ವಿಜಯಪುರ(ಡಿ.13): ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಕೆಲವೊಂದು ಅನಿಷ್ಟ ಪದ್ಧತಿಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಂತಹ ಅನಿಷ್ಟ ಪದ್ಧತಿಗಳಲ್ಲಿ ದೇವದಾಸಿ ಪದ್ಧತಿ ಕೂಡ ಒಂದು. ಈ ಅನಿಷ್ಟ ಪದ್ಧತಿ ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ. 

ಹೌದು, ಬಾಲಕಿಗೆ ಮುತ್ತು ಕಟ್ಟಿ ದೇವದಾಸಿ ಮಾಡಲು ಹೊರಟಿದ್ದ ಘಟನೆ ಜಿಲ್ಲೆಯ ಕಾಕಂಡಕಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಾಲಕಿ 5 ವರ್ಷದವಳಿದ್ದಾಗಲೇ ಕುಟುಂಬಸ್ಥರು ಮುತ್ತು ಕಟ್ಟಿದ್ದ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೀಗ ಬಾಲಕಿ ಹದಿಹರಿಯದ ವಯಸ್ಸಿಗೆ ಬಂದಿದ್ದಾಳೆ. ಈಗ ಬಾಲಕಿಯನ್ನು ದೇವದಾಸಿಯನ್ನಾಗಿ ಮಾಡಲು ನಡೆಸಿದ ಯತ್ನವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಈ ವೇಳೆ ಬಾಲಕಿಯನ್ನು  ರಕ್ಷಣೆ ಮಾಡಿದ ಅಧಿಕಾರಿಗಳು ಬಾಲಕಿಯರ ಬಾಲ‌ ಮಂದಿರಕ್ಕೆ ಕಳುಹಿಸಿದ್ದಾರೆ. 

ಕಾಕಂಡಕಿ ಗ್ರಾಮದಲ್ಲೆ ದೇವದಾಸಿ ಕೆಂಚಮ್ಮಳಿಗೆ ದೇಗುಲ ಕಟ್ಟಿ ಪೂಜಿಸಲಾಗುತ್ತದೆ. ಇದೇ ಗ್ರಾಮದಲ್ಲಿ ಘಟನೆ ನಡೆದಿರೋದು ವಿಪರ್ಯಾಸವೇ ಸರಿ. ಕಳೆದ ಒಂದು ವಾರದ ಹಿಂದೆ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ.