ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಿ: ಸಚಿವ ದಿನೇಶ್‌ ಗುಂಡೂರಾವ್‌

ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಕುಲಕಸುಬನ್ನು ನಂಬಿಕೊಂಡು ಜೀವನ ಕಟ್ಟಿಕೊಂಡವರು ಈಗ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ಅಲ್ಲದೆ, ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸು ಬೆಳೆಸಿಕೊಂಡು, ಜೀವನದಲ್ಲಿ ಮುಂದೆ ಸಾಗಬೇಕು. ಒಂದು ವೇಳೆ ಹೊಸತನ ಒಪ್ಪದಿದ್ದಲ್ಲಿ ಸಮಾಜದಲ್ಲಿ ಹಿಂದುಳಿಯಬೇಕಾಗುತ್ತದೆ. ಅದು ಉತ್ತಮ ಜೀವನಕ್ಕೆ ಮಾರಕವಾಗುತ್ತದೆ ಎಂದ ದಿನೇಶ್‌ ಗುಂಡೂರಾವ್‌ 

Develop an Adaptive Mind and Move Forward in Life Says Minister Dinesh Gundu Rao grg

ಬೆಂಗಳೂರು(ಆ.31): ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಮೂಲಕ ಹೊಸತನಕ್ಕೆ ಒಗ್ಗಿಕೊಂಡು ಜೀವನದಲ್ಲಿ ಮುಂದುವರಿಯಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟರು.

ಸಂಯುಕ್ತ ಸ್ವಕುಳಸಾಳಿ ಸಂಘದಿಂದ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ ಶ್ರೀ ಜಿಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಕುಲಕಸುಬನ್ನು ನಂಬಿಕೊಂಡು ಜೀವನ ಕಟ್ಟಿಕೊಂಡವರು ಈಗ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ಅಲ್ಲದೆ, ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸು ಬೆಳೆಸಿಕೊಂಡು, ಜೀವನದಲ್ಲಿ ಮುಂದೆ ಸಾಗಬೇಕು. ಒಂದು ವೇಳೆ ಹೊಸತನ ಒಪ್ಪದಿದ್ದಲ್ಲಿ ಸಮಾಜದಲ್ಲಿ ಹಿಂದುಳಿಯಬೇಕಾಗುತ್ತದೆ. ಅದು ಉತ್ತಮ ಜೀವನಕ್ಕೆ ಮಾರಕವಾಗುತ್ತದೆ ಎಂದರು.

ಹೃದಯಾಘಾತ ತಡೆಯಲು ಪುನೀತ್ ಹೆಸರಲ್ಲಿ ಅಪ್ಪು ಯೋಜನೆ: ಸಚಿವ ದಿನೇಶ್ ಗುಂಡೂರಾವ್

ಪ್ರಸ್ತುತ ನೇಕಾರಿಕೆ ಮುಂದುವರಿಸಲು ಸಾಕಷ್ಟುಸವಾಲುಗಳಿವೆ. ಅದನ್ನು ಎದುರಿಸಿ ತಮ್ಮ ಕಸುಬನ್ನು ಮಾಡಬೇಕಿದೆ. ಅದರ ಜತೆಗೆ ಹೊಸಬಗೆಯ ಉದ್ಯೋಗಗಳಿಗೆ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಬೇಕಾಗಿದೆ. ಆಮೂಲಕ ಆಧುನಿಕತೆಗೆ ಹೊಸ ಪೀಳಿಗೆ ಒಗ್ಗಿಕೊಳ್ಳುವಂತೆ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೇನಾರಾಯಣ, ಶ್ರೀ ಮದ್ಭಗವದ್ಗೀತಾ ಗುರುಕುಲಾಶ್ರಮ ಸಂಸ್ಥಾನದ ಶ್ರೀ ರಮಣಾನಂದಗಿರಿ ಸ್ವಾಮೀಜಿ, ಸಂಯುಕ್ತ ಸ್ವಕುಳಸಾಳಿ ಸಂಘದ ಅಧ್ಯಕ್ಷ ಪ್ರದೀಪ್‌ ರೋಖಡೆ ಇತರರಿದ್ದರು.

Latest Videos
Follow Us:
Download App:
  • android
  • ios