Asianet Suvarna News Asianet Suvarna News

ಅಭಿವೃದ್ಧಿ ಆಶಯವೇ ಗ್ರಾಮಾಭಿವೃದ್ದಿಯ ಮೂಲ ಉದ್ದೇಶ : ಯೋಜನಾಧಿಕಾರಿ ಬಾಲಕೃಷ್ಣ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಹೇಮಾವತಿ ಹೆಗ್ಗಡೆ ಅವರು ಸಮುದಾಯದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳಿಗೆ ಪ್ರೆರೇಪಣೆ ನೀಡುತ್ತಿದ್ದಾರೆ. ಇಂತಹ ಆಶಯದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವೇ ಶುದ್ಧಗಂಗಾ ಕಾರ್ಯಕ್ರಮ ಎಂದು ಕೊರಟಗೆರೆ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ತಿಳಿಸಿದರು.

Development is the basic purpose of village development: Project Officer Balakrishna snr
Author
First Published Jan 9, 2024, 10:27 AM IST

 ಕೊರಟಗೆರೆ :  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಹೇಮಾವತಿ ಹೆಗ್ಗಡೆ ಅವರು ಸಮುದಾಯದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳಿಗೆ ಪ್ರೆರೇಪಣೆ ನೀಡುತ್ತಿದ್ದಾರೆ. ಇಂತಹ ಆಶಯದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವೇ ಶುದ್ಧಗಂಗಾ ಕಾರ್ಯಕ್ರಮ ಎಂದು ಕೊರಟಗೆರೆ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಕೋಟೆ ಮಾರಮ್ಮದೇವಾಲಯದ ಬಳಿ ಇರುವ ಕೋಟೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಜಲ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿ, ಕೊರಟಗೆರೆ ತಾಲೂಕಿನಲ್ಲಿ ಆರು ಶುದ್ದಗಂಗಾ ಘಟಕಗಳಿವೆ. ಘಟಕಗಳಲ್ಲಿ 5 ರು. 20 ಲೀಟರ್ ನೀರಿನಂತೆ ಕೊಡುತ್ತಿದ್ದೇವೆ. ನಮ್ಮ ಶುದ್ಧಗಂಗ ಕುಡಿಯುವ ನೀರಿನ ಘಟಕದಲ್ಲಿ 2000 ಬಳಕೆದಾರರು ದಿನವಹಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಶುದ್ಧಗಂಗಾ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯದಲ್ಲಿ 407 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಳಕೆದಾರರು ದಿನವಹಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಘಟಕಗಳಲ್ಲಿ ಸಮಾಜದ ಅತೀ ಬಡ ಕುಟುಂಬಗಳಿಗೂ ಅತೀ ಕಡಿಮೆ ದರದಲ್ಲಿ ನೀರು ದೊರೆಯುತ್ತಿರುವುದರಿಂದ ಈ ಕಾರ್ಯಕ್ರಮ ಜನ ಮಾನ್ಯತೆ ಗಳಿಸಿದೆ ಎಂದು ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಬಳಕೆಯಿಂದಾಗುವ ಪ್ರಯೋಜನಗಳು: ಶುದ್ಧ ನೀರು ಕುಡಿದರೆ ದೇಹದಲ್ಲಿರುವ ವಿಷಾಂಶ ಮಲದ ಮೂಲಕ ಹೊರ ಹೋಗುತ್ತದೆ, ಕಾಯಿಲೆಯಿಂದ ದೇಹವನ್ನು ಮುಕ್ತಗೊಳಿಸಬಹುದು, ಶುದ್ಧ ನೀರು ಆರೋಗ್ಯವನ್ನು ಕಾಪಾಡುತ್ತದೆ, ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡುತ್ತದೆ.

ಕಾಯಿನ್ ಬಾಕ್ಸ್ ಹಾಗೂ ಸ್ಮಾರ್ಟ್ ಕಾರ್ಡ್ ನೀರು ವಿತರಣಾ ವ್ಯವಸ್ಥೆಯಲ್ಲಿ ದಿನದ 24 ಗಂಟೆ ನೀರು ವಿತರಿಸಲಾಗುವುದು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಸಹ ಶಿಕ್ಷಕರು, ಮೇಲ್ವಿಚಾರಕ ವಿನೋದ್ ಕುಮಾರ್, ಆಶಾ ಕಾರ್ಯಕರ್ತರು, ವಾಟರ್ ಮ್ಯಾನ್ ರಾಮಕೃಷ್ಣ, ಶುದ್ಧಗಂಗಾ ಘಟಕದ ಪ್ರೇರಕರಾದ ಛಾಯಾದೇವಿ ಭಾಗವಹಿಸಿದ್ದರು.

ಫೋಟೊ

ಪಟ್ಟಣದ ಕೋಟೆ ಮಾರಮ್ಮದೇವಾಲಯದ ಬಳಿ ಇರುವ ಕೋಟೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಜಲ ಅಭಿಯಾನದ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮಾತನಾಡಿದರು.

Follow Us:
Download App:
  • android
  • ios