ಸ್ಮಾರ್ಟ್‌ ಸಿಟಿಯಾಗಿ ದೇವನಹಳ್ಳಿ ಅಭಿವೃದ್ಧಿ: ಸಚಿವ ಮುನಿಯಪ್ಪ

ಮುಂದಿನ ಹತ್ತು ವರ್ಷಗಳಲ್ಲಿ ದೇವನಹಳ್ಳಿ ಪಟ್ಟಣ ಬೆಂಗಳೂರು ಮಹಾನಗರಕ್ಕೆ ಸೇರಲಿದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. 

Development of Devanahalli as Smart City Says Minister KH Muniyappa gvd

ದೇವನಹಳ್ಳಿ (ಜು.16): ಮುಂದಿನ ಹತ್ತು ವರ್ಷಗಳಲ್ಲಿ ದೇವನಹಳ್ಳಿ ಪಟ್ಟಣ ಬೆಂಗಳೂರು ಮಹಾನಗರಕ್ಕೆ ಸೇರಲಿದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ಯಾವುದೇ ಕಾಮಗಾರಿ ಕೈಗೊಂಡರೂ ಕನಿಷ್ಟ40 ವರ್ಷ ಬಾಳಿಕೆ ಬರುವಂತ ಗುಣಮಟ್ಟದ ಕೆಲಸವಾಗಬೇಕು ಎಂದರು. ಪುರಸಭೆಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯವಾಗಿ ನಗರದಲ್ಲಿ ಶಾಶ್ವತ ಕುಡಿಯುವ ನೀರು, ಸಮರ್ಪಕ ರಸ್ತೆ ಮತ್ತು ಒಳ ಚರಂಡಿಗಳ ಅವಶ್ಯಕತೆ ಇದೆ. ಜಿಲ್ಲಾಧಿಕಾರಿಗಳು ಪರಿಶೀಲಿಸುವರು. 

ಯಾವುದೇ ಕಾಮಗಾರಿ ಕೈಗೊಂಡರೂ ಕನಿಷ್ಠ 40 ವರ್ಷ ಬಾಳಿಕೆ ಬರುವಂತಹ ಗುಣಮಟ್ಟದ ಕೆಲಸ ಮಾಡಬೇಕು. ತಾವೇನೆ ಮಾಡಿದರೂ ಶಾಶ್ವತ ಕೆಲಸಗಳನ್ನೇ ಮಾಡುತ್ತೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಅವರವರ ಅಧಿಕಾರ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಉಳಿಯಬೇಕು. ಏನೇ ಸಮಸ್ಯೆಗಳಿದ್ದರೂ ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ. ನಂದಿ ಉಪಚಾರ್‌ವರೆಗೂ ಕಾಂಕ್ರೀಟ್‌ ರಸ್ತೆ ಮಾಡಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಪ್ರತಿ ವಾರ್ಡ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಐತಿಹಾಸಿಕ ಜಿ-20 ಶೃಂಗಸಭೆಗೆ ವಿಧ್ಯುಕ್ತ ತೆರೆ: ಹಂಪಿ ಬಗ್ಗೆ ಪ್ರಶಂಸೆ

ಜಿಲ್ಲಾಧಿಕಾರಿ ಡಾ.ಶಿವಶಂಕರ್‌ ಮಾತನಾಡಿ, ತಾಲೂಕಿನಲ್ಲಿ ಎರಡು ಪುರಸಭೆಯಿದ್ದು ದೇವನಹಳ್ಳಿಯಲ್ಲಿ ಮೂಲ ಸೌಲಭ್ಯಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಮುಖ್ಯವಾಗಿ ಕುಡಿಯುವ ನೀರು, ಒಳ ಚರಂಡಿ, ರಸ್ತೆ ಹೀಗೆ ನಾಗರಿಕ ಸೌಲಭ್ಯಗಳನ್ನು ನೀಡಲಾಗುವುದು. ಅಲ್ಲದೆ ಬೆಳಗಿನ ಸ್ವಚ್ಛತೆ ಕಾರ್ಯ ಮಾಡುವ ಸಂದರ್ಭದಲ್ಲಿ ತಾವು ಭೇಟಿ ನೀಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಪುರಸಭೆ ಆಡಳಿತಾಧಿಕಾರಿ ಹಾಗು ಉಪ ವಿಭಾಗಾಧಿಕಾರಿ ಶ್ರೀನಿವಾಸ್‌, ತಹಸೀಲ್ದಾರ್‌ ಶಿವರಾಜ್‌, ಜಿಪಂ ಸಿಇಒ ಡಾ.ಅನುರಾಧ ಉಪಸ್ಥಿತರಿದ್ದರು. ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್‌, ಎನ್‌.ರಘು ಸಚಿವರನ್ನು ಗೌರವಿಸಿದರು.

ಅಕ್ಕಿ ಬದಲು ಹಣ ಭಾಗ್ಯ ತಾತ್ಕಾಲಿಕ: ಅನ್ನಭಾಗ್ಯದಡಿ 5 ಕೆ.ಜಿ. ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ನೀಡುತ್ತಿರುವುದು ತಾತ್ಕಾಲಿಕ ಅಷ್ಟೆ. ಮುಂದಿನ ದಿನಗಳಲ್ಲಿ ಪರ್ಯಾಯ ಮಾರ್ಗಗಳಿಂದ ಅಕ್ಕಿ ಖರೀದಿಸಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಶುಕ್ರವಾರ ಸದನದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಉಂಟಾದ ಅಕ್ಕಿ ಗದ್ದಲದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದರು.

ಕುಡಿಯೋದಕ್ಕೇ ನೀರಿಲ್ಲ, ತ.ನಾಡಿಗೆ ಕೊಡೋದು ಹೇಗೆ?: ಸಚಿವ ಚಲುವರಾಯಸ್ವಾಮಿ

ಅನ್ನಭಾಗ್ಯ ಯೋಜನೆಯಡಿ ನಾವು ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿ ಜೊತೆ ಇನ್ನೂ 5 ಕೆ.ಜಿ. ಸೇರಿಸಿ 10 ಕೆ.ಜಿ. ನೀಡಲು ಉದ್ದೇಶಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಲಿಲ್ಲ. ವಿವಿಧ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪ್ರಯತ್ನಿಸಿದೆವು, ಸಾಧ್ಯವಾಗಲಿಲ್ಲ. ಆದರೆ, ನಾವು ಜನರಿಗೆ ಕೊಟ್ಟಮಾತು ತಪ್ಪಬಾರದು ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಪ್ರತಿ ಕೆ.ಜಿ.ಗೆ 34 ರು.ನಂತೆ ಫಲಾನುಭವಿಗಳಿಗೆ ತಲಾ 5 ಕೆ.ಜಿ.ಗೆ. 170 ರು. ಹಣ ನೀಡಲು ತೀರ್ಮಾನಿಸಿದೆವು. ಇದು ತಾತ್ಕಾಲಿಕ ಅಷ್ಟೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಅಕ್ಕಿ ಖರೀದಿಸಿದ ಬಳಿಕ ಹಣದ ಬದಲು ನಾವು ಅಕ್ಕಿಯನ್ನೇ ನೀಡುತ್ತೇವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios