ಕೊರೋನಾ ಬಳಿಕ ಬೆಂಗ್ಳೂರಲ್ಲಿ ಮತ್ತೆರಡು ರೋಗಗಳ ಕಾಟ: ಎಚ್ಚರದಿಂದರಲು ಸೂಚನೆ

*  ಡೆಂಘೀ, ಚಿಕೂನ್‌ ಗುನ್ಯಾ ಕಾಟ
*  3 ತಿಂಗಳಲ್ಲಿ 186 ಡೆಂಘೀ, 3 ಚಿಕೂನ್‌ಗುನ್ಯಾ ಪ್ರಕರಣ ಪತ್ತೆ
*  ಮುನ್ನೆಚ್ಚರಿಕೆ ವಹಿಸಲು ಮನವಿ
 

Dengue and Chikungunya Cases Increase in Bengaluru After Coronavirus grg

ಬೆಂಗಳೂರು(ಮಾ.16):  ರಾಜಧಾನಿ ಬೆಂಗಳೂರಲ್ಲಿ ಕೊರೋನಾ ಬಳಿಕ ಡೆಂಘೀ ಹಾಗೂ ಚಿಕೂನ್‌ಗುನ್ಯಾ ಕಾಟ ಹೆಚ್ಚಾಗಿದೆ. ಹೌದು, ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ 186 ಡೆಂಘೀ(Dengue) ಹಾಗೂ 3 ಚಿಕೂನ್‌ಗುನ್ಯಾ(Chikungunya) ಪ್ರಕರಣಗಳು ಪತ್ತೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ಸಾರ್ವಜನಿಕರ ಆರೋಗ್ಯಾಧಿಕಾರಿ ಬಾಲಸುಂದರ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಡೆಂಘೀ ಪ್ರಕರಣ ಪತ್ತೆಯಾಗಿವೆ. ಪೂರ್ವ ವಲಯದಲ್ಲಿ 69 ಡೆಂಘೀ ಪ್ರಕರಣ, ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ತಲಾ 26, ಮಹದೇವಪುರದಲ್ಲಿ 33, ಯಲಹಂಕದಲ್ಲಿ 16, ಆರ್‌.ಆರ್‌.ನಗರದಲ್ಲಿ 7, ಬೊಮ್ಮನಹಳ್ಳಿಯಲ್ಲಿ 6 ಹಾಗೂ ದಾಸರಹಳ್ಳಿಯಲ್ಲಿ 3 ಡೆಂಘೀ ಪ್ರಕರಣ ಪತ್ತೆಯಾಗಿವೆ. ದಕ್ಷಿಣ ವಲಯದಲ್ಲಿ 2 ಹಾಗೂ ಯಲಹಂಕ ವಲಯಲ್ಲಿ ಒಂದು ಚಿಕೂನ್‌ ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

Covid-19 deaths: ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹50 ಸಾವಿರ: ಸುಪ್ರೀಂ ಸ್ಪಷ್ಟನೆ

ಎಚ್ಚರಿಕೆ ವಹಿಸಬೇಕು:

ಸಾಮಾನ್ಯವಾಗಿ ಏಪ್ರಿಲ್‌ನಿಂದ ಆಗಸ್ಟ್‌ ಅವಧಿಯಲ್ಲಿ ಹೆಚ್ಚಿನ ಡೆಂಘೀ ಮತ್ತು ಚಿಕೂನ್‌ ಗುನ್ಯಾ ಪ್ರಕರಣಗಳು ಪತ್ತೆಯಾಗುತ್ತವೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ವಾಸಿಸುವ ಸುತ್ತಮುತ್ತ ಪ್ರದೇಶದಲ್ಲಿ ಅನುಪಯುಕ್ತ ನೀರು(Water) ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ನೀರು ಸಂಗ್ರಹಿಸುವ ಪಾತ್ರೆ, ಡ್ರಮ್‌ಗಳನ್ನು ಕನಿಷ್ಠ ವಾರಕ್ಕೊಂದು ಬಾರಿ ಸ್ವಚ್ಛಗೊಳಿಸಬೇಕು. ಸೊಳ್ಳೆ(Mosquito) ಉತ್ಪತ್ತಿಗೆ ಅವಕಾಶ ನೀಡಬಾರದು. ಮೈ ತುಂಬಾ ಬಟ್ಟೆ ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು ಎಂದು ಸಲಹೆ ನೀಡಿದರು.

ಚೀನಾ ಬೆನ್ನಲ್ಲೇ ಅಮೆರಿಕದಲ್ಲಿ ಕೊರೋನಾ ಹೆಚ್ಚಳ, ಭಾರತಕ್ಕೆ ಎಚ್ಚರಿಕೆ ಕರೆಗಂಟೆ!

ಅಮೆರಿಕ: ಕೊರೋನಾ ಅಬ್ಬರ ತಣ್ಣಗಾಗಿ ಭಾರತ ಸೇರಿದಂತೆ ವಿಶ್ವವೇ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಇದರ ನಡುವ ಚೀನಾ, ಕೊರಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ ಅನ್ನೋ ವರದಿ ಭಾರತದಲ್ಲೂ ಆತಂಕ ಹೆಚ್ಚಿಸಿದೆ. ಇದೀಗ ಅಮೆರಿಕದ ಕೆಲ ಭಾಗದಲ್ಲಿ ಮತ್ತೆ ಕೊರೋನಾ ಹೆಚ್ಚಳಗೊಂಡಿದೆ. ಬ್ಲೂಮರ್ಗ್‌ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ನೀಡಿದ ವರದಿಯಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಅಮೆರಿಕದ ಕೆಲ ಭಾಗದಲ್ಲಿ ಕಳೆದ ಫೆಬ್ರವರಿ 1 ರಿಂದ 10 ವರೆಗೆ ದಾಖಲಾದ ಕೊರೋನಾ ಪ್ರಕರಣಕ್ಕೂ ಇದೀಗ ಮಾರ್ಚ್ 1 ರಿಂದ 10 ವರಗೆ ದಾಖಲಾದ ಕೊರೋನಾ ಪ್ರಕರಣಕ್ಕೂ ವ್ಯತ್ಯಾಸವಿದೆ. ಇಳಿಕೆಯಾಗಬೇಕಿದ್ದ ಕೊರೋನಾ ಪ್ರಕರಣ ಸಂಖ್ಯೆ ಮಾರ್ಚ್ 1 ರಿಂದ 10 ರ ಅವಧಿಯಲ್ಲಿ ಏರಿಕೆಯಾಗಿದೆ. ಸದ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಇದದ್ದರೂ 10 ದಿನಗಳ ಅಂಕಿ ಅಂಶದಲ್ಲಿ ಗಣನೀಯ ಏರಿಕೆ ಕಂಡಬರುತ್ತಿದೆ ಎಂದು ಅಮೆರಿಕ CDC ಅಧ್ಯಯನ ವರದಿಯಲ್ಲಿ ಹೇಳಿದೆ.

Covid 19 Crisis: ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!

ಕೊರೋನಾ ಹೆಚ್ಚಳವಾಗಿರುವ ಭಾಗದಲ್ಲಿನ ಚರಂಡಿ ನೀರುಗಳನ್ನು ಪರಿಶೀಲಿಸಲಾಗಿದೆ. ಈ ನೀರಿನಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಸದ್ಯ ಅಮೆರಿಕದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಅತೀ ವೇಗದಲ್ಲಿ ಹರಡುತ್ತಿಲ್ಲ. ಆದರೆ ಪ್ರತಿ ದಿನ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು CDC ವರದಿಯಲ್ಲಿ ಹೇಳಿದೆ.

ಅಮೆರಿಕದಲ್ಲಿನ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳು ಕೋವಿಡ್ ಮಾರ್ಗಸೂಚಿ ಪ್ರಕಾರ ಹಾಜರಾಗಲು ಸೂಚಿಸಿದೆ. ಇದೀಗ ಮತ್ತೊಂದು ಕೊರೋನಾ ಅಲೆ ಮನ್ಸೂಚನೆ ಕಾಣಿಸುತ್ತಿದೆ. ಹೀಗಾಗಿ ಅತೀವ ಎಚ್ಚರಿಕೆ ಅಗತ್ಯ ಎಂದು CDC ಸರ್ಕಾರಕ್ಕೆ ಸೂಚನೆ ನೀಡಿದೆ. 
 

Latest Videos
Follow Us:
Download App:
  • android
  • ios