Asianet Suvarna News Asianet Suvarna News

ತುಮಕೂರು ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ ಡೆನ್ಮಾರ್ಕ್ ನೆರವು

ಸ್ಮಾರ್ಟ್‌ ಶಿಕ್ಷಣ, ನಗರ ನೀರು ನಿರ್ವಹಣೆ, ಸಾರಿಗೆ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಜಂಟಿಯಾಗಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಸ್ಪರ ಸಹಕಾರ ನೀಡಲು ಡೆನ್ಮಾರ್ಕ್ ದೇಶದ ಆಲ್‌ಬೋರ್ಗ್‌ ಸ್ಮಾರ್ಟ್‌ ಸಿಟಿ ಮತ್ತು ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ನಡುವೆ ಒಡಂಬಡಿಕೆ ಏರ್ಪಟ್ಟಿದೆ.

Denmark help to tumakur smart city project
Author
Bangalore, First Published Nov 29, 2019, 12:12 PM IST

ಬೆಂಗಳೂರು(ನ.29): ಸ್ಮಾರ್ಟ್‌ ಶಿಕ್ಷಣ, ನಗರ ನೀರು ನಿರ್ವಹಣೆ, ಸಾರಿಗೆ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಜಂಟಿಯಾಗಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಸ್ಪರ ಸಹಕಾರ ನೀಡಲು ಡೆನ್ಮಾರ್ಕ್ ದೇಶದ ಆಲ್‌ಬೋರ್ಗ್‌ ಸ್ಮಾರ್ಟ್‌ ಸಿಟಿ ಮತ್ತು ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ನಡುವೆ ಒಡಂಬಡಿಕೆ ಏರ್ಪಟ್ಟಿದೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಅಲ್‌ಬೋರ್ಗ್‌ ಸ್ಮಾರ್ಟ್‌ ಸಿಟಿ ಪರವಾಗಿ ಡೆನ್ಮಾರ್ಕ್ ರಾಯಭಾರಿ ಫ್ರೆಡ್ಡಿ ಸ್ವಾನೆ ಹಾಗೂ ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ಮುಖ್ಯಸ್ಥೆ ಶಾಲಿನಿ ರಜನೀಶ್‌ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

'ಅಳುವಂತಹದ್ದು ಏನೂ ಆಗಿಲ್ಲ' ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವಲ್ಲಿ ತುಮಕೂರು ನಗರದ ಸಮಗ್ರ ಬೆಳವಣಿಗೆಗೆ ಈ ಸಹಭಾಗಿತ್ವ ಸಹಕರಿಸುತ್ತದೆ. ಒಪ್ಪಂದದಿಂದ ಎರಡು ನಗರಗಳ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ, ಹತ್ತು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿ ಜನರ ಬದುಕು ಉತ್ತಮಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ಅಧಿಕಾರ ರೋಗದಿಂದ ಚುನಾವಣೆ ಬಂದಿದೆ: ಎಚ್‌ಡಿಕೆ

ಡೆನ್ಮಾರ್ಕ್ ರಾಯಭಾರಿ ಫ್ರೆಡ್ಡಿ ಸ್ವಾನೆ ಮಾತನಾಡಿ, ಭವಿಷ್ಯದ ಪೀಳಿಗೆಗೆ ಉತ್ತಮ ಜೀವನ ನಡೆಸಲು ಮತ್ತು ಎದುರಾಗುವ ಸವಾಲುಗಳನ್ನು ಎದುರಿಸಲು ಸ್ಮಾರ್ಟ್‌ ಸಿಟಿ ಯೋಜನೆ ಪೂರಕವಾಗಿದೆ. ಒಪ್ಪಂದದಿಂದ ಎರಡು ನಗರಗಳ ಬೆಳವಣಿಗೆಗೆ ಪರಸ್ಪರ ಸಹಕರಿಸಲು ಸಾಧ್ಯ ಎಂದರು.

ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ಮುಖ್ಯಸ್ಥೆ ಶಾಲಿನಿ ರಜನೀಶ್‌ ಮಾತನಾಡಿ, ಸಹಭಾಗಿತ್ವದಿಂದ ಉಭಯ ನಗರಗಳ ಬೆಳವಣಿಗೆಯಾಗಲಿದೆ ಎಂದು ಆಶಿಸಿದರು.

ಒಪ್ಪಂದದ ವಿಶೇಷತೆ

ನಿರ್ದಿಷ್ಟವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನದ ವಿನಿಮಯ, ಅಧ್ಯಯನ ಪ್ರವಾಸ ಹಾಗೂ ಕಾರ್ಯಾಗಾರಗಳ ಆಯೋಜಿಸುವುದು, ಸ್ಮಾರ್ಟ್‌ ಸಿಟಿ ಯೋಜನಾ ಕ್ಷೇತ್ರದಲ್ಲಿ ಜಂಟಿಯಾಗಿ ಯೋಜನೆಗಳನ್ನು ರೂಪಿಸುವುದು. ಉನ್ನತ ಮಟ್ಟದ ಪ್ರತಿನಿಧಿಗಳು ಎರಡು ನಗರಗಳನ್ನು ಪರಸ್ಪರ ಸಂದರ್ಶಿಸುವುದು, ಅಲ್‌ಬೋರ್ಗ್‌ ನಗರವು ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಯೋಜನೆಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಸಂಭಾವ್ಯ ಮೂಲಗಳನ್ನು ಗುರುತಿಸಲು ಸಹಕಾರ ನೀಡಲಿದೆ.

ಮಂಜಿನ ನಗರಿಯಲ್ಲಿ ಮನಸೆಳೆದ ಖಾದ್ಯೋತ್ಸವ, ಬಾಯಲ್ಲಿ ನೀರೂರಿಸುತ್ತೆ ತಿನಿಸುಗಳು..!

ಇದರ ಜೊತೆಗೆ ಸ್ಮಾರ್ಟ್‌ ಶಿಕ್ಷಣ ಅಡಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಂ, ಡಿಜಿಟಲ್‌ ಲೈಬ್ರರಿ, ಡಿಜಟಲೀಕರಣ ಮತ್ತು ಇಂಧನ ಬಳಕೆಯಲ್ಲಿ ದಕ್ಷತೆ ಹೆಚ್ಚಿಸುವುದು, ಸ್ಮಾರ್ಟ್‌ ಎನರ್ಜಿ ಮೀಟರ್‌ ಅಳವಡಿಕೆ, ವಿದ್ಯುತ್‌ ವಾಹನ ಮತ್ತು ಚಾರ್ಜಿಂಗ್‌ ಕೇಂದ್ರ ಸ್ಥಾಪನೆ,ಸಮಗ್ರ ಬಸ್‌ ಟರ್ಮಿನಲ್‌ ನಿರ್ಮಾಣ, ನಗರಸಾರಿಗೆ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಜಿಪಿಎಸ್‌ ಅಳವಡಿಕೆ, ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ನೀರು ಪೂರೈಕೆ, ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವುದು, ಅಮಾನಿಕೆರೆ ಪುನರುಜ್ಜೀವನ, ಪಾರ್ಕ್ಗಳ ಅಭಿವೃದ್ಧಿ, ಸೌರಶಕ್ತಿ ಬಳಕೆ, ತ್ಯಾಜ್ಯ ವಿಲೇವಾರಿ, ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ, ಅರಣ್ಯ ಬೆಳೆಸುವಿಕೆ ಮುಂತಾದ ಕ್ಷೇತ್ರಗಳಲ್ಲಿ ಉಭಯ ನಗರಗಳು ಪರಸ್ಪರ ಸಹಕಾರ ನೀಡಲಿವೆ.

Follow Us:
Download App:
  • android
  • ios