಧತೆ ನಡೆಸಬೇಕು. ₹9.98 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಹಳೆ ಕಟ್ಟಡಗಳ ದುರಸ್ತಿ, ಆರ್‌ಸಿಸಿ ಸಜ್ಜಾಗಳನ್ನು ಮರು ನಿರ್ಮಾಣ, ಶೌಚಾಲಯಗಳ ನೀರು ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆ ಸೇರಿ ವಿವಿಧ ದುರಸ್ತಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.

ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಬೇರೆಡೆ ಹೋಗುವ ಸ್ಥಿತಿ ಬರಬಾರದು. ಸರ್ಕಾರಿ ಔಷಧಿ ಅಂಗಡಿಯನ್ನೇ ಮಧ್ಯರಾತ್ರಿವರೆಗೂ ತೆರೆಯಲು ಅಗತ್ಯ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು. ಜತೆಗೆ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಘಟಕವನ್ನೂ ರಾತ್ರಿ 10 ಗಂಟೆವರೆಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್

ಮೊತ್ತ (ಕೋಟಿ) ಕಾಮಗಾರಿ
₹66.78 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ
₹35 ಟ್ರಾಮಾಕೇರ್ ಸೆಂಟರ್ ಕಾಮಗಾರಿ ಮಾರ್ಚ್ ಒಳಗೆ ಪೂರ್ಣ
₹38.28 ಬೋಧಕ ವಿಭಾಗ ಕಟ್ಟಡ ನಿರ್ಮಾಣ
₹4.28 ಶವಾಗಾರ ಕೊಠಡಿ
₹4.80 ವೆಚ್ಚದ ಅಗ್ನಿ ಶಾಮಕ ವ್ಯವಸ್ಥೆ
₹2 ಲಾಂಡ್ರಿ
₹38 ಲಕ್ಷ ಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ

Latest Videos
Follow Us:
Download App:
  • android
  • ios