ಸರ್ಕಾರಿ ಜಾಗದ ಗೋ ಕಟ್ಟೆನಾಶ: ರೈತರ ಆಕ್ರೋಶ
ಪುರಾತನ ಕಾಲದಿಂದ ರೈತರ, ಕೃಷಿಕರ, ದನ ಕರುಗಳಿಗೆ ಹಾಗೂ ಪ್ರಾಣಿ ಸಂಕುಲಕ್ಕೆ ಕುಡಿವ ನೀರಿನ ಅನುಕೂಲಕ್ಕೆ ನಿರ್ಮಿಸಿದ್ದ ಗೋಕಟ್ಟೆಯನ್ನು ಪ್ರಭಾವಿಗಳು ಅಕ್ರಮವಾಗಿ ನಾಶಪಡಿಸಿದ್ದು ಈ ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಕ್ರಮ ಜರುಗಿಸಿ ಗೋಕಟ್ಟೆರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ತಾ.ಪಂ ಸದಸ್ಯ ಜಿ ನರಸಿಂಹಯ್ಯ ಒತ್ತಾಯಿಸಿದರು.
ಮಧುಗಿರಿ : ಪುರಾತನ ಕಾಲದಿಂದ ರೈತರ, ಕೃಷಿಕರ, ದನ ಕರುಗಳಿಗೆ ಹಾಗೂ ಪ್ರಾಣಿ ಸಂಕುಲಕ್ಕೆ ಕುಡಿವ ನೀರಿನ ಅನುಕೂಲಕ್ಕೆ ನಿರ್ಮಿಸಿದ್ದ ಗೋಕಟ್ಟೆಯನ್ನು ಪ್ರಭಾವಿಗಳು ಅಕ್ರಮವಾಗಿ ನಾಶಪಡಿಸಿದ್ದು ಈ ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಕ್ರಮ ಜರುಗಿಸಿ ಗೋಕಟ್ಟೆರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ತಾ.ಪಂ ಸದಸ್ಯ ಜಿ ನರಸಿಂಹಯ್ಯ ಒತ್ತಾಯಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ತೆರಿಯೂರು ಗ್ರಾಮದ ಹೊರವಲಯದಲ್ಲಿರುವ ಸರ್ವೆ ನಂ 3/12 ರಲ್ಲಿ ಸರ್ಕಾರಿ ಜಾಗದಲ್ಲಿದ್ದ ಗೋ ಕಟ್ಟೆಯನ್ನು ಪ್ರಭಾವಿಗಳು ನಾಶಪಡಿಸಿದ್ದು ಇದರಿಂದ ಸುತ್ತಮುತ್ತಲಿನ ವೆಂಗಳಮ್ಮನಹಳ್ಳಿ, ತೆರಿಯೂರು, ಅಣ್ಣೇನಹಳ್ಳಿ ಪರ್ತಿಹಳ್ಳಿ ರೈತರ ಜಾನುವಾರುಗಳು ಪ್ರಾಣಿಪಕ್ಷಿಗಳಿಗೆ ನೀರಿಲ್ಲದಂತಾಗಿದೆ ಎಂದು ಆರೋಪಿಸಿದ್ದು ಇದರ ರಕ್ಷಣೆ ತಾಲೂಕು ಆಡಳಿತ ಮುಂದಾಗುವಂತೆ ಒತ್ತಾಯಿಸಿದರು.
ರೈತ ಮುಖಂಡ ಅಣ್ಣೇನಹಳ್ಳಿ ಗೋಪಾಲ್ ಮಾತನಾಡಿ, ಸದರಿ ಜಾಗವನ್ನು ಅಧಿಕಾರಿಗಳು ಶಾಮೀಲಾಗಿ 1994 ರಲ್ಲಿ ಮಂಜೂರಾಗಿದೆ ಎಂದು ಆಕ್ರಮ ದಾಖಲೆಗಳನ್ನು ಸೃಷ್ಠಿಸಿದ್ದು ಇದರಿಂದ ಅನೇಕ ಪ್ರಾಣಿ ಪಕ್ಷಿಗಳಿಗೆ ನೀರಿಲ್ಲದಂತಾಗಿದೆ, ಇದರಿಂದ ರೈತಾಪಿ ವರ್ಗ ಆತಂಕಕ್ಕೀಡಾಗಿದೆ. ಯಾರು ಕಟ್ಟೆನಾಶ ಮಾಡಿದ್ದಾರೂ ಅವರು ತುತಾರ್ಗಿ ಯಥಾಸ್ಥಿತಿ ನಿರ್ಮಾಣ ಮಾಡಿಕೊಡಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರರ ಹೋರಾಟ ಮಾಡಲಾಗುವುದು ಎಂದರು.
ವಕೀಲ ಶಿವಣ್ಣ ಮಾತನಾಡಿ, ಮುದ್ದಗಂಗಮ್ಮ ಎಂಬುವವರಿಗೆ ಅಕ್ರಮವಾಗಿ ಮಂಜೂರಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿ ಮಾಡಲಾಗಿದೆ. ಭೂ ಮಾಫೀಯ ದಂಧೆಕೋರರು ಗೋ ಕಟ್ಟೆಯನ್ನು ನಾಶಪಡಿಸಿದ್ದು ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ. 2021 ರಲ್ಲಿ ಕರ್ನಾಟಕ ಸರಕಾರ ಯಾವುದೆ ಕಟ್ಟೆಕೆರೆ ಕಾಲುವೆ ನಾಶ ಮಾಡದಂತೆ ಅದೇಶ ನೀಡಿದೆ. ಕರ್ನಾಟಕ ಉಚ್ಛನ್ಯಾಯಲಯವು ಯಾವುದೆ ಗುಂಡುತೋಪು, ಕೆರೆ ಕಟ್ಟೆಕಾಲುವೆಗಳ ರಕ್ಷಣೆ ಮಾಡುವಂತೆ ಸೂಚನೆ ನೀಡಿದೆ ಆದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತಿದ್ದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಉಡಾಫೆ ಉತ್ತರ ನೀಡುತ್ತಿದ್ದಾರೆ ಈ ಬಗ್ಗೆ ಉಗ್ರಹ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಟಿ.ಎಂ ತಿಮ್ಮಯ್ಯ, ಟಿ. ಗೊವಿಂದರಾಜು, ರೈತ ಮುಖಂಡರಾದ ಟಿ.ಎ ರಾಮಂಜಿನಯ್ಯ, ನಾರಯಣಪ್ಪ ,ಗೋಪಾಲಪ್ಪ, ಹನುಮಂತರಾಯಪ್ಪ, ಶ್ರೀನಿವಾಸ್, ಚಿಕ್ಕಮೈಲಾರಪ್ಪ ಹಾಜರಿದ್ದರು.